ಕಲಬುರಗಿ: ಜಿ 20 ಕಾರ್ಯಕ್ರಮಕ್ಕೆ ಕೇಂದ್ರ ಆಹ್ವಾನ ನೀಡದಿರೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ” ಜಿ20 ಸಭೆಗೆ ಆಹ್ವಾನ ಇಲ್ಲದೆ ನಾನು ಹೇಗೆ ಹೋಗಲಿ ಎಂದು ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ರೀತಿ ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು. ಇಂತಹ ರಾಜಕಾರಣ ಮಾಡೋದು ಯಾರಿಗೂ ಸರಿಯಲ್ಲ, ದೇಶದಲ್ಲಿ ಪ್ರಪಂಚದಲ್ಲಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರೋದು ಒಳ್ಳೆಯದ್ದು ಎಂದು ಹೇಳಿದರು.
ಇನ್ನು, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಇಬ್ಬರು ಒಂದಾಗಿದ್ದಾರೆ ಎಂದು ಪೇಪರ್ನಲ್ಲಿ ನೋಡಿದೆ. ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ. ಅವರಿಬ್ಬರು ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟು ಸೀಟ್ ಅವರು ಕೇಳ್ತಾರೆ ಇವರು ಎಷ್ಟು ಕೊಡ್ತಾರೆ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ. ಆದರೆ ನಮ್ಮನ್ನು ಯಾರು ಹತ್ತಿಕ್ಕುವುದಕ್ಕೆ ಆಗೋದಿಲ್ಲ. ದೇಶದಲ್ಲಿ 28 ಪಾರ್ಟಿ ಒಂದಾಗಿ ಚುನಾವಣೆ ಎದುರಿಸೋದಕ್ಕೆ ಮುಂದಾಗಿದ್ದೇವೆ. ನಾವು ಶೇ 60ರಷ್ಟು ಮತಗಳನ್ನು ಪಡೆಯಬೇಕು ಎಂದು ಲೆಕ್ಕಾಚಾರ ಇದೆ. ಇಂಡಿಯಾ ಒಕ್ಕೂಟದ ನಾಲ್ಕನೇ ಮೀಟಿಂಗ್ ಕೂಡ ಮಾಡ್ತಿದ್ದೇವೆ. ನಾವೆಲ್ಲ ಒಂದಾಗಿ ಫೈಟ್ ಮಾಡೋದಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ವಿಪಕ್ಷಗಳ ನಾಯಕರಿಂದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ – ಮಲ್ಲಿಕಾರ್ಜುನ ಖರ್ಗೆ
ದೇಶಕ್ಕೆ ಭಾರತ್ ಎಂದು ಮರುನಾಮಕರಣ ಮಾಡುವ ವಿವಾದದ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆಯವರು, “ಭಾರತ್ ಏನು ಸಂವಿಧಾನದಲ್ಲಿ ಇಲ್ಲವಾ? ಹಾಗಾದ್ರೆ ಸ್ಟಾರ್ಟಪ್ ಇಂಡಿಯಾ , ಡಿಜಿಟಲ್ ಇಂಡಿಯಾ ಅಂತಾ ಯಾಕೆ ಹೆಸರು ಇಟ್ಟಿದ್ದಾರೆ. ಭಾರತ್ ಜೋಡೊ ಅಂತಾ ಇಡೀ ದೇಶದಲ್ಲಿ ನಾವೇ ಸಂಚಾರ ಮಾಡಿದ್ದೇವೆ ” ಎಂದರು. ಜಿ20 ಸಭೆ