ಹೈದರಾಬಾದ್: ಇಲ್ಲಿನ ನಾಂಪಲ್ಲಿಯ ಜನವಸತಿ ಕಟ್ಟಡವೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ರಾಸಾಯನಿಕಗಳನ್ನು ಒಳಗೊಂಡಿರುವ ಕೆಲವು ಡ್ರಮ್‌ಗಳನ್ನು ಸಂಗ್ರಹಿಸಲಾಗಿದ್ದು ಬೆಂಕಿಗೆ ಕಾರಣ ಎಂದು ವರದಿಗಳು ಸೂಚಿಸಿವೆ.
ನೆಲಮಹಡಿಯ ಬೆಂಕಿ ಕಟ್ಟಡದ ಇತರ ಮಹಡಿಗಳಿಗೆ ಬೆಂಕಿ ವ್ಯಾಪಿಸಿದ್ದು ಇದು ಸಾವುನೋವಿಗೆ ಕಾರಣವಾಗಿದೆ. ಸಂತ್ರಸ್ತರಲ್ಲಿ ಹೆಚ್ಚಿನವರು ಮೊದಲ ಮತ್ತು ಎರಡನೇ ಮಹಡಿಗಳನ್ನು ಬಾಡಿಗೆದಾರರಾಗಿ ಇದ್ದವರಾಗಿದ್ದು, ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ವಾಸಿಸುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಳ್ಳಾರಿ| ಹಾಡಹಗಲೇ ಬಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಪ್ರಕರಣ ದಾಖಲು
ಕಟ್ಟಡದಿಂದ 20 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆಲಮಹಡಿಯನ್ನು ಆಯಿಲ್ ಡ್ರಮ್ ಮತ್ತು ಡಬ್ಬಿಗಳ ಗೋಡೌನ್ ಆಗಿ ಬಳಸುತ್ತಿದ್ದರು ಎಂದು ವರದಿಯಾಗಿದೆ. ಅವಘಡದ ನಂತರ ಕಟ್ಟಡ ಮಾಲೀಕ ರಮೇಶ್ ಜೈಸ್ವಾಲ್ ಪರಾರಿಯಾಗಿದ್ದಾನೆ ಎಂದು ವರದಿಗಳು ಹೇಳಿವೆ.
Around 7 persons are suspected to have been killed in a fire mishap in a chemical godown in Bazarghat of Hyderabad’s Nampally. While 16 persons have been rescued casualties are expected to rise #Hyderabad #ChemicalGowdown #FireAccident @DeccanHerald pic.twitter.com/3oO18cH2jp
— SNV Sudhir (@sudhirjourno) November 13, 2023
ಕಟ್ಟಡದಲ್ಲಿ ರಾಸಾಯನಿಕಗಳ ಸಂಗ್ರಹವನ್ನು ಅಕ್ರಮವಾಗಿ ಮಾಡಿದ್ದು ಅವಘಡಕ್ಕೆ ಕಾರಣವಾಗಿರಬಹುದು ಎಂದು ಡಿಜಿ (ಅಗ್ನಿಶಾಮಕ ಸೇವೆಗಳು) ನಾಗಿ ರೆಡ್ಡಿ ಅವರು ಹೇಳಿದ್ದಾರೆ. “ಕಟ್ಟಡದ ಸ್ಟಿಲ್ಟ್ ಪ್ರದೇಶದಲ್ಲಿ ರಾಸಾಯನಿಕಗಳನ್ನು ಸಂಗ್ರಹಿಸಲಾಗಿದೆ. ಈ ರಾಸಾಯನಿಕಗಳಿಂದ ಬೆಂಕಿ ಸಂಭವಿಸಿದೆ. ಒಟ್ಟು 21 ಜನರನ್ನು ರಕ್ಷಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಘಟನೆ ಬಗ್ಗೆ ತೆ ನಾಂಪಲ್ಲಿ ಅಗ್ನಿ ದುರಂತದಲ್ಲಿ ಸಾವಿಗೀಡಾದವರಿಗೆ ತೆಲಂಗಾಣ ಸಿಎಂ ಕೆಸಿ ರಾವ್ ಸಂತಾಪ ಸೂಚಿಸಿದ್ದಾರೆ. ಕೂಡಲೇ ಎಲ್ಲಾ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ.
ಪೊಲೀಸರ ಪ್ರಕಾರ, ಹೈದರಾಬಾದ್‌ನ ನಾಂಪಲ್ಲಿಯ ಬಜಾರ್‌ಘಾಟ್‌ನಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿನ ಸ್ಟೋರೇಜ್ ಗೋಡೌನ್‌ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡ ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ.
ಈ ಮಧ್ಯೆ, ಕಟ್ಟಡದಲ್ಲಿ ಸಿಲುಕಿದ್ದ ಮಗು ಮತ್ತು ತಾಯಿಯನ್ನು ಅಗ್ನಿಶಾಮಕ ದಳದವರು ರಕ್ಷಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಸುದ್ದಿ ಸಂಸ್ಥೆ ANI ಬಿಡುಗಡೆ ಮಾಡಿದ ಸ್ಥಳದ ದೃಶ್ಯಾವಳಿಗಳು, ರಕ್ಷಣಾ ತಂಡವು ತಾತ್ಕಾಲಿಕ ಮೆಟ್ಟಿಲನ್ನು ಬಳಸಿ ತಾಯಿ ಮತ್ತು ಮಗುವನ್ನು ಕಿಟಕಿಯಿಂದ ಹೊರತರುತ್ತಿರುವುದು ದಾಖಲಾಗಿದೆ. ಹೈದರಾಬಾದ್
ವಿಡಿಯೋ ನೋಡಿ: ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media