ಇಡೀ ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಗ್ರಂಥ: ನಿವೃತ್ತ ನ್ಯಾ. ನಾಗಮೋಹನ್‍ದಾಸ್

ಬಾಗೇಪಲ್ಲಿ: ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವೇ ಅತ್ಯಂತ ಪವಿತ್ರವಾದ ಗ್ರಂಥವಾಗಿದೆ. ದೇಶದಲ್ಲಿ ವಿವಿಧ ದರ್ಮಗಳಿಗೆ ಬೇರೆ ಬೇರೆ ಗ್ರಂಥಗಳಿರಬಹುದು ಆದರೆ ಸರ್ವಕಾಲಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ಅತ್ಯಂತ ಶ್ರೇಷ್ಟ ಗ್ರಂಥ ಎಂಬುದನ್ನು ಮರೆಯಬಾರದು ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ದಲಿತ ಹಕ್ಕುಗಳ ಸಮಿತಿಯು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಬಲಪಂಥೀಯ ಸರಕಾರಗಳಿಂದ ಸಂವಿಧಾನಕ್ಕೆ ದಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ನಾವು ಅದನ್ನು ಕಾಪಾಡದೆ ಹೋದರೆ ದೇಶಕ್ಕೆ ಉಳಿಗಾಳವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನ ಕೇವಲ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಮಾತ್ರ ಅಲ್ಲ ದೇಶದ ಪ್ರತಿಯೊಬ್ಬ ನಾಗರೀಕನೂ ಅದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಇಂದು ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ವೈಷಮ್ಯ ಬೆಳೆಸುವ ಉನ್ನಾನ ನಡೆಯುತ್ತಿದೆ’ ಹೇಳಿದರು.

ಇಂದು ದೇಶದಲ್ಲಿ ಪೆಟ್ರೋಲ್. ಡೀಸೆಲ್ ಅಡುಗೆ ಎಣ್ಣೆ, ದಿನಸಿ ಸಾಮಾಗ್ರಿಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದರೂ ಯಾವ ಬಲಪಂಥೀಯನೂ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ ಜನರ ಮದ್ಯೆ ವೈಷಮ್ಯವನ್ನು ಉಂಟು ಮಾಡುವಲ್ಲಿ ನಿರತರಾಗಿದ್ದಾರೆ ನಾವು ಜಾಗೃತರಾಗಿ ಸರ್ವಾಧಿಕಾರಿ ಧೋರಣೆಯ ಬಗ್ಗೆ ದ್ವನಿ ಎತ್ತದೆ, ಒಗ್ಗಟ್ಟು ಇಲ್ಲದೆ ಹೋದರೆ ನಮ್ಮ ಬಾವಿ ನಾವೇ ತೋಡಿಕೊಳ್ಳುವಂತಾಗುತ್ತದೆ ಎಂದರು.

ಪ್ರಗತಿಪರ ಚಿಂತಕ ಪ್ರಜಾ ವೈದ್ಯ ಡಾ.ಅನಿಲ್‍ಕುಮಾರ್ ಆವುಲಪ್ಪ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಇಡೀ ಜಿಲ್ಲೆಯ ಎಲ್ಲಾ ವೈದ್ಯರನ್ನು ತಲಾ 20 ಹಳ್ಳಿಗಳನ್ನು ತೆಗೆದುಕೊಂಡು ಬಾಗೇಪಲ್ಲಿ ತಾಲ್ಲೂಕು ಜನರಿಗೆ ಉಚಿತ ಸೇವೆ ಮಾಡೋಣ ಎಂದು ಹೇಳಿದ್ದೆ. ಆದರೆ, ಯಾವೊಬ್ಬ ವೈದ್ಯನೂ ಸಹಾಯಕ್ಕೆ ಬರಲಿಲ್ಲ ನಾನೇ ತಾಲ್ಲೂಕುನಾದ್ಯಂತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮಾಡಿದೆ. ಆದರೆ ಅವರು ಹೊಟ್ಟೆ ತುಂಬಿದವರು, ನಾನು ಒಂದು ರೀತಿಯಲ್ಲಿ ಹೊಟ್ಟೆ ತುಂಬಿದವನೇ ಆದರೆ ಸಾದ್ಯವಾದಷ್ಟು ಜನರ ಸೇವೆ ಮಾಡಿದರೆ ನನಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸಹ ಸಂಚಾಲರಾದ ರಾಜಶೇಖರಮೂರ್ತಿ, ಎನ್.‌ ರಾಜಣ್ಣ, ಬಿಳ್ಳೂರು ನಾಗರಾಜು, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ, ಮುಖಂಡರಾದ ಅಶ್ವತ್ತನಾರಾಯಣ, ಮಂಜುನಾಥ, ಉತ್ತನ್ನ, ಅಶ್ವತ್ತಪ್ಪ, ರಾಮಚಂದ್ರ, ಮುನಿಯಪ್ಪ, ಲಕ್ಷ್ಮಣ, ಜಿ.ಕೃಷ್ಣಪ್ಪ, ಗಂಗುಲಪ್ಪ ಡಿ.ಸಿ.ಶ್ರೀನಿವಾಸ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *