ಬಿಸಿಯೂಟ ನೌಕರರ ಧರಣಿ| ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ತಯಾರಿಸಿ ಉಣ ಬಡಿಸಿದ ಸರಕಾರಿ ಶಾಲಾ ಶಿಕ್ಷಕ ಶಿಕ್ಷಕಿಯರು

ಹಗರಿಬೊಮ್ಮನಹಳ್ಳಿ: ತಾಲೂಕಿನ  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ತಮ್ಮ ಶಾಲೆಯ 411 ಮಕ್ಕಳಿಗೆ ಇಂದು ಮಧ್ಯಾಹ್ನದ ಬಿಸಿ ಊಟ ತಯಾರಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ಉಣ ಬಡಿಸಿದರು. ನೌಕರರ

ಬಿಸಿಯೂಟ ನೌಕರರು ನಾನಾ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ವಿವಿಧ ಬೇಡಿಕೆಗಳಾದ ವೇತನ ಹೆಚ್ಚಳ, ಇಡಗಂಟು ಜಾರಿ, ಬಿಸಿಯೂಟದ ಗುಣಮಟ್ಟಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ  ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದಾರೆ. ಧರಣಿಯೂ ಇಂದಿಗೆ ಐದನೇ  ದಿನಕ್ಕೆ ಕಾಲಿಟ್ಟಿದೆ.

ಇದನ್ನೂ ಓದಿ:ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

ಐದು ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವದಿ ಧರಣಿ ನಡೆಸುತ್ತಿರುವ ಬಿಸಿಯೂಟ ನೌಕರರ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದೆ ಹೋದಲ್ಲಿ ಮಕ್ಕಳಿಗೆ ಅಡುಗೆ ಮಾಡಲು ಯಾರು ಇಲ್ಲದಂತಾಗುತ್ತದೆ. ಹಾಗಾಗಿ ಅಂತಹ ಸ್ಥಿತಿ ನಿರ್ಮಾಣವಾಗಬಾರದು. ಅವರ ಬೇಡಿಕೆ ಈಡೇರಲಿ ಎಂಬ ಬೆಂಬಲದೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ನವೆಂಬರ್-3 ರಂದು ಸರ್ಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರು ತಮ್ಮ ಶಾಲೆಯ 411 ಮಕ್ಕಳಿಗೆ ತಾವೇ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಊಟ ಬಡಿಸಿದ್ದು ವಿಶೇಷವಾಗಿದೆ. ಸರಕಾರಿ 

ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಮಹಿಳೆಯರು (ಅನ್ನಪೂರ್ಣೆಯರು) ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮುಷ್ಕರ ನಿರತರಾಗಿದ್ದಾರೆ. ಒಂದೊಂದು ಜಿಲ್ಲೆಯವರು ಒಂದೊಂದು ದಿನದಂತೆ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಕೊಂಡ ಅಲ್ಲಿನ ಶಿಕ್ಷಕರು ಆ ಪ್ರಕಾರ ಇಂದು ವಿಜಯನಗರ ಜಿಲ್ಲೆಯ ಎಲ್ಲಾ ಶಾಲೆಗಳ ಬಿಸಿಯೂಟ ಅಡುಗೆ ತಯಾರಕರು ಮುಷ್ಕರಕ್ಕೆ ತೆರಳಿದ್ದಾರೆ ಎಂಬುದನ್ನು ಮನಗಂಡು. ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾನ್ಹದ ಬಿಸಿ ಊಟ ತಪ್ಪಿಸುವಂತಿಲ್ಲ. ಹಾಗಾಗಿ, ಸದರಿ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕಿಯರು ಇಂದಿನ ಮೆನೂ ಪ್ರಕಾರ ಬಿಸಿಬೇಳೆಬಾತ್ ತಯಾರಿಸಿ ಶಾಲಾ ಮಕ್ಕಳಿಗೆ ಉಣ ಬಡಿಸಿದ್ದಾರೆ. ಸರಕಾರಿ 

ಶಿಕ್ಷಕಿಯರಾದ ಶಶಿಕಲಾ ಕೆ ಬಿ, ಜಿ ಪುಷ್ಪಾವತಿ, ವಿಜಯಲಕ್ಷ್ಮಿ, ಶಿಕ್ಷಕರಾದ ದ್ವಾರಕೇಶ್ವರ ಎಂ, ಎಂ ಎಂ ಲಿಂಗರಾಜ ಹಾಗೂ ರಂಗನಾಥ ಹವಲ್ದಾರ್ ಇಂದಿನ ಬಿಸಿ ಅಡುಗೆ ತಯಾರಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ, ಇಂದೇ ಶಾಲೆಯಲ್ಲಿ ನಡೆದ ಪರೀಕ್ಷಾ ಕಾರ್ಯದಲ್ಲಿ ಉಳಿದ ಶಿಕ್ಷಕ ಶಿಕ್ಷಕಿಯರು ತೊಡಗಿದ್ದರು, ಪರೀಕ್ಷಾ ಮೇಲ್ವಿಚಾರಣೆಗೆ ಬಂದಿದ್ದ ಸಿ ಆರ್ ಪಿ ನರೇಂದ್ರಕುಮಾರ್ ಮತ್ತು ಬಿ ಆರ್ ಪಿ ಮಂಜುನಾಥ ಅವರು ಮಧ್ಯಾಹ್ನದ ಬಿಸಿ ಊಟ ಅನುಷ್ಠಾನಕ್ಕೆ ತೊಂದರೆ ಆಗದಂತೆ, ತಾವೇ ಅಡುಗೆ ತಯಾರಿಸಿ ಮಕ್ಕಳಿಗೆ ಉಣಬಡಿಸಿದ ಶಿಕ್ಷಕರ ಪ್ರಯತ್ನವನ್ನು ಶ್ಲಾಘಿಸಿದರು ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜಿ ಚಂದ್ರಕಲಾ ಅವರು ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ. ಶಾಲಾ

ವಿಡಿಯೋ ನೋಡಿ:ಬಿಸಿಯೂಟ ನೌಕರರ ಬದುಕು ಹಳಸದಿರಲಿ Janashakthi Media

Donate Janashakthi Media

Leave a Reply

Your email address will not be published. Required fields are marked *