ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್‌ವರೆಗೆ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದು, ಈ ಪ್ರವಾಸಗಳಿಗೆ ಸುಮಾರು 258 ಕೋಟಿ ರೂ. ಖರ್ಚಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. ಮೋದಿ
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದು, ಪ್ರಧಾನಮಂತ್ರಿ ಅವರ ವಿದೇಶಿ ಪ್ರವಾಸಗಳ ಖರ್ಚು ವೆಚ್ಚವನ್ನು ದೇಶವಾರು ವಿಂಗಡಿಸಲಾಗಿದೆ. ಈ ಪ್ರವಾಸಗಳಲ್ಲಿ ಅಧಿಕೃತ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರ ಖರ್ಚು ಸೇರಿವೆ.
ಇದನ್ನು ಓದಿ :-ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ
ಜೂನ್ 2023 ರಲ್ಲಿ ಪ್ರಧಾನಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಒಂದೇ ಭೇಟಿಗೆ ಅತಿ ಹೆಚ್ಚು 22 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ವರ್ಷಗಳಲ್ಲಿ ಪ್ರಧಾನಿ ಮೋದಿ ಜರ್ಮನಿ, ಕುವೈತ್, ಡೆನ್ಮಾರ್ಕ್, ಫ್ರಾನ್ಸ್, ಯುಎಇ, ಉಜ್ಬೇಕಿಸ್ತಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಗ್ರೀಸ್, ಪೋಲೆಂಡ್, ಉಕ್ರೇನ್, ರಷ್ಯಾ, ಇಟಲಿ, ಬ್ರೆಜಿಲ್ ಹಾಗೂ ಗಯಾನಾ ದೇಶಗಳಿಗೆ ಭೇಟಿ ನೀಡಿದ್ದಾರೆ.
ಮೋದಿ ಅವರ ಪೋಲೆಂಡ್ ಭೇಟಿಗೆ 10.10 ಕೋಟಿ ರೂ. ಖರ್ಚಾಗಿದ್ದರೆ, ಉಕ್ರೇನ್ (2.52 ಕೋಟಿ), ರಷ್ಯಾ (5.34 ಕೋಟಿ), ಇಟಲಿ (14.36 ಕೋಟಿ), ಬ್ರೆಜಿಲ್ (5.51 ಕೋಟಿ) ಹಾಗೂ ಗಯಾನಾ (5.45 ಕೋಟಿ) ದೇಶಗಳಿಗೆ ಪ್ರಮುಖ ವೆಚ್ಚವಾಗಿದೆ.
ಇದನ್ನು ಓದಿ :-ಕುಂಪಲ – ಬಗಂಬಿಲ ನಡುವೆ ಓಡಾಡುವ ಖಾಸಗೀ, ಸರಕಾರಿ ಬಸ್ಸುಗಳ ಟ್ರಿಪ್ ಕಡಿತ ಸಮಸ್ಯೆಗಳನ್ನು ಸರಿಪಡಿಸಲು CPIM ಮನವಿ
ಯಾವ ದೇಶ? ಎಷ್ಟು ಖರ್ಚು?
ಅಮೆರಿಕ – 22.89 ಕೋಟಿ ರೂ.
ಅಮೆರಿಕ – 15.33 ಕೋಟಿ ರೂ.
ಜಪಾನ್ – 17.19 ಕೋಟಿ ರೂ.
ನೇಪಾಳ – 80 ಲಕ್ಷ ರೂ.
ಪೋಲೆಂಡ್ – 10.10 ಕೋಟಿ ರೂ.
ಉಕ್ರೇನ್ – 2.52 ಕೋಟಿ ರೂ.
ರಷ್ಯಾ – 5.34 ಕೋಟಿ ರೂ.
ಇಟಲಿ – 14.36 ಕೋಟಿ ರೂ.
ಬ್ರೆಜಿಲ್ – 5.51 ಕೋಟಿ ರೂ.
ಗಯಾನಾ – 5.45 ಕೋಟಿ ರೂ.
ಪ್ರಧಾನಮಂತ್ರಿ ಮೋದಿ ಅವರ ಪ್ರವಾಸಗಳ ಖರ್ಚನ್ನು ಹೋಲಿಕೆ ಮಾಡುವ ಸಲುವಾಗಿ, ಸರ್ಕಾರವು 2014ರ ಮೊದಲಿನ ಕೆಲವು ಪ್ರವಾಸಗಳ ದತ್ತಾಂಶವನ್ನು ಸಹ ಒದಗಿಸಿದೆ. 2011ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ಭೇಟಿ ನೀಡಿದಾಗ 10.74 ಕೋಟಿ ರೂ. ಖರ್ಚಾಗಿತ್ತು.
ಪ್ರಧಾನಮಂತ್ರಿ ಮೋದಿಯವರ ವಿದೇಶಿ ಪ್ರವಾಸಗಳು ಭಾರತದ ವಿದೇಶಾಂಗ ನೀತಿಯನ್ನು ಬಲಪಡಿಸಲು ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸಲು ಸಹಾಯಕವಾಗಿವೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಈ ಪ್ರವಾಸಗಳ ಖರ್ಚು ವೆಚ್ಚ ಸಾರ್ವಜನಿಕ ಹಣದಿಂದಲೇ ಬರುತ್ತದೆ, ಆದ್ದರಿಂದ ಪಾರದರ್ಶಕತೆ ಮತ್ತು ಜವಾಬ್ದಾರಿತ್ವ ಅಗತ್ಯವಿದೆ ಎಂದು ವಿಪಕ್ಷಗಳು ತಿಳಿಸಿವೆ.
ಇದನ್ನು ಓದಿ :-ಕದನ ವಿರಾಮ ಉಲ್ಲಂಘಿಸಿ ಪ್ಯಾಲೇಸ್ತೀನ್ ಮೇಲೆ ಕ್ರೂರ ಆಕ್ರಮಣ ಮಾಡುತ್ತಿರುವ ಇಸ್ರೇಲ್ ರಕ್ತದಾಹಿ ನಿಲುವಿಗೆ ಡಿವೈಎಫ್ಐ ಖಂಡನೆ.