ಸೆಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ಬೃಹತ್ ನ್ಯಾಯ ಸಮಾವೇಶ

– ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಆಯೋಜನೆ ಸೆಪ್ಟೆಂಬರ್ 
– ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವುಗಳ ಪ್ರತೀ ಯುಡಿಆರ್ ಸಂಖ್ಯೆಯ ಪ್ರತ್ಯೇಕ ತನಿಖೆಗೆ ಆಗ್ರಹ
– ಧರ್ಮಸ್ಥಳದ ಭೂಹಗರಣ, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ಬಡ್ಡಿ ದೌರ್ಜನ್ಯದ ತನಿಖೆ
– ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತರ ಮೇಲಿನ ಶೋಷಣೆ ನಿಲ್ಲಲಿ. ದಲಿತರಿಗೆ ಜಮೀನು ಮಂಜೂರಿಗೆ ಆಗ್ರಹ
– ಎಸ್ಐಟಿ ಮೇಲಿನ ಒತ್ತಡ, ಪಿತೂರಿಗಳು ನಿಲ್ಲಲಿ. ಆರೋಪಿಗಳನ್ನು ಬಿಟ್ಟು ದೂರುದಾರರು, ಸಾಕ್ಷ್ಯ ರಕ್ಷಕರನ್ನು, ಹೋರಾಟಗಾರರನ್ನು ಗುರಿಯಾಗಿಸುವ ಷಡ್ಯಂತ್ರ ನಿಲ್ಲಲಿ

ಬೆಂಗಳೂರು: ರಾಜ್ಯದ ಎಲ್ಲಾ ಜನಪರ ಸಂಘಟನೆಗಳು, ಎಡ, ದಲಿತ, ಹಿಂದುಳಿದ ಸಂಘಟನೆಗಳು, ವಿದ್ಯಾರ್ಥಿ, ಯುವಜನ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ ಸಂಘಟನೆಗಳ ಭಾಗಿದಾರಿಕೆಯಲ್ಲಿರುವ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ಸೆಪ್ಟೆಂಬರ್ 25 ರ ಗುರುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಬೃಹತ್ ‘ನ್ಯಾಯ ಸಮಾವೇಶ’ ಹಮ್ಮಿಕೊಂಡಿದೆ. ಸೆಪ್ಟೆಂಬರ್ 

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವು, ಧರ್ಮಸ್ಥಳ ಭೂ ಅಕ್ರಮ, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯ, ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಕೊಲೆಗಳಖು, ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ಸಮಗ್ರ ತನಿಖೆಗೆ ಆಗ್ರಹಿಸಿ ನ್ಯಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಮಾಜಿ ಸಂಸತ್ ಸದಸ್ಯರೂ, ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ ಸುಭಾಷಿಣಿ ಅಲಿಯವರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 

ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ರಾಜ್ಯ ಸರ್ಕಾರವು ಎಸ್ಐಟಿ ರಚಿಸಿದ್ದು, ಅದರಂತೆ ತನಿಖೆ ನಡೆಬೇಕಿದೆ. ಆದರೆ, ಪಟ್ಟಭದ್ರ ಶಕ್ತಿಗಳು SIT ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಮಂಡಳಿ ಹಣ ದುರುಪಯೋಗ ತಪ್ಪಿತಸ್ಥರ ಮೇಲೆ ಜರಗಿಸಿ: ಶಬ್ಬೀರ್

ದೂರುದಾರರು, ಸಾಕ್ಷಿದಾರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನವೂ ಆಗುತ್ತಿದೆ. ಕೊಲೆ, ದೌರ್ಜನ್ಯಗಳ ಹಿಂದೆ ಭೂ ಅಕ್ರಮಗಳು, ಲೈಂಗಿಕ ದೌರ್ಜನ್ಯಗಳು, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಯ ಕಾರಣಗಳಿದ್ದು, ಎಸ್ಐಟಿ ಈ ನಿಟ್ಟಿನಲ್ಲೂ ತನಿಖೆ ನಡೆಸಬೇಕು ಎಂದು ನ್ಯಾಯ ಸಮಾವೇಶ ಆಗ್ರಹಿಸುತ್ತದೆ.

ನ್ಯಾಯ ಸಮಾವೇಶದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಹೋರಾಟಗಾರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಕೀಲರು, ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಈ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ದೂರು ನೀಡದ ನೂರಾರು ಮಂದಿ ಧರ್ಮಸ್ಥಳ ಭೂ ಅವ್ಯವಹಾರದ ಸಂತ್ರಸ್ತರು, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಯ ಸಂತ್ರಸ್ತರೂ ಕೂಡಾ ಈ ನ್ಯಾಯ ಸಮಾವೇಶಕ್ಕೆ ಆಗಮಿಸಲಿದ್ದಾರೆ.

ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಡಿ ನಡೆಯುತ್ತಿರುವ ನ್ಯಾಯ ಸಮಾವೇಶಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದಲಿತ ಸಂಘರ್ಷ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು, ದಲಿತ ಹಕ್ಕುಗಳ ಹೋರಾಟ ಸಮಿತಿ, ಸಮುದಾಯ ಕರ್ನಾಟಕ, ಕರ್ನಾಟಕ ವರ್ಕರ್ಸ್ ಯೂನಿಯನ್, ಸಮುದಾಯ ಬೆಂಗಳೂರು, ಸಿಪಿಐಎಂ, ಸಿಪಿಐ ಸೇರಿದಂತೆ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇದನ್ನೂ ನೋಡಿ:ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

Donate Janashakthi Media

Leave a Reply

Your email address will not be published. Required fields are marked *