ಕರ್ನಾಟಕದಲ್ಲಿ ₹8,000 ಕೋಟಿಯ ಬ್ಯಾಟರಿ ಉತ್ಪಾದನಾ ಘಟಕ ಸ್ಪಾಪಿಸಲಿರುವ ಐಬಿಸಿ:ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ಕರ್ನಾಟಕದಲ್ಲಿ ₹8,000 ಕೋಟಿ ಮೊತ್ತದ ಬ್ಯಾಟರಿ ಉತ್ಪಾದಕ ಘಟಕ ಸ್ಪಾಪಿಸಲು ಖ್ಯಾತ ಬ್ಯಾಟರಿ ತಯಾರಕ ಕಂಪನಿ ಇಂಟರ್‌ನ್ಯಾಷನಲ್‌  ಬ್ಯಾಟರಿ ಕಂಪನಿ (ಐಬಿಸಿ) ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕಂಪನಿ ನೋಂದಣಿ ಆಗಲಿಲ್ಲ ಎಂದು ಟೆಕ್ಕಿ ಬೇಸರ: ಕ್ಷಮೆಯಾಚಿಸಿದ ಸಚಿವ ಎಂ.ಬಿ.ಪಾಟೀಲ್‌

ಈ ಉತ್ಪಾದನಾ ಘಟಕ ಸುಮಾರು 100 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ ಎಂದು ಅವರು ಮೈಕ್ರೋಬ್ಲಾಗಿಂಗ್‌ ತಾಣ  ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಘಟಕದಲ್ಲಿ ಲೀಥಿಯಂ-ಅಯಾನ್‌ ಬ್ಯಾಟರಿಗಳನ್ನು ಉತ್ಪಾದಿಸಲಿದೆ. 2025ರ ವೇಳೆ ಉತ್ಪಾದನೆ ಪ್ರಾರಂಭವಾಗಲಿದೆ. 2028ರ ವೇಳೆಗೆ 10 ಗಿಗಾ ವ್ಯಾಟ್‌ ಸಾಮರ್ಥ್ಯದಷ್ಟು ಬ್ಯಾಟರಿ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ ಎಂದು ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯ ಆಯುಕ್ತ ಗುಂಜನ್‌ ಕೃಷ್ಣ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಜೂನ್‌ ತಿಂಗಳಲ್ಲಿ ಕಂಪನಿಯ ಪ್ರಮುಖರು ತಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *