ನವದೆಹಲಿ: ಇತ್ತೀಚೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಕುಸಿದ ಪರಿಣಾಮ ಅಪಘಾತ ಸಂಭವಿಸಿದ್ದ ಘಟನೆಗೆ ಉಪಕರಣಗಳ ಸರಿಯಾದ ನಿರ್ವಹಣೆ ಮಾಡದಿರುವುದೇ ಈ ಗಣಿದುರಂತಕ್ಕೆ ಕಾರಣ ಎಂದು ಕಾರ್ಮಿಕರು ದೂಷಿಸಿದ್ದಾರೆ. ಜುಂಜುನು
ಕಳೆದ ಮಂಗಳವಾರ ಏ.14 ರ ರಾತ್ರಿ ಈ ದುರ್ಘಟನೆ ನಡೆದಿತ್ತು. ಅದರಲ್ಲಿ ಲಿಫ್ಟ್ ಕುಸಿದು ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (ಎಚ್‌ಸಿಎಲ್) ನ ಹಿರಿಯ ವಿಚಕ್ಷಣಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮೃತ ಅಧಿಕಾರಿ ಸೇರಿದಂತೆ ಒಟ್ಟು 15 ಮಂದಿ ಗಣಿಯಲ್ಲಿ ಸಿಲುಕಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅವರನ್ನು ಗಣಿಯಿಂದ ಹೊರತೆಗೆಯಲಾಯಿತು. ಈ ರಕ್ಷಣಾ ಕಾರ್ಯ ನಿನ್ನೆ ಮೇ 15ರ ಬುಧವಾರ ಮಧ್ಯಾಹ್ನದವರೆಗೆ ಮುಂದುವರೆಯಿತು.
ಮೃತ ಅಧಿಕಾರಿ, ಉಪೇಂದ್ರ ಪಾಂಡೆ, ಹೆಚ್‌ಸಿಎಲ್‌ನಲ್ಲಿ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಮುಖ್ಯ ವಿಜಿಲೆನ್ಸ್ ಅಧಿಕಾರಿ ಉಪೇಂದ್ರ ಪಾಂಡೆ ಅವರು ಕೋಲ್ಕತ್ತಾದಿಂದ ಗಣಿಯ ಪರಿಶೀಲನೆಗಾಗಿ ಬಂದಿದ್ದ ಜಾಗೃತ ತಂಡದ ಭಾಗವಾಗಿದ್ದರು, ಆಗ ಸುಮಾರು 577 ಮೀಟರ್‌ನಲ್ಲಿ ಲಿಫ್ಟ್ ಅಪಘಾತಕ್ಕೀಡಾಯಿತು. ಪಾಂಡೆ ಶವವನ್ನು ಗಣಿಯಿಂದ ಹೊರ ತೆಗೆಯಲಾಗಿದೆ..ಕೋಲ್ಕತ್ತಾದ ವಿಜಿಲೆನ್ಸ್ ತಂಡದ ಭಾಗವಾಗಿ ಗಣಿ ತಪಾಸಣೆ ನಡೆಸುತ್ತಿದ್ದಾಗ ಸುಮಾರು 577 ಮೀಟರ್‌ನಲ್ಲಿ ಲಿಫ್ಟ್ ಅಪಘಾತಕ್ಕೀಡಾಗಿತ್ತು.
ಇನ್ನು ಇದರಲ್ಲಿ ನೆಲದಡಿ ಸಿಕ್ಕಿಬಿದ್ದಿದ್ದ ವ್ಯಕ್ತಿಗಳನ್ನು ಗಣಿಯಿಂದ ಹೊರತೆಗೆಯಲಾಯಿತು. ಮೊದಲಿಗೆ, ಮೂವರು ಅಧಿಕಾರಿಗಳನ್ನು ರಕ್ಷಿಸಿ ಗಾಯಾಳುಗಳನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಇವರಲ್ಲಿ ಬಹುತೇಕರ ಕಾಲುಗಳು ಮುರಿದಿದ್ದು ಗಾಯಗಳಾಗಿವೆ ಎಂದು ವರದಿಯಾಗಿದೆ. ಇನ್ನು ಎರಡನೇ ಸುತ್ತಿನ ರಕ್ಷಣಾ ಕಾರ್ಯಾಚರಣೆಯಲ್ಲಿ, ಐದು ಜನರನ್ನು ಹೊರತೆಗೆದು, ಉಳಿದವರನ್ನು ಮೂರನೇ ಸುತ್ತಿನಲ್ಲಿ ರಾತ್ರಿಯ ತೀವ್ರ ಕಾರ್ಯಾಚರಣೆಯಲ್ಲಿ ರಕ್ಷಿಸಲಾಯಿತು.
ಖೇತ್ರಿ ಕಾಪರ್ ಕಾಂಪ್ಲೆಕ್ಸ್ ಘಟಕದ ಮುಖ್ಯಸ್ಥ ಜಿ.ಡಿ.ಗುಪ್ತಾ ಮತ್ತು ಕೋಲಿಹಾನ್ ಗಣಿ ಉಪ ಪ್ರಧಾನ ವ್ಯವಸ್ಥಾಪಕ ಎ.ಕೆ.ಶರ್ಮಾ ಸೇರಿದ್ದಾರೆ. ಜಾಗೃತ ದಳದ ಜತೆ ಛಾಯಾಗ್ರಾಹಕನಾಗಿ ಗಣಿ ಪ್ರವೇಶಿಸಿದ್ದ ಪತ್ರಕರ್ತನೂ ಸಿಲುಕಿಕೊಂಡಿದ್ದನು.
ಗಣಿ ದುರಂತವನ್ನು ಪರಿಗಣಿಸಿದ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, “ಜುಂಜುನುವಿನ ಖೇತ್ರಿಯಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಹಗ್ಗದ ತುಂಡಿನಿಂದ ಉಂಟಾದ ಅಪಘಾತದ ಬಗ್ಗೆ ಮಾಹಿತಿಯನ್ನು ಸ್ವೀಕರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.ಕೇಂದ್ರ ಸರ್ಕಾರದಲ್ಲಿ ಗಣಿ ಕಾರ್ಯದರ್ಶಿ ವಿ.ಎಲ್. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಕಾಂತರಾವ್ ಹೇಳಿದ್ದಾರೆ.
ಇದನ್ನು ಓದಿ : ಲೋಕಸಭೆ ಚುನಾವಣೆ: ಬಿಜೆಪಿಯ ¼ ರಷ್ಟು ಅಭ್ಯರ್ಥಿಗಳು ಪಕ್ಷಾಂತರಿಗಳು
ಈ ಘಟನೆಗೆ ಕಾರಣವೇನು ಅನ್ನೋದನ್ನ ತಿಳಿಯಲು ಕೆಲವರು ಮುಂದಾದರು. ಆಗ ಹಳೆಯ ಸಲಕರಣೆಗಳು ಮತ್ತು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಗಣಿ ಕಾರ್ಮಿಕರೊಬ್ಬರು, “ಒಂದು ಸೆಟ್ ಮೆಟ್ಟಿಲುಗಳ ಮೂಲಕ ತಲುಪಲು ಸಾಧ್ಯವಾಯಿತು. ಆದರೆ ಮೆಟ್ಟಿಲುಗಳು ತುಂಬಾನೇ ಕಡಿದಾಗಿದ್ದವು. ಗಾಯಗೊಂಡವರನ್ನು ಮೇಲಕ್ಕೆ ಸಾಗಿಸಲು ಸಾಧ್ಯವಾಗದಿದ್ದಾಗ, ನಮ್ಮಲ್ಲಿ ಕೆಲವರು ಒಬ್ಬೊಬ್ಬರಾಗಿ ಕೆಳಗಿಳಿದರು. ಸ್ಟ್ರೆಚರ್‌ಗಳ ನಾಲ್ಕೂ ಕಡೆ ಹಗ್ಗಗಳನ್ನು ಜೋಡಿಸಿ ಗಾಯಾಳುಗಳನ್ನು ಕಟ್ಟಿ. ಮೇಲಿದ್ದ ಜನರು ಅವರನ್ನು ಎಳೆದುಕೋಂಡರು ಎಂದು ವಿವರಿಸಿದ್ದಾರೆ.
ಎಚ್‌ಸಿಎಲ್‌ನ ಸಹಾಯಕ ಜನರಲ್ ಮ್ಯಾನೇಜರ್ ಮೀನಾ, ಅವರ ಕಾಲಿಗೆ ಗಾಯಗಳಾಗಿದ್ದು, ಪ್ರಸ್ತುತ ಕೆಸಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, “ಇದ್ದಕ್ಕಿದ್ದಂತೆ ನಾವೆಲ್ಲ ಒಳಗೆ ಬಿದ್ದು ನಮಗೆಲ್ಲ ಉಸಿರುಗಟ್ಟಿದ್ದೆವು. ಕೆಲವು ರಕ್ಷಕರು ಮೆಟ್ಟಿಲುಗಳ ಕೆಳಗೆ ಬಂದಾಗ ನಾವು ಭರವಸೆ ಹೊಂದುವಂತಾಯಿತು. ನಮ್ಮಲ್ಲಿ ಹಲವರು ಗಾಯಗೊಂಡರು ಮತ್ತು ಇನ್ನು ಕೆಲವರಿಗೆ ನಡೆಯಲಾಗಲಿಲ್ಲ. ನನಗೆ ಯಾವುದೇ ಗಂಭೀರ ಗಾಯಗಳಾಗಿಲ್ಲದ್ದರಿಂದ ನಾನು ಕೆಸಿಸಿಯಲ್ಲಿ ಉಳಿಯಲು ನಿರ್ಧರಿಸಿದೆ ಎಂದರು.
ಹಿಂದ್ ಮಜ್ದೂರ್ ಸಭಾದ ಜಿಲ್ಲಾಧ್ಯಕ್ಷ ರವೀಂದ್ರಕುಮಾರ್ ಮಾತನಾಡಿ, ಗಣಿಗಳಲ್ಲಿನ ಬಹುತೇಕ ಉಪಕರಣಗಳನ್ನು ಮೇಲ್ದರ್ಜೆಗೇರಿಸಬೇಕಿದೆ. “ಸೋಮವಾರ 20 ಅಡಿಗಳಷ್ಟು ಲಿಫ್ಟ್ ಕುಸಿದಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಆ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಆಡಳಿತ ಮಂಡಳಿಗೆ ಇಂತಹ ಘಟನೆ ಗೊತ್ತಿದ್ದರೆ ಕ್ರಮಕೈಗೊಂಡು ಕಾಮಗಾರಿ ಸ್ಥಗಿತಗೊಳಿಸಬೇಕಿತ್ತು. ಗಣಿಗಳಲ್ಲಿನ ಹೆಚ್ಚಿನ ಉಪಕರಣಗಳನ್ನು ನವೀಕರಿಸಬೇಕಾಗಿದೆ. ನಮಗೆ ಸಂಬಂಧಿಕರು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಇದ್ದಾರೆ, ಅವರು ಇನ್ನೂ ಗಣಿಗಳಲ್ಲಿ ಕೆಲಸ ಮಾಡಬೇಕಾದ್ದರಿಂದ ಒಳಗೆ ಹೋಗುತ್ತಾರೆ. ತಾಮ್ರದ ಗಣಿಯಲ್ಲಿ ಇ ಲಿಫ್ಟ್ ಕುಸಿದು ವಿಜಿಲೆನ್ಸ್ ತಂಡ ಸೇರಿದಂತೆ 15 ಮಂದಿ ಸಿಲುಕಿದ್ದರು. ಸಿಕ್ಕಿಬಿದ್ದಿದ್ದ ಇತರ 14 ಅಧಿಕಾರಿಗಳನ್ನು ರಕ್ಷಿಸಲಾಗಿದೆ. ಜುಂಜುನು
ಸೋಮವಾರ ಗಣಿಯಲ್ಲಿ ಇದೇ ರೀತಿಯ ಲಿಫ್ಟ್ ಅಪಘಾತ ಸಂಭವಿಸಿದೆ ಎಂದು ಒಕ್ಕೂಟದ ಮುಖಂಡರೊಬ್ಬರು ಆರೋಪಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವು ಗಣಿ ಕಾರ್ಮಿಕರು ಗಣಿಗಾರಿಕೆ ಉಪಕರಣಗಳನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಜುಂಜುನು
ಇದನ್ನು ನೋಡಿ : ಪಂಜಾಬ್ ಲೋಕಸಭೆ : ” ದೆಲ್ಲಿ ದಾರಿ ಬಂದ್ ಮಾಡಿದ್ದ ಬಿಜೆಪಿಗೆ ಹಳ್ಳಿ ದಾರಿ ಬಂದ್ ” ವ್ಯಾಪಕಗೊಂಡ ಅನ್ನದಾತರ ಆಕ್ರೋಶ