ಮಂಡ್ಯ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಆಪರೇಷನ್ ಹಸ್ತ ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ, ಯಾರೂ ನನಗೆ ಕಾಂಗ್ರೆಸ್ಗೆ ಆಹ್ವಾನ ನೀಡಿಲ್ಲ. ನಾನು ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ ಹೊರತು ಬಿಜೆಪಿಯ ಸದಸ್ಯೆಯಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಆಗಸ್ಟ್-19 ರಂದು ಹೇಳಿಕೆ ನೀಡಿದ್ದಾರೆ.
