ನವದೆಹಲಿ, ಜ 11 : ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳನ್ನು ರದ್ದುಗೊಳಿಸಬೇಕೆಂದು ದೆಹಲಿಯಲ್ಲಿ ಕಳೆದ 47 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಲಕ್ಷಾಂತರ ರೈತರಲ್ಲಿ ಇದುವರೆಗು 108 ಜನ ರೈತರು ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
“ಅವರ ಹಕ್ಕುಗಳನ್ನು ಮರಳಿ ಪಡೆಯಲು ಅವರ ಜೀವನವನ್ನು ತ್ಯಾಗ ಮಾಡುವುದು !! ಇಲ್ಲಿಯವರೆಗೆ, ಶಾಂತಿಯುತ ರೈತ ಪ್ರತಿಭಟನೆಯ ಸಂದರ್ಭದಲ್ಲಿ 108 ಜನರು ಹುತಾತ್ಮರಾಗಿದ್ದಾರೆ. ಇದು ಎಷ್ಟು ಕಾಲ ಉಳಿಯುತ್ತದೆ? ಸರ್ಕಾರ ಏಕೆ ಮೌನವಾಗಿದೆ?” ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.
ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ. ಕೆಲದಿನಗಳ ಕಾಲ ಮಳೆ ಸುರಿದಿದೆ. ಇದ್ಯಾವುದಕ್ಕೂ ಜಗ್ಗದೆ ರೈತರು ಹೋರಾಟವನ್ನು ಮುಂದುವರೆಸಿದ್ದಾರೆ. ತಾತ್ಕಾಲಿಕ ಟೆಂಟ್ ಗಳನ್ನು ಹಾಕಿಕೊಂಡು ಖಾಯಂ ವಿಳಾಸವಾಗಿಸುವ ಎಚ್ಚರಿಕೆಯನ್ನು ನೀಡಿವೆ. ಕೃಷಿ ಕಾಯ್ದೆ ವಾಪಸ್ಸಾಗದೆ ನಾವು ಮನಗೆ ಹೋಗುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಈಗಾಗಲೆ ಕೇಂದ್ರದ ಕೃಷಿ ಕಾನೂನು ವಿರುದ್ಧ 108 ಜನ ಹುತಾತ್ಮರಾಗಿದ್ದಾರೆ. ಅವರು ಹೋರಾಟಕ್ಕೆ ಸ್ಪೂರ್ತಿ ತುಂಬಿ ಬಲವನ್ನು ಹೆಚ್ಚಿಸಿದ ಹುತಾತ್ಮ ರೈತರಾಗಿದ್ದಾರೆ. ರೈತರ ಸಾವಿಗೆ ಕಾರಣವಾದ ಸರಕಾರ ಬೀದಿಗೆ ಬರುವುದು ಗ್ಯಾರಂಟಿ ಎಂದು AIKS ನ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಆಗ್ರಹಿಸಿದ್ದಾರೆ.