ಶಿರಸಿ: ‘ವಿಧಾನ ಪರಿಷತ್ತಿನಲ್ಲಿ ಈ ಹಿಂದೆ ಪಕ್ಷಗಳ ಬಲಾಬಲ ಬದಲಾದರೂ ಸಭಾಪತಿಗೆ ಬದಲಿಸಿರಲಿಲ್ಲ. ಈಗ ಕಾಂಗ್ರೆಸ್‍ಗೆ ಬಹುಮತ ಬಂದರೂ ನನಗೆ ಆತಂಕವಿಲ್ಲ. ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದರೆ, ತಕ್ಷಣವೇ ರಾಜೀನಾಮೆ ನೀಡುವೆ’ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಆಗಸ್ಟ್ 28ರಂದು ತಿಳಿಸಿದರು. ಸ್ಥಾನ
‘ಒಂದು ವರ್ಷ ಅಥವಾ ಹತ್ತು ವರ್ಷ ಸಭಾಪತಿಯಾದರೂ ಅಧಿಕಾರದ ಬಳಿಕ, ಮಾಜಿ ಎನ್ನುತ್ತಾರೆ. ಈ ಹಿಂದೆ ವಿ.ಎಸ್.ಉಗ್ರಪ್ಪ ಮತ್ತು ಡಿ.ಎಚ್.ಶಂಕರಮೂರ್ತಿ ಅವರನ್ನು ಪಕ್ಷ ಬಲಾಬಲ ಬದಲಾದಾಗ ಅಧಿಕಾರದಿಂದ ಇಳಿಸಲಾಗಿತ್ತು. ಈಗ ಕಾಂಗ್ರೆಸ್ ಅಂಥ ಕೆಲಸ ಮಾಡಿದಲ್ಲಿ, ಇತಿಹಾಸ ನಿರ್ಮಿಸಿದಂತಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ವಾರ್ಡನ್ ಬದಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ
‘ಇಂದು ಪರಿಷತ್‍ನಲ್ಲಿ ಅಲ್ಲದೇ, ಎಲ್ಲಿಯೂ ಮೌಲ್ಯ ಉಳಿದಿಲ್ಲ. ಎಲ್ಲವೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಮುಗಿದಿದೆ. ಈಗ ಹಣದ ಮತ ಹಾಕುವುದು, ಪಡೆಯುವುದು ನಡೆದಿದೆ’ ಎಂದರು.
ಇದನ್ನೂ ನೋಡಿ: 40 ವರ್ಷ ನಡೆದ ಕ್ರೈಮ್ 20 ದಿನದಲ್ಲಿ ಹೇಗೆ ಸಿಗುತ್ತೆ? ಅದಕ್ಕಿನ್ನೂ ಸಮಯ ಬೇಕು Janashakthi Media
