ಹೊಸ ಮಾದರಿ ವೈರಾಣು : ಜಾಗೃತರಾಗಿರುವಂತೆ ಸಚಿವ ಸುಧಾಕರ ಮನವಿ

ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬಾರದಿರಲಿ

ಬೆಂಗಳೂರು : ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾಗಿದೆ. ಕೊರೋನಾಗಿಂತಲೂ ಹೊಸ ವೈರಾಣು ಬಹು ಬೇಗನೇ ಹರಡುತ್ತದೆ, ಆತಂಕ ಪಡುವ ಅಗತ್ಯವಿಲ್ಲ, ಆದರೆ ಮುಂಜಾಗೃತ ಕ್ರಮ ಅಗತ್ಯ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಢಿ ಉದ್ದೇಶಿಸಿ ಮಾತನಾಡಿದ ಸಚಿವ ಸುಧಾಕರ “ಬ್ರಿಟನ್​ನಲ್ಲಿ ಪ್ರಭೇದದ ವೈರಾಣು ಪತ್ತೆಯಾಗಿರು ಬಗ್ಗೆ ಮುಂಜಾಗ್ರತಾ ಕ್ರಮವಹಿಸುವ ಕುರಿತು ತಿಳಿಸಿದರು. ಹೊಸ ಪ್ರಭೇದದ ವೈರಾಣು ಪತ್ತೆಯಾದ ಕಾರಣಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೋನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್​ ಧರಿಸಬೇಕೆಂದು ​ ಮನವಿ ಮಾಡಿದರು.

ಎಚ್ಚರಿಕೆ ಇರಲಿ: ಸರ್ಕಾರಕ್ಕೆ ಜನರ ರಕ್ಷಣೆಯೇ ಮುಖ್ಯ ಎಂದ ಸುಧಾಕರ್,​ ಕೊರೋನಾದ ಹೊಸ ಪ್ರಭೇದ ಬರುತ್ತಿರುವ ಹಿನ್ನೆಲೆ ಎಚ್ಚರಿಕೆ ಇರಲಿ. ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು. ವಿದೇಶದಿಂದ ಬಂದವರು RTPCR ಟೆಸ್ಟ್​ ಮಾಡಿಸಿಕೊಳ್ಳಬೇಕು. ಮೂರು ದೇಶಗಳಲ್ಲಿ ಹೊಸ ಪ್ರಬೇಧ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರು ಕ್ವಾರಂಟೈನ್​ಗೆ ಒಳಗಾಗಬೇಕು. ಶಾಲೆಗಳ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಬ್ರಿಟನ್​ನಿಂದ ರಾಜ್ಯಕ್ಕೆ 138 ಪ್ರಯಾಣಿಕರು ಕೊರೊನಾ ನೆಗೆಟಿವ್​ ರಿಪೋರ್ಟ್ ಇಲ್ಲದೆ ಬಂದಿದ್ದಾರೆ. ಇವರನ್ನು ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರವೂ ವಿಶೇಷ ನಿಗಾ ಇಡುವಂತೆ ಸೂಚಿಸಿದೆ ಎಂದು ವಿವರಿಸಿದರು.

ರೋಗಲಕ್ಷಣದಲ್ಲಿ ಬದಲಾವಣೆ ಇಲ್ಲ, ತೀವ್ರತೆಯೂ ಇಲ್ಲ. ಕೊರೋನಾ ಹೊಸ ಪ್ರಬೇಧದಲ್ಲಿ ಹರಡುವಿಕೆ ಗುಣ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕೊರೋನಾ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುಧಾಕರ್​ ತಿಳಿಸಿದರು.

ಇಂಗ್ಲೆಂಡ್ ನಲ್ಲಿ ಲಾಕ್ಡೌನ್ : ಹೊಸ ಪ್ರಬೇಧದ ವೈರಾಣುವಿನಿಂದ ಇಂಗ್ಲೆಂಡ್ ಆತಂಕಕ್ಕೆ ಒಳಗಾಗಿದ್ದು, ನಾಲ್ಕನೆ ಹಂತದ ಲಾಕ್ಡೌನ್ ಘೋಷಿಸಲಾಗಿದೆ ಎಂದು ಪ್ರಧಾನಿ ಬೋರೀಸ್ ಜಾನ್ಸಸ್ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಮುಂಜಾಗೃತಾ ಕ್ರಮ ವಹಿಸುವಂತೆ ಆದೇಶಿಸಿದ್ದು ಹೊಸ ಪ್ರಬೇಧಧ ಕುರಿತು ಅಧ್ಯಯನ ನಡೆಸುತ್ತಿದೆ.

ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರದಿರಲಿ : ಜನೇವರಿ 26 ರಂದು ಪ್ರತಿ ಬಾರಿಯೂ ವಿಶೇಷ ಅತಿಥಿಗಳನ್ನು ಪ್ರಧಾನಿ ಮೋದಿ ಆಹ್ವಾನಿಸುತ್ತಾ ಬಂದಿದ್ದಾರೆ. ಈ ಬಾರಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸಲಿದ್ದಾರೆ. ಇಂಗ್ಲೆಂಡ್ ನಲ್ಲಿ ಕೊರೊನಾ ಹೊಸ ರೂಪ ಪಡೆದ ಹಿನ್ನಲೆಯಲ್ಲಿ ಭಾರತಕ್ಕೆ ಅವರು ಆಗಮಿಸಬಾರದು ಎಂಬ ಚರ್ಚೆಗಳು ಶುರುವಾಗಿವೆ.

Donate Janashakthi Media

Leave a Reply

Your email address will not be published. Required fields are marked *