ನಕಲಿ ಕೋವಿಡ್‌ ರಿಪೋರ್ಟ್‌ ನೀಡುತ್ತಿದ್ದ ಖದೀಮರು ಪೊಲೀಸ್‌ ಬಲೆಗೆ

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದಲೆ ಮಧ್ಯಸ್ಥಿಕೆ

ಬೆಂಗಳೂರು: ನಗರದಲ್ಲಿ ನಕಲಿ ಕೊರೊನಾ ರಿಪೋರ್ಟ್​ ನೀಡ್ತಿದ್ದ ಇಬ್ಬರು ಖದೀಮರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಮುಖೇಶ್ ಸಿಂಗ್ ಹಾಗೂ ನಾಗರಾಜ ಬಂಧಿತರು. ಆರೋಪಿಗಳು, ಗಂಟಲು ದ್ರವ ಮಾದರಿ ಸಂಗ್ರಹಿಸಿ ಟೆಸ್ಟ್​ ಮಾಡದೆಯೇ ಕೊರೊನಾ ನೆಗೆಟಿವ್ ಎಂದು ರಿಪೋರ್ಟ್ ಕೊಡ್ತಿದ್ದರು ಎಂಬ ಅಂಶ ಈಗ ಬಯಲಾಗಿದೆ.

ಜನರು ಅಂತರ್​ ರಾಜ್ಯ , ಅಥವಾ ಅಂತರ್‌ ಜಿಲಾ ಪ್ರಯಾಣ ಮಾಡಬೇಕೆಂದರೆ ಕೋವಿಡ್ ನೆಗೆಟಿವ್​​ ವರದಿಯನ್ನ ಹೊಂದಿರಬೇಕು. ರೇಲ್ವೆ ನಿಲ್ದಾಣಗಳಲ್ಲಿ ಹಾಗೂ ಇನ್ನಿತರೆ ಕೆಲಸಗಳಿಗೆ ಕೋವಿಡ್​ ರಿಪೋರ್ಟ್​ ಸಲ್ಲಿಸಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು 700 ರೂಪಾಯಿ ಪಡೆದು  ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್​ ನೀಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ತಮ್ಮ ಸಿಬ್ಬಂದಿಯನ್ನೇ ಗ್ರಾಹಕರ ವೇಷದಲ್ಲಿ ಕಳಿಸಿದಾಗ ನಕಲಿ ವರದಿ ನೀಡುತ್ತಿದ್ದ ಕರಾಮತ್ತು ಬಯಲಾಗಿದೆ. ಬಳಿಕ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಇವರು ಎಷ್ಟು ಜನರಿಗೆ ಇದೇ ರೀತಿಯ ನಕಲಿ ರಿಪೋರ್ಟ್ ಕೊಟ್ಟಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ರಾಜ್ಯಪಾಲರ ಹುದ್ದೆಗೆ ಲಂಚ-ನ್ಯಾಯಾಧೀಶರ ಘನತೆಗೆ ಧಕ್ಕೆ: ಹೈಕೋರ್ಟ್‌

ಸರಕಾರಿ ಆಸ್ಪತ್ರೆ ಸಿಬ್ಬಂದಿ ಸಹಕಾರ : ಕೋವಿಡ್‌ ನೆಗೆಟೀವ್‌ ರಿಪೋರ್ಟ್‌ ನೀಡುವ ಜಾಲಕ್ಕೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಸಹಕಾರವನ್ನು ನೀಡುತ್ತಿದ್ದರು ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.  ದೊಮ್ಮಸಂದ್ರ ಪ್ರಥಾಮಿಕ ಆರೋಗ್ಯ ಕೇಂದ್ರದ ಭಾಗ್ಯ, ಕಿರಿಯ ಆರೋಗ್ಯ ಕಾರ್ಯಕರ್ತ ಮತ್ತು ಲ್ಯಾಬ್ ತಂತ್ರಜ್ಞ ಅನಿಲ್ ಕುಮಾರ್ ರವರು ನಾಗರಾಜ್‌ ಮತ್ತು ಮುಖೇಶ್‌ ಸಿಂಗ್‌ ಗೆ ಸಹಕಾರವನ್ನು ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ದೋಮಾಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಂಗ್ ಮತ್ತು ನಾಗರಾಜ್‌  ಭಾಗ್ಯ ಮತ್ತು ಕುಮಾರ್ ಅವರೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡಿದ್ದರು.  ಇವರಿಬ್ಬರು ಆಸ್ಪತ್ರೆಯ ಸುತ್ತಲೂ ಓಡಾಡುತ್ತಿದ್ದರು ಮತ್ತು ನಕಾರಾತ್ಮಕ ವರದಿಯನ್ನು ಬಯಸುವ ಜನರನ್ನು  ಸಂಪರ್ಕಿಸಿ, ಅವರ ಆಧಾರ ಕಾರ್ಡನ್ನು ಪಡೆದು ನಕಲಿ ವರದಿಯನ್ನು ನೀಡುತ್ತಿದ್ದರು ಎಂದು ಸಂದೀಪ್‌ ಪಾಟಿಲ್‌ ತಿಳಿಸಿದ್ದಾರೆ.

ಇದನ್ನು ಓದಿ: ರೆಮ್ಡೆಸಿವಿರ್‌ ಚುಚ್ಚುಮದ್ದಿನ ಹಾಹಾಕಾರದ ಹಿಂದಿರುವ ಷಡ್ಯಂತ್ರವೇನು?

ಈ ರೀತಿ ಹಣ ನೀಡಿ ನೆಗೆಟಿವ್‌ ರಿಪೋರ್ಟ್‌ ತೋರಿಸಿ, ಪಾಸಿಟೀವ್‌ ಬಂದು ಊರಲ್ಲಿರುವವರಿಗೆ ಸೋಂಕು ಹಚ್ಚುತ್ತಿರುವವರ ಸಂಖ್ಯೆ ಎಷ್ಟಿರಬಹುದು ಎಂದು ಜನ ಈಗ ಭಯಪಡುವಂತಾಗಿದೆ. ಆ ಇಬ್ಬರಿಂದ ಮಾಹಿತಿ ಪಡೆದ ನೆಗೆಟಿವ್‌ ರಿಪೋರ್ಟ್‌ ಪಡೆದವರನ್ನು ಪತ್ತೆ ಹಚ್ಚುವ ಕೆಲಸ ಭರದಿಂದ ಸಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *