ಹೋರಾಟ ಜೀವಿ ವಿಠ್ಠಲ್‌ ಭಂಡಾರಿ ನಿಧನ

ಬೆಂಗಳೂರು : ವಿದ್ಯಾರ್ಥಿ ಜೀವನದಿಂದಲೇ ದಶಕಗಳ ಕಾಲ ಚಳುವಳಿಯೊಂದಿಗೆ ಸದಾಕಾಲ ಗುರುತಿಸಿಕೊಂಡಿದ್ದ ವಿಠ್ಠಲ್‌ ಭಂಡಾರಿ ಅವರು ನಮ್ಮನ್ನಗಲಿದ್ದಾರೆ.

ಜೂನ್‌ 27, 1970ರಂದು ಜನಿಸಿದ ವಿಠ್ಠಲ್‌ ಭಂಡಾರಿ ಅವರಿಗೆ 51 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮೂಲಕ ಹೋರಾಟದ ಜೀವನವನ್ನು ಪ್ರಾರಂಭವಾಯಿತು. ಅವರ ತಂದೆ ಆರ್‌ ವಿ ಭಂಡಾರಿ ಅವರು ಸಹ ದಶಕಗಳ ಕಾಲ ಸಾಹಿತ್ಯ ಹಾಗೂ ಚಳುವಳಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದವರು.

ಕೆಲವು ವರ್ಷಗಳ ಹಿಂದೆ ನಡೆದ ನ್ಯಾಯಮೂರ್ತಿ ನಾಗಮೋಹನ್ ದಾಸ್ ರಚನೆ ಕೃತಿ ʻಸಂವಿಧಾನ ಓದುʼ ಕಾರ್ಯಕ್ರಮದ ಮೂಲಕ ಇಡೀ ರಾಜ್ಯಾದ್ಯಂತ ಸಂಚರಿಸಿ ಸಂವಿಧಾನದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮುಂಚೂಣಿಯಾಗಿ ಕೆಲಸ ಮಾಡಿದ ವಿಠ್ಠಲ್‌ ಭಂಡಾರಿ ಅವರು ಮೌಢ್ಯಾಚರಣೆ ತೊಲಗಿಸುವ ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಕೆಲವು ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ಆಗಿದ್ದರಿಂದ ಶಿವಮೊಗ್ಗದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಚಿಕಿತ್ಸೆಯು ಸತತವಾಗಿ ಮುಂದುವರೆದಿತ್ತು.

ಸಹಯಾನ ಮೂಲಕ ಹಲವು ಕಿರು ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣದಲ್ಲಿ ಸುತ್ತಮುತ್ತಲಿನ ಜನಮಾಸನದೊಂದಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.

ವಿದ್ಯಾರ್ಥಿ ಚಳುವಳಿಯಿಂದಲೂ ಹಲವಾರು ಬರಹಗಳನ್ನು ಬರೆದಿರುವ ಶೈಕ್ಷಣಿಕವಾಗಿಯೂ ವೈಚಾರಿಕವಾದಂತಹ ಲೇಖನಗಳನ್ನು ಬರೆದಿದ್ದಾರೆ. ಕಾಲೇಜು ಪ್ರಾಧ್ಯಾಪಕ ವೃತ್ತಿ ಜೀವನದಲ್ಲಿಯೂ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಜೊತೆಯಲ್ಲಿ ಹಲವು ಮಹತ್ವದ ಕೃತಿಗಳು ಪ್ರಕಟಗೊಳ್ಳಲು ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ತೊಡಗಿಸಿಕೊಳ್ಳುತ್ತಿದ್ದರು.

ವಿದ್ಯಾರ್ಥಿ, ಯುವಜನ ಚಳವಳಿಯಿಂದ ಆರಂಭಿಸಿ ಸಮುದಾಯ, ಸಹಯಾನ ಸಾಂಸ್ಕೃತಿಕ ಚಳವಳಿಗಳನ್ನು ಮುನ್ನಡೆಸಿದವರು. ಜನನುಡಿ, “ಕೋಶ ಓದು, ದೇಶ ನೋಡು” ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಪ್ರಾಧ್ಯಾಪಕ ವೃತ್ತಿಯ ಜೊತೆಯಲ್ಲಿ ಸಮ ಸಮಾಜದ ಕನಸಿಗೆ ಬದ್ದತೆಯಿಂದ ತೊಡಗಿಸಿಕೊಂಡವರು. ವಿಠಲ ಭಂಡಾರಿ ನಿಧನಕ್ಕೆ ಪ್ರಗತಿಪರ ಸಾಹಿತಿಗಳು, ಜನಪರ ಸಾಹಿತಿಗಳು, ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಸಂತಾಪವನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *