ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು

ಬೆಂಗಳೂರು :  ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಸೌಹಾರ್ದ ಕರ್ನಾಟಕ ವೇದಿಕೆಯು ಕರ್ನಾಟಕದಾದ್ಯಂತ ಬೃಹತ್‌ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಿದೆ. ಸೌಹಾರ್ದ ಬಯಸುವ ಶಾಂತಿಪ್ರಿಯ ಮನಸ್ಸುಗಳು ಕೈ ಕೈ ಬೆಸೆಯುವ ಮುಖಾಂತರ ಸರ್ವಜನಾಂಗದ ಶಾಂತಿಯ ತೋಟವನ್ನು ಕಟ್ಟಲು ಪಣತೊಟ್ಟಿವೆ. ಸೌಹಾರ್ದತೆಗಾಗಿ

ಬೆಂಗಳೂರು, ಬೀದರ್‌, ಕಲಬುರ್ಗಿ, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ್‌, ಹಾವೇರಿ, ಧಾರವಾಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಂತರ, ರಾಮನಗರ, ಶಿವಮೊಗ್ಗ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಪ್ರಗತಿಪರ ಸಾಹಿತಿಗಳು, ಚಿಂತಕರು,  ಮುಸ್ಲಿಂ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಕ್ಯಾಥೋಲಿಕ್ ಸಭಾ, ಸಿಐಟಿಯು,ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ, ಎಸ್‌ಎಫ್‌ಐ, ಸಮುದಾಯ, ಕರ್ನಾಟಕ ಮುಸ್ಲಿಂ ಜಮಾತೆ, ಆದಿವಾಸಿ ಹಕ್ಕುಗಳ ಸಮಿತಿ, ದಲಿತ ಹಕ್ಕುಗಳ ಸಮಿತಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳು  ಶಾಂತಿ ಸೌಹಾರ್ದತೆಗಾಗಿ ರಾಜ್ಯದಾದ್ಯಂತ ನಡೆದ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು.  ಸೌಹಾರ್ದತೆಗಾಗಿ

ವಿವಿಧ ಜಿಲ್ಲೆಗಳಲ್ಲಿ ನಡೆದ ಸೌಹಾರ್ದ ಮಾನವ ಸರಪಳಿಯ ಚಿತ್ರಗಳನ್ನು ಈ ಕೆಳಗಿನಂತೆ ಕಾಣಬಹುದು

ಬೆಂಗಳೂರು ದಕ್ಷಿಣ
ಬಾಗೇಪಲ್ಲಿ
ಕಲಬುರ್ಗಿ
ರಾಯಚೂರು
ಚಿತ್ರದುರ್ಗ
ಹಗರಿಬೊಮ್ಮನಹಳ್ಳಿ
ಬಳ್ಳಾರಿ

ಅಂಕೋಲ

 

 

ಈ ವಿಡಿಯೋ ನೋಡಿಸೌಹಾರ್ದ ಕರ್ನಾಟಕ : ಮಾನವಸರಪಳಿ ತಯಾರಿ ಕುರಿತು ಡಾ. ಎಸ್‌.ವೈ ಗುರುಶಾಂತ್‌ ಮಾತುಗಳು

 

 

Donate Janashakthi Media

Leave a Reply

Your email address will not be published. Required fields are marked *