ಬೆಂಗಳೂರು: ಶನಿವಾರ ಸೌಜನ್ಯಯುತ ಭೇಟಿ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರನ್ನು ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಬಿಹಾರ ಚುನಾವಣೆ ಪ್ರಚಾರದ ವೇಳೆ ನಾನು ಖುದ್ದು ಹೋಗಿದ್ದೇನೆ. ತೇಜಸ್ವಿ ಯಾದವ್ ಜನಪ್ರಿಯತೆ ವ್ಯಾಪಕವಾಗಿತ್ತು. ಮಹಾಘಟಬಂಧನದ ಜೊತೆಗೆ ಜನರು ಬದಲಾವಣೆ ಬಯಸಿದ್ದರು. ಇದನ್ನು ನಾನು ಬಿಹಾರದಲ್ಲಿ ನೋಡುತ್ತಿದ್ದೆ. ನಿರುದ್ಯೋಗ, ಬೆಲೆ ಏರಿಕೆ, ಬಿಹಾರದ ವಿಕಾಸ ಯಾವ ವಿಚಾರಗಳ ಬಗ್ಗೆ ಬಿಹಾರದ ಜನರು ಮತ ಹಾಕುತ್ತಾರೆ ಎಂಬುದು ಗೊತ್ತಿರಲಿಲ್ಲ ಎಂದರು.
ಇದನ್ನೂ ಓದಿ : ಪ್ರಭುತ್ವ ಯಂತ್ರ ಮತ್ತು ಅಪಾರ ಹಣ ಬಳಸಿ ಜನತೆಯ ಪ್ರಶ್ನೆಗಳನ್ನು ಮುಳುಗಿಸಿಬಿಡಲಾಗಿದೆ-ಬಿಹಾರ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)
ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸ್ಟ್ರೈಕ್ ರೇಟ್ ಇಷ್ಟು ಹೆಚ್ಚಲು ಹೇಗೆ ಸಾಧ್ಯ ಎಂದು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಪ್ರಶ್ನಿಸಿದರು. ಆದರೆ ಎನ್ಡಿಎ 200 ಸ್ಥಾನ ಪಾರು ಮಾಡಿದೆ. ಈಗ ಇದೇ ರೀತಿಯ ಟಾರ್ಗೆಟ್ ನಾವು ಕೂಡ ಉತ್ತರ ಪ್ರದೇಶದಲ್ಲಿ ಫಿಕ್ಸ್ ಮಾಡಬೇಕಾಗಿದೆ. ನನ್ನ ವೈಯ್ಯಕ್ತಿಕ ಅನುಭವದಂತೆ ಉತ್ತರ ಪ್ರದೇಶ ಉಪ ಚುನಾವಣೆ ವೇಳೆ ಬಿಜೆಪಿ ಪೊಲೀಸರನ್ನು ಹಾಕಿ ಮತಗಳನ್ನು ಲೂಟಿ ಮಾಡಿತ್ತು. ಬಿಹಾರದಲ್ಲಿ ಮಹಿಳೆಯರ ಖಾತೆಗೆ 10 ಸಾವಿರ ರೂ. ಹಣ ಹಾಕಲಾಗಿದೆ. ಒಂದು ಮನೆಗೆ 30 ಸಾವಿರ ರೂ. ಕೂಡ ಸಿಕ್ಕಿದೆ. ಇದೇ ರೀತಿ ದುಡ್ಡು ಕೊಟ್ಟು ಚುನಾವಣೆ ಗೆಲ್ಲೋದೆ ಆದ್ರೆ, ನಾವು ಅದೇ ರೀತಿ ಮಾಡಬೇಕಾ ಎಂಬ ಪ್ರಶ್ನೆ ಇದೆ. ಬಡವರ ಕೈಯಲ್ಲಿ ಹಣ ಬಂದರೆ ಅವರಿಗೆ ಖುಷಿಯಾಗುತ್ತದೆ. ಮಹಿಳೆಯರಿಗೆ ಹಣ ಕೊಟ್ಟರೆ ಮಕ್ಕಳ ಓದಿಗೆ ಬಳಸ್ತಾರೆ. ಆರ್ಥಿಕತೆ ಬೆಳೆಯುತ್ತದೆ. ಕೇವಲ 10 ಸಾವಿರದಲ್ಲಿ ಕಷ್ಟ ನಿವಾರಣೆ ಮಾಡಲು ಸಾಧ್ಯವಿಲ್ಲ. ನಾವು ಮುಂದಿನ ಚುನಾವಣೆಯಲ್ಲಿ ಇದಕ್ಕೂ ಹೆಚ್ಚಿನ ಹಣ ಘೋಷಣೆ ಮಾಡ್ತೇವೆ. ಬಡವರಿಗೆ ಹೆಚ್ಚು ಹಣ ಸಿಗಬೇಕು ಎಂದು ತಿಳಿಸಿದರು.
ನಾನು ಕಾಂಗ್ರೆಸ್ ನಾಯಕರ ಮನೆ ಮುಂದೆ ಇದ್ದೇನೆ. ಕಾಂಗ್ರೆಸ್ ನಮ್ಮ ಮಿತ್ರ ಪಕ್ಷ, ನಮ್ಮ ಜೊತೆ ಅಲಯನ್ಸ್ ಇದ್ದಾರೆ. ಬಿಜೆಪಿ ಅವ್ರು ಏನಾದರೂ ಹೇಳಿಕೊಳ್ಳಲಿ, ಸ್ನೇಹಿತ ಸಂಕಷ್ಟದಲ್ಲಿದ್ದಾಗ ಕೈಬಿಡಬಾರದು. ಮೈತ್ರಿಕೂಟದ ಸುಧಾರಣೆ ಬಗ್ಗೆ ಈಗ ಮಾತನಾಡುವುದು ಸೂಕ್ತ ಅಲ್ಲ. ಸುಧಾರಣೆಗೆ ಸಮಯ ಬಂದಾಗ ಖಂಡಿತ ಸಲಹೆ ಕೊಡ್ತೇನೆ ಎಂದರು.
ಕರ್ನಾಟಕದಲ್ಲಿ ಬುಲ್ಡೋಜರ್ ಕ್ರಮ ಬೇಕು ಎಂಬ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಬುಲ್ಡೋಜರ್ ರಾಜ್ ಅಸಂವಿಧಾನಿಕ. ಸುಪ್ರೀಂ ಕೋರ್ಟ್ ಕೂಡ ಇದು ಸರಿಯಲ್ಲ ಅಂತ ಹೇಳಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಎಂದು ಟೀಕಿಸಿದರು.
ಕರ್ನಾಟಕದ ಎಸ್ಪಿ ರಾಜಕಾರಣದ ಬಗ್ಗೆ ಮಾತನಾಡಿ, ಮಾಜಿ ಸಿಎಂ ಬಂಗಾರಪ್ಪ ಅವರ ಪರವಾಗಿ ಪ್ರಚಾರ ಕೂಡ ಮಾಡಿದ್ದೆ. ಸಾಕಷ್ಟು ಮಿತ್ರರು ನಮ್ಮಜೊತೆ ಇದ್ದವರು ಈಗ ಮಂತ್ರಿ ಕೂಡ ಆಗಿದ್ದಾರೆ. ಆದರೆ ಈಗ ಪಕ್ಷದ ಮುಖ್ಯ ಉದ್ದೇಶ ಯುಪಿನಲ್ಲಿ ಅಧಿಕಾರಕ್ಕೆ ತರುವುದು. ಯುಪಿಯಲ್ಲಿ ಸೈಕಲ್ ಓಡಿಸುತ್ತೇನೆ ಎಂದರು.
ಕರ್ನಾಟಕ, ಕನ್ನಡದ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, ನಾನು ಇಲ್ಲೇ ಓದಿದ್ದು. ಕನ್ನಡ ಅರ್ಥವಾಗುತ್ತದೆ. ಮಾತನಾಡಲು ಕಷ್ಟ. ನೀವು ಇಲ್ಲೇ ಇಟ್ಟುಕೊಂಡರೆ ಕಲಿಯುತ್ತೇನೆ ಎಂದು ತಿಳಿಸಿದರು.ಈ ಹಿಂದೆ ಏರ್ಪೋರ್ಟ್ನಿಂದ ಮೆಜೆಸ್ಟಿಕ್ ಹೋಗುವಾಗ 45 ನಿಮಿಷ ಆಗ್ತಾ ಇತ್ತು. ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನನಗೆ ಸಿಕ್ಕಿರುವ ಎಲ್ಲಾ ಜ್ಞಾನ ಇಲ್ಲಿಯದ್ದೇ ಎಂದರು.
ಇದನ್ನೂ ನೋಡಿ : ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media
