ಕೃಷ್ಣಗಿರಿ: ಬೆಂಗಳೂರು ಸಮೀಪದ ತಮಿಳುನಾಡಿನ ಹೊಸೂರು ಬಳಿ ನಾಯಿಗಳ ಗುಂಪೊಂದು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 5 ವರ್ಷದ ಬಾಲಕಿಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದಾಳಿಯ ವೇಳೆ ಸಹಾಯಕ್ಕಾಗಿ ಕೂಗಿದ್ದ ಬಾಲಕಿಯನ್ನು ಸ್ಥಳಕ್ಕೆ ಧಾವಿಸಿದ ಯುವಕ ರಕ್ಷಿಸಿದ್ದಾರೆ. ದಾಳಿಯ ವೇಳೆ ನಾಯಿಗಳು ಬಾಲಕಿಯನ್ನು ಎಳೆದಾಡಿ ಕಚ್ಚಿದ್ದು, ರಸ್ತೆಯಲ್ಲಿ ಕೆಲವು ಮೀಟರ್‌ಗಳವರೆಗೆ ಎಳೆದೊಯ್ದಿದಿವೆ. ಹೊಸೂರು
ಇದನ್ನೂ ಓದಿ: ನಾರಾಯಣಪುರ ಬಲದಂಡೆ ಕಾಲುವೆ ಆಧುನಿಕರಣ ಕಾಮಗಾರಿ ಕಳಪೆ:ಕ್ರಮಕ್ಕೆ ಡಿಎಸ್‌ಎಸ್ ಒತ್ತಾಯ
ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ದಾಳಿಗೊಳಗಾದ ಸಂತ್ರಸ್ತೆಯನ್ನು ವಾಸವಿ ನಗರದ ತೇಜಶ್ರೀ (5) ಎಂದು ಗುರುತಿಸಲಾಗಿದೆ. ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 3 ನಾಯಿಗಳು ಸುತ್ತುವರೆದು ದಾಳಿ ಮಾಡಿವೆ. ತಕ್ಷಣವೇ ಧಾವಿಸಿ ಬಂದ ಯುವಕ ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ನಂತರ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗಿ ವರದಿಯಾಗಿದೆ.
ಹೊಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಪುರಸಭೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೊಸೂರಿನ ಎಲ್ಲಾ ಜನವಸತಿ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ಬೀದಿ ನಾಯಿಗಳು ಹಿಂಡು ಸಂಚರಿಸುವ ಪಾದಚಾರಿಗಳು ಮತ್ತು ವಾಹನ ಸವಾರರನ್ನು ಓಡಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ಜೂನ್‌ನಲ್ಲಿ ಹೊಸೂರು ಬಾಲಾಜಿ ಬೀದಿಯಲ್ಲಿ ಬಾಲಕ, ಬಾಲಕಿಯರು ಸೇರಿದಂತೆ 7 ಮಂದಿಗೆ ಬೀದಿ ನಾಯಿಗಳು ಕಚ್ಚಿದ್ದವು. ಕಳೆದ ತಿಂಗಳು 65 ವರ್ಷದ ಮುನೀಶ್ವರ ಎಂಬವರಿಗೆ ಬೀದಿ ನಾಯಿಗಳು ಕಚ್ಚಿದ್ದವು. ತೀವ್ರ ಗಾಯಗೊಂಡ ಅವರನ್ನು ಹೊಸೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಕೊಡಿಸಿ ಎಂದರೆ ಧರ್ಮಸ್ಥಳಕ್ಕೆ ಹೇಗೆ ಅವಮಾನ ಆಗುತ್ತೆ? ಬಿ.ಎಂ ಭಟ್ ಪ್ರಶ್ನೆ Janashakthi Media