ಚೆನ್ನೈ: ನನ್ನ ತಂದೆ ನಾನು 8 ವರ್ಷದ ಹುಡುಗಿಯಾಗಿದ್ದಾಗ ನನಗೆ ಕಿರುಕುಳ ನೀಡಲು ಆರಂಭಿಸಿದ್ದ. ತಂದೆಯ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿ ಮಾತನಾಡಲು ಧೈರ್ಯ ಬಂದಿದ್ದೇ ನಾನು 15 ವರ್ಷ ಮುಟ್ಟಿದ್ದಾಗ ಎಂದು ಸಂದರ್ಶನವೊಂದರಲ್ಲಿ ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ತಮ್ಮ ಬಾಲ್ಯದಲ್ಲಿ ಆದಂತಹ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ
ಅಲ್ಲದೆ, ತನ್ನ ತಾಯಿ ಪಟ್ಟ ವೇದನೆಗಳ ಬಗ್ಗೆಯೂ ತಿಳಿಸಿರುವ ಖುಷ್ಬೂ ಸುಂದರ್, ನನ್ನ ತಾಯಿ ತಮ್ಮ ದಾಂಪತ್ಯ ಜೀವನದಲ್ಲಿ ಅತಿ ಹೆಚ್ಚು ನಿಂದನೆಯನ್ನು ಅನುಭವಿಸಿದರು. ನನ್ನ ತಾಯಿಯ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಹೊಡೆಯುವುದು ಅಪರಾಧ ಆದರೆ ಆ ವ್ಯಕ್ತಿ, ತಮ್ಮ ಜನ್ಮ ಹಕ್ಕು ಎನ್ನುವ ರೀತಿ ವರ್ತಿಸುತ್ತಿದ್ದ. ಬಾಲ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಮಾನಸಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ ಆದರಿಂದ ಇಡೀ ಜೀವನ ಹೆದರಿಕೊಳ್ಳಲು ಆರಂಭಿಸುತ್ತಾರೆ.
ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕನಿಂದ ಪದವಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ
ಕುಟುಂಬದವರ ಭಯದಿಂದ ಖುಷ್ಬೂ ಕಿರುಕುಳದ ಬಗ್ಗೆ ಹೇಳಿಕೊಳ್ಳಲು ಹೆದರಿ ಇತ್ತು ಎಂದು ತಿಳಿಸಿರುವ ಅವರು, 8ನೇ ವಯಸ್ಸಿನಲ್ಲಿದ್ದಾಗಲೇ ನನಗೆ ತಪ್ಪುಗಳನ್ನು ಎದುರಿಸುವ ನಿಲುವು ಬೆಳೆಯತೊಡಗಿತು. ಆದರೆ ಕುಟುಂಬದ ಇತರರು ನನ್ನಿಂದ ನೋವು ಅನುಭವಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಇದು ನನ್ನ ಹಲವು ವರ್ಷಗಳವರೆಗೆ ನನ್ನ ಬಾಯಿ ಮುಚ್ಚಿಸಿತ್ತು. ನಮ್ಮ ಬಳಿ ಏನಂದ್ರೆ ಏನೂ ಇರಲಿಲ್ಲ. ಆ ಸಮಯದಲ್ಲಿ ನಮ್ಮನ್ನು ಬಿಟ್ಟು ಹೋದರು. ಒಂದು ಹೊತ್ತು ಊಟಕ್ಕೂ ತುಂಬಾ ಯೋಚನೆ ಮಾಡಬೇಕಿತ್ತು. 16 ವರ್ಷದ ಹುಡುಗಿ ಆಗಿದ್ದಾಗ ಜೀವನ ಪಾಠ ಕಲಿಸಿತ್ತು ಎಂದು ತಾವು ಎದುರಿಸಿದ ಸಂಕಷ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಖುಷ್ಬೂ ಸುಂದರ್ ಮುಂಬೈ ಮೂಲದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ನಿಖತ್ ಖಾನ್. ಸದ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಅವರು, ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ