ಮೈಸೂರು : ಹೊಟೇಲ್ ಬಿಲ್ ನರೇಂದ್ರ ಮೋದಿಯ ಹೆಸರಿನಲ್ಲಿ ಬಾಕಿ ಉಳಿದಿರುವುದಾಗಿ ವರದಿಯಾಗಿದ್ದು, ಕಳೆದ ವರ್ಷ ಬಂಡೀಪುರ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬಂದಾಗ ವಾಸ್ತವ್ಯ ಹೂಡಿದ್ದ ಹೊಟೇಲ್‌ನ ಬಿಲ್ 80 ಲಕ್ಷ ರೂ ಬಾಕಿ ಉಳಿದಿದೆ. ಈ ಹಿನ್ನೆಲೆ ಜೂನ್ 1 ರೊಳಗೆ ಪಾವತಿಸಿ ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಹೊಟೇಲ್ ಮಾಲೀಕರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಹೆಸರಿನಲ್ಲಿ
ಈ ಕಾರ್ಯಕ್ರಮಕ್ಕೆ ಒಟ್ಟೂ 6 ಕೋಟಿ ರೂ ಖರ್ಚಾಗಿತ್ತು ಆದರೆ ಕೇಂದ್ರ ಅರಣ್ಯ ಇಲಾಖೆಯಿಂದ ರಾಜ್ಯ ಅರಣ್ಯ ಇಲಾಖೆಗೆ 3 ಕೋಟಿ ರೂ ಮಾತ್ರ ಬಿಡುಗಡೆಯಾಗಿದ್ದು ಬಾಕಿ ಹಣ ನೀಡಿ ಎಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಹಿರಿಯ ಪತ್ರಕರ್ತ, ಹೋರಾಟಗಾರ ಆರ್.ಜಯಕುಮಾರ್ ಇನ್ನಿಲ್ಲ
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಆಗ ಮೈಸೂರಿನ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಒಂದು ವರ್ಷ ಕಳೆದರೂ ಹೊಟೇಲ್ ಬಿಲ್ ಪಾವತಿಯಾಗಿಲ್ಲ. 18% ಬಡ್ಡಿ ಸೇರಿ ಈಗ ಬಿಲ್ 80 ಲಕ್ಷರೂ ಆಗಿದೆ. ಹೀಗಾಗಿ ಜೂನ್ 1ರೊಳಗೆ ಬಿಲ್ ಪಾವತಿಸಿ ಎಂದು ಹೊಟೇಲ್ ಮಾಲೀಕರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ನೋಡಿ: ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.