ನವದೆಹಲಿ: ಆಗ್ನೇಯ ದೆಹಲಿಯ ಅಬುಲ್ ಫಜಲ್ ಎನ್‌ಕ್ಲೇವ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಮತ್ತೊಬ್ಬ ಮಹಿಳೆಗೆ ಗಂಡು ಮಗುವನ್ನು ಮಾರಾಟ ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದು, ನರ್ಸಿಂಗ್ ಹೋಂ ಮಾಲೀಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಬುಲ್ ಫಜಲ್ ಎನ್‌ಕ್ಲೇವ್‌ನಲ್ಲಿರುವ ಮೆಡಿ ಕೇರ್ ಆಸ್ಪತ್ರೆಯಲ್ಲಿ ಜೂನ್ 2 ಮತ್ತು ಜೂನ್ 3 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ನರ್ಸಿಂಗ್ ಹೋಂನ ಸಹ-ಮಾಲೀಕ, ಇಬ್ಬರು “ಏಜೆಂಟ್” ಹಾಗೂ ಆಸ್ಪತ್ರೆಯ ಸಿಬ್ಬಂದಿ ಒಬ್ಬರು ಎಂದು ಬಂಧಿತರನ್ನು ಗುರ್ತಿಸಲಾಗಿದೆ. ಆಗ್ನೇಯ ದೆಹಲಿಯ ನಿವಾಸಿ ಸುಷ್ಮಾ ಗೌತಮ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಇಂದು ಮಗುವನ್ನು ಕದಿಯಲಾಗಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು – ವೈದ್ಯರ ಆಗ್ರಹ
ಇನ್ನೂ ಇಂತಹ ಘಟನೆಗಳು ಈ ಆಸ್ಪತ್ರಯಲ್ಲಿ ಹೆಚ್ಚೆಚ್ಚು ನಡೆದಿದೆ ಎಂಬ ವರದಿ ಲಭ್ಯವಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಸರ್ಕಾರಿ ಶಾಲೆ | ಹೊಸ ಕೊಠಡಿಯ ಮೇಲ್ಛಾವಣಿ ಕುಸಿತ – ವಿದ್ಯಾರ್ಥಿ ತಲೆಗೆ ಗಂಭೀರ ಏಟುJanashakthi Media