ಗಡ್ಚಿರೋಲಿ: ತೀವ್ರ ಜ್ವರದಿಂದ ಮೃತಪಟ್ಟಿದ್ದ ತಮ್ಮ ಇಬ್ಬರು ಪುತ್ರರ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಪಟ್ಟಿಗಾಂವ್‌ನಲ್ಲಿ ನಡೆದಿದೆ.
ಪಟ್ಟಿಗಾಂವ್ ಪ್ರದೇಶದ ಇಬ್ಬರು ಮಕ್ಕಳು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಮಕ್ಕಳು ಚಿಕಿತ್ಸೆ ಸ್ಪಂದಿಸದೇ ಒಬ್ಬರ ಹಿಂದೆ ಒಬ್ಬರು ಮೃತಪಟ್ಟರು. ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತಮ್ಮ ಗ್ರಾಮದ ಮನೆಗೆ ಕಾಲ್ನಡಿಗೆಯಲ್ಲೆ ಸಾಗಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಅವರು ವಿಡಿಯೋ ಹಂಚಿಕೊಂಡಿದ್ದು, ಅಪರಿಚಿತ ದಂಪತಿಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕರ ಶವಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕೆಸರುಮಯವಾದ ಕಾಡಿನ ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡಬಹುದು. ಗಡ್ಚಿರೋಲಿಯ ಆರೋಗ್ಯ ವ್ಯವಸ್ಥೆಯ ಕಠೋರ ವಾಸ್ತವ ಇಂದು ಮತ್ತೆ ಮುನ್ನೆಲೆಗೆ ಬಂದಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸಿ ; ಫೈರ್ ಸಂಸ್ಥೆಯಿಂದ ಸಿಎಂಗೆ ಮನವಿ
ಮಹಾಯುತಿ ಮಿತ್ರಪಕ್ಷಗಳಾದ ಭಾರತೀಯ ಜನತಾ ಪಕ್ಷದ ಫಡ್ನವೀಸ್ ಅವರು ಗಡ್ಚಿರೋಲಿಯ ಉಸ್ತುವಾರಿ ಸಚಿವರಾಗಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಧರ್ಮರಾವ್ ಬಾಬಾ ಅತ್ರಮ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸರ್ಕಾರದಲ್ಲಿ ಎಫ್‌ಡಿಎ ಸಚಿವರಾಗಿದ್ದಾರೆ. “ಇಬ್ಬರೂ ಮಹಾರಾಷ್ಟ್ರದಾದ್ಯಂತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿದಿನ ರಾಜ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಹೇಳಿಕೊಳ್ಳುತ್ತಾರೆ. ಅವರು ನೆಲಮಟ್ಟಕ್ಕೆ ಇಳಿದು ಗಡ್ಚಿರೋಲಿಯಲ್ಲಿ ಜನರು ಹೇಗೆ ವಾಸಿಸುತ್ತಿದ್ದಾರೆ ಮತ್ತು ಅಲ್ಲಿನ ಸಾವಿನ ಸಂಖ್ಯೆಯನ್ನು ನೋಡಬೇಕು” ಎಂದು ವಡೆಟ್ಟಿವಾರ್ ಹೇಳಿದರು.
ಗ್ರಾಮಕ್ಕೆ ರಸ್ತೆ ಇಲ್ಲ: ಮೃತ ಮಕ್ಕಳ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ವಾಹನ ಸಂಚಾರ ಕಷ್ಟಕರವಾಗಿದೆ. ಶವ ಸಾಗಿಸುವ ಆಂಬ್ಯುಲೆನ್ಸ್ ಸಮಯಕ್ಕೆ ದೊರಕಿಲ್ಲ. ಇತ್ತ ವೈದ್ಯರು ಮರಣೋತ್ತರ ಪರೀಕ್ಷೆಗೆ ಸೂಚಿಸಿದಾಗ, ಕುಟುಂಬಸ್ಥರು ಮಕ್ಕಳು ಶವವನ್ನು ಹೆಗಲ ಮೇಲೆ ಹಾಕಿಕೊಂಡು ಗ್ರಾಮದತ್ತ ಸಾಗಿದ್ದಾರೆ. ಮಾರ್ಗಮಧ್ಯೆ ಯಾವುದೇ ವಾಹನ ಸಿಗದ ಕಾರಣ 15 ಕಿಮೀ ಶವವನ್ನು ಹೊತ್ತುಕೊಂಡೇ ಸಾಗಿಬಂದಿದ್ದಾರೆ. ಬಳಿಕ ಕುಟುಂಬದ ಇತರರು ಬೈಕ್ ತಂದ ಬಳಿಕ ಅದರ ಮೇಲೆ ಶವವನ್ನು ಸಾಗಿಸಿದ್ದಾರೆ. ಗ್ರಾಮಕ್ಕೆ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಶಾಶ್ವತ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಲು ಕೋರಿದ್ದಾರೆ.