ಬಾಕಿ ಸಂಬಳ ಕೇಳಿದ್ದಕ್ಕೆ ಹಲ್ಲೆ: ಮುಖಕ್ಕೆ ಉಗಿದು ಮೂತ್ರ ವಿಸರ್ಜನೆ ಮಾಡಿ ಅವಮಾನ

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ದಲಿತ ವ್ಯಕ್ತಿಯೊಬ್ಬರು ಕೋಳಿ ಫಾರಂನಲ್ಲಿ ತಾನು ಮಾಡಿದ ಕೆಲಸಕ್ಕೆ ಬಾಕಿ ಇರುವ ಸಂಬಳವನ್ನು ಕೇಳಿದ್ದಕ್ಕಾಗಿ ಮಾಲೀಕ ತಂದೆ-ಮಗ ಸೇರಿ ಹಲ್ಲೆ ಮಾಡಿದ್ದಲ್ಲದೇ ಮುಖಕ್ಕೆ ಉಗಿದು ಮೂತ್ರ ವಿಸರ್ಜನೆ ಮಾಡಿ ಅಮಾನವೀಯತೆ ಕೃತ್ಯ ನಡೆದಿದೆ. ಸಂಬಳ 

ತಾನು ಮಾಡಿದ ಕೆಲಸಕ್ಕೆ ಬಾಕಿ ಇರುವ ಸಂಬಳ ಕೇಳಿದ ಒಂದೇ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನಿಗೆ ಮನಸೋಇಚ್ಛೆ ಹಲ್ಲೆ ಮಾಡಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ನಾಚಿಕೆಗೇಡಿನ ಕೃತ್ಯ ಬಿಹಾರದಲ್ಲಿ ನಡೆದಿದೆ.ಈ ಬಗ್ಗೆ ಸಂತ್ರಸ್ತ ಕಾರ್ಮಿಕ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಪ್ರಕಾರ, ಅಕ್ಟೋಬರ್ 4 ರಂದು ರಿಂಕು ಮಾಂಝಿ ಎಂಬ ವ್ಯಕ್ತಿ ಆರೋಪಿ ರಮೇಶ್ ಪಟೇಲ್ ಎಂಬಾತನ ಕೋಳಿ ಫಾರಂಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ರಿಂಕು ಮಾಂಝಿ ಅವರು ತಾನು ಮಾಡಿದ ಕೆಲಸಕ್ಕೆ ವೇತನ ಕೇಳಿದಾಗ ಸಿಟ್ಟಿಗೆದ್ದ ಕೋಳಿ ಫಾರಂ ಮಾಲೀಕ ರಮೇಶ್ ಪೇಟೇಲ್ ಮತ್ತು ಆತನ ಸಹೋದರ ಅರುಣ್ ಪಟೇಲ್ ಮತ್ತು ಆತನ ಮಗ ಗೌರವ್ ಕುಮಾರ್ ಸೇರಿ ರಿಂಕು ಮಾಂಝಿಗೆ ಮನಸೋಇಚ್ಛೆ ಥಳಿಸಿದ್ದಾರೆ, ರಮೇಶ್ ಪಟೇಲ್ ಮತ್ತು ಆತನ ಮಗ ಗೌರವ್ ಕುಮಾರ್ ಸಂತ್ರಸ್ತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಮುಖದ ಮೇಲೆ ಉಗಿದು ವಿಕೃತಿ ಮೆರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : ಮಲಯಾಳಂನ ಹಿರಿಯ ಖ್ಯಾತ ನಟ ಟಿ.ಪಿ.ಮಾಧವನ್ ನಿಧನ

ಸಂತ್ರಸ್ತ ರಿಂಕು ಮಾಂಝಿ ಅವರು ಅಕ್ಟೋಬರ್ 8 ರಂದು ಸಲ್ಲಿಸಿದ ದೂರಿನ ಜೊತೆಗೆ ಆರೋಪಿಯ ವಿರುದ್ಧ ಸಾಕ್ಷ್ಯವಾಗಿ ಕೃತ್ಯಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ದೂರನ್ನು ಸ್ವೀಕರಿಸಿದ ನಂತರ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಮುಜಾಫರ್‌ಪುರದ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ), ವಿಧಾ ಸಾಗರ್, ‘ಕರ್ಪೂರ್ ಉತ್ತರದಲ್ಲಿ ವಾಸಿಸುವ ರಮೇಶ್ ಪಟೇಲ್ ಎಂಬಾತ ದಿನಗೂಲಿ ಕಾರ್ಮಿಕರನ್ನು ಜಾತಿ ನಿಂದನೆ ಮಾತುಗಳಿಂದ ನಿಂದಿಸಿದ್ದಾರೆ, ರಿಂಕು ಎಂಬ ವ್ಯಕ್ತಿ ರಮೇಶ್ ಅವರ ಸ್ಥಳದಲ್ಲಿ ಕೆಲಸ ಮಾಡಿದ್ರು. ಅವರು ತಮ್ಮ ವೇತನಕ್ಕೆ ಬೇಡಿಕೆ ಇಟ್ಟಾಗ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಮುಜಾಫರ್‌ಪುರದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಮೋಟಾರ್‌ಸೈಕಲ್ ಕದ್ದಿದ್ದಾರೆ ಎಂಬ ಆರೋಪ ಮಾಡಿ ಇಬ್ಬರು ದಲಿತರನ್ನು ಕೆಲವರು ಹೀನಾಯವಾಗಿ ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದರು. ಸಂತ್ರಸ್ತರು ಗ್ರಾಮೀಣ ಜಾತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಘಟನೆಯ ನಂತರ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಇದನ್ನು ನೋಡಿ : ಹರಿಯಾಣ| ಜಮ್ಮು – ಕಾಶ್ಮೀರ | ಚುನಾವಣಾ ಫಲಿತಾಂಶದ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *