ಬಿಬಿಎಂಪಿ| ಸ್ಮೋಕಿಂಗ್ ಝೋನ್ ನಿರ್ಮಿಸದ ಹೊಟೇಲ್‌ – ಬಾರ್‌ ಪರವಾನಗಿ ರದ್ದು

ಬೆಂಗಳೂರು: ಬಿಬಿಎಂಪಿಯು ಸ್ಮೋಕಿಂಗ್ ಝೋನ್’ಇಲ್ಲದ ಹೋಟೆಲ್, ಬಾರ್‌ ಗಳಿಗೆ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಸಂಬಂಧ  ಸ್ಮೋಕಿಂಗ್ ಝೋನ್ ನಿರ್ಮಿಸುವಂತೆ ಸೂಚಿಸಿದೆ. ಆರೋಗ್ಯ ಇಲಾಖೆ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳಂತಹ 412 ಮಾಲೀಕರಿಗೆ ನೋಟಿಸ್ ಕಳುಹಿಸಿದ್ದು. ನಿರ್ಮಿಸದ

ನೋಟಿಸ್ ನೀಡಿದ ದಿನಾಂಕದಿಂದ ಒಂದು ವಾರದ ಕಾಲಾವಕಾಶವನ್ನೂ ನೀಡಿದ್ದು, ತಪ್ಪಿದಲ್ಲಿ ಟ್ರೇಡ್ ಲೈಸೆನ್ಸ್ ಅಮಾನತುಗೊಳಿಸಲಾಗುವುದು ಎಂದು ಸೂಚಿಸಲಾಗಿದೆ. ಜೂನ್ 22, 2022 ರ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2003 (COTPA) ಸೆಕ್ಷನ್ 4 ರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ನಿರ್ಮಿಸದ

ಇದನ್ನೂ ಓದಿ: ಅತ್ಯಾಚಾರ ಪ್ರಕರಣ : ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಇದರಲ್ಲಿ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು 30 ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿರುವ ಯಾವುದೇ ಸಂಸ್ಥೆಗಳು ಧೂಮಪಾನ ಮಾಡಲು ಪ್ರತ್ಯೇಕ ಪ್ರದೇಶವನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಸಿರಾಜುದ್ದೀನ್ ಮದನಿ ಹೇಳಿದ್ದಾರೆ.

ಸಿಎಚ್‌ಒ ಮತ್ತು ಇತರ ಅಧಿಕಾರಿಗಳು ನೋಟಿಸ್ ನೀಡಿದ ಸಂಸ್ಥೆಗಳನ್ನು ಮರು ಪರಿಶೀಲಿಸುತ್ತಾರೆ. ಅವರು ಸೂಚನೆಯನ್ನು ಅನುಸರಿಸದಿದ್ದರೆ, ಟ್ರೇಡ್ ಲೈಸೆನ್ಸ್ ಅನ್ನು ಅಮಾನತ್ತಿನಲ್ಲಿಡಲು ಮತ್ತು ದಂಡವನ್ನು ವಿಧಿಸಲು ಕ್ರಮವನ್ನು ಪ್ರಾರಂಭಿಸಲಾಗುವುದು. ಈ ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ ಏಳು ದಿನಗಳ ಒಳಗೆ ಆದೇಶ ಪಾಲಿಸಲು ಸೂಚಿಸಲಾಗಿದೆ.

ಈ ಸಂಬಂಧ ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತರು ಪೊಲೀಸ್, ಅಬಕಾರಿ ಇಲಾಖೆ ಮತ್ತು ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿದ್ದು, ನಿಯಮ ಉಲ್ಲಂಘಿಸುವ ರೆಸ್ಟೋರೆಂಟ್, ಬಾರ್ ಅಥವಾ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 308 ಮತ್ತು 314 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ಪರವಾನಗಿಯನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ! ಹೂತಿಟ್ಟ ಸತ್ಯ ಹೊರ ಬರಲಿ!! Janashakthi Media

Donate Janashakthi Media

Leave a Reply

Your email address will not be published. Required fields are marked *