ನಾನು ಬಿಜೆಪಿಯಲ್ಲೇ ಇರುತ್ತೇನೆ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ: ಸಚಿವ ವಿ.ಸೋಮಣ್ಣ

ಬೆಂಗಳೂರು  : ವಸತಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಸಾಕಷ್ಟು ಚರ್ಚೆಗಳಿಗೆ ಇಂದು ಸ್ವತಃ ಸಚಿವರೇ ನಾನು ಬಿಜೆಪಿಯಲ್ಲೇ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ನಾನು ಪ್ರಾಮಾಣಿಕ ವ್ಯಕ್ತಿ ಬಿಜೆಪಿ ಬಿಡುವುದಿಲ್ಲ. ನನ್ನನ್ನು ತೇಜೋವಧೆಯನ್ನು ಕೆಲವರು ನಡೆಸಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ದೂರುವ ಮೂಲಕ ಬಿಜೆಪಿಯಲ್ಲೇ ಉಳಿಯಲಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ :
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸತಿ ಸಚಿವ ಸೋಮಣ್ಣ ಅವರು ತಾವು ಕಾಂಗ್ರೆಸ್‌ಗೆ ಸೇರುತ್ತೇನೆ ಎಂಬ ವರದಿಗಳ ಬಗ್ಗೆ ಬೇಸರ ಹೊರ ಹಾಕಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಡಲಾಗುತ್ತಿದೆ. ನಾನು ಪ್ರಾಮಾಣಿಕ. ಬಿಜೆಪಿ ಬಿಡುವುದಿಲ್ಲ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದರು.

ನಾನು ಸಂಜೆ ಕಾಲೇಜಿಗೆ ಹೋಗುತ್ತಿದ್ದೆ ಎಂದ ಸೋಮಣ್ಣ :
ನಾನು ಯಾರ ಮುಲಾಜಿಗೂ ಒಳಗಾಗಿಲ್ಲ. ಪ್ರಾಮಾಣಿಕವಾಗಿ ಜನ ಸೇವೆ ಮಾಡಿದ್ದೇನೆ. ಬೆಂಗಳೂರಿಗೆ ನಾನು ಹೊಟ್ಟೆಪಾಡಿಗೆ ಬಂದೆ 6ಇಂಟು 8 ಅಡಿ ಜಾಗದಲ್ಲಿ ವಾಸ ಮಾಡಿದವನು. ಸುಳ್ಳು ಹೇಳಲು ನನಗೆ ಬರುವುದಿಲ್ಲ. ಶಿವಕುಮಾರ್ ಸ್ವಾಮೀಜಿ ನನಗೆ ಆದರ್ಶ.ನನ್ನ ತಾಯಿ ನನಗೆ ಆದರ್ಶ ಕಲಿಸಿದ್ದಾರೆ. ಸಂಜೆ ಕಾಲೇಜಿಗೂ ಹೋಗುತ್ತಿದ್ದೆ ಎಂದು ಕಣ್ಣೀರಿಟ್ಟರು.

ದೇವೇಗೌಡರು ನನ್ನನ್ನು ರಾಜಕೀಯವಾಗಿ ಕೈ ಹಿಡಿದಿದ್ದರು:
ರಾಜಕಾರಣದಲ್ಲಿ ಮೊದಲು ನಾನು ಕಾಪೋರೇಟರ್‌ ಆಗಿ ನಾನು ಆಯ್ಕೆಯಾದೆ. 1994ರಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮತಗಳಿಂದ ಗೆದ್ದೆ. ಮೂರು ಮರ್ಡರ್ ಆದಾಗ ನನ್ನ ಮೇಲೆ ಅಬ್ದುಲ್ ಅಜೀಂ ನನ್ನ ಮೇಲೆ ಆರೋಪ ಮಾಡಿದ್ದರು. ದೇವೇಗೌಡರು ನನ್ನನ್ನು ರಾಜಕೀಯವಾಗಿ ಕೈ ಹಿಡಿದಿದ್ದರು. ಕಾಂಗ್ರೆಸ್‌ನಿಂದ ಎರಡು ಬಾರಿ ಗೆದ್ದೆ. ಆಮೇಲೆ ಸೋತೆ. ಸೋತವನನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಿದರು.

ಬೇರೆ ಪಕ್ಷ ಸೇರುತ್ತೇನೆ ಎಂಬುದಕ್ಕೆ ಇತಿಶ್ರೀ ಹಾಡೋಣ:
ನಾನು ನೇರವಾಗಿ ಮಾತನಾಡುತ್ತೇನೆ ಅದು ಕೆಲವರಿಗೆ ಇಷ್ಟ ಆಗಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಚಿತಾವಣೆ ಮಾಡುವ ಕೆಲಸ ಮಾಡಿಲ್ಲ. ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಅದೇ ನನ್ನ ತಾಯಿ ಎಂಬಂತೆ ನೋಡುತ್ತೇನೆ. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅದರೂ ತೇಜೋವಧೆ ನಡೆದಿದೆ ಎಂದರು. ನಾನು ಪಕ್ಷ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ, ನಡ್ಡಾ ಜೀ ನಮ್ಮ ನಾಯಕರು. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಬೇರೆ ಪಕ್ಷ ಸೇರುತ್ತೇನೆ ಎಂಬುದಕ್ಕೆ ಇತಿಶ್ರೀ ಹಾಡೋಣ ಎಂದರು.

Donate Janashakthi Media

Leave a Reply

Your email address will not be published. Required fields are marked *