ನವದೆಹಲಿ: ಆರ್‌ಎಸ್‌ಎಸ್ ಸದಸ್ಯ ಮತ್ತು ಕೋಲ್ಕತ್ತಾ ಮೂಲದ ವಕೀಲ ಸಂತಾನು ಸಿನ್ಹಾ ಮಂಗಳವಾರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಒಂದು ದಿನದ ಬಳಿಕ ಇದೀಗ ಲೈಂಗಿಕ ಶೋಷಣೆ ಆರೋಪಗಳನ್ನು ಹಿಂಪಡೆದಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಿನ್ಹಾ, ಮಾಳವಿಯಾ ವಿರುದ್ಧ ನೇರವಾಗಿ ಲೈಂಗಿಕ ಶೋಷಣೆಯ ಆರೋಪ ಮಾಡಿಲ್ಲ. ಆದರೆ, ಅವರು ಹನಿ-ಟ್ರ್ಯಾಪ್ ಆಗಿರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಲೈಂಗಿಕ
ಇದನ್ನೂ ಓದಿ: ಜನಗಣತಿಯ ನವೀಕರಣ ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಬೇಕು; ಕಾಂಗ್ರೆಸ್ ಒತ್ತಾಯ
ಫೇಸ್‌ಬುಕ್‌ನಲ್ಲಿ ಸಾರ್ವಜನಿಕ ಕ್ಷಮೆಯಾಚಿಸಿರುವ ಸಿನ್ಹಾ, ಮಾಳವಿಯಾ ಅವರನ್ನು ಮಾನನಷ್ಟಗೊಳಿಸುವುದು ತಮ್ಮ ಉದ್ದೇಶವಲ್ಲ ಎಂದು ವ್ಯಕ್ತಪಡಿಸಿದ್ದಾರೆ, ಆದರೆ ಮೂಲ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಲಾಗಿರುವುದರಿಂದ ಅದನ್ನು ತೆಗೆದುಹಾಕುವುದಿಲ್ಲ ಎಂದಿದ್ದಾರೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಸಂಬಂಧಿಯಾಗಿರುವ ಸಿನ್ಹಾ ರಿಂದ ಮಾನನಷ್ಟಕ್ಕಾಗಿ ಮಾಳವಿಯಾ 10 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದರು. ಜೂನ್ 8 ರಂದು ಸಲ್ಲಿಸಿದ ಮಾಲ್ವಿಯಾ ಲೀಗಲ್ ನೊಟೀಸ್, ಸಾರ್ವಜನಿಕ ಕ್ಷಮೆಯಾಚಿಸುವಂತೆ ಮತ್ತು ಮೂರು ದಿನಗಳ ಒಳಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಅಳಿಸುವಂತೆ ಸಿನ್ಹಾ ಅವರಿಗೆ ಸೂಚಿಸಿದ್ದು, ವಿಫಲವಾದರೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು ಎಂದಿದ್ದರು.
ಮಾಳವಿಯಾ ಲೀಗಲ್ ನೋಟಿಸ್ ಪ್ರಕಾರ, ವ್ಯಾಪಕವಾಗಿ ಹರಡಿರುವ ಅಪಪ್ರಚಾರದ ಸಾಮಾಜಿಕ ಮಾಧ್ಯಮದ ಪೋಸ್ಟ್ವೊಂದರಲ್ಲಿ ಪಶ್ಚಿಮ ಬಂಗಾಳದ ಆಚೆಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರ ಖ್ಯಾತಿಯನ್ನು ಹಾಳುಮಾಡಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ಅವರ ಇಮೇಜ್ ಮೇಲೆ ಇದು ಪರಿಣಾಮ ಬೀರಿದ್ದಲ್ಲದೇ ಮಾಳವಿಯಾಗೆ ಮಾನಸಿಕ ದುಃಖವನ್ನು ಉಂಟುಮಾಡಿದೆ. ಆರೋಪಗಳು ನಿರಾಧಾರ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಮಾಳವಿಯಾ ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತವೆ ಎಂದು ನೊಟೀಸ್ ಒತ್ತಿಹೇಳಿದೆ.
ಮೇ 7 ರಿಂದ ಸಿನ್ಹಾ ಫೇಸ್‌ಬುಕ್ ಪೋಸ್ಟ್, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ಗಮನ ಸೆಳೆದಿದೆ. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಆರೋಪಗಳನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದರೆ, ಕಾಂಗ್ರೆಸ್ ಮಾಳವಿಯಾ ಅವರನ್ನು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕುವಂತೆ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿತ್ತು.
ಇದನ್ನೂ ನೋಡಿ: ಕಾರ್ಮಿಕರಿಗೆ ‘ಬಂಡವಾಳ’ದ ಪರಿಕಲ್ಪನೆಗಳು, ಪ್ರಕ್ರಿಯೆಗಳು ಹೇಗೆ ಬೇರೆಯವರಿಗಿಂತ ಸುಲಭವಾಗಿ ಅರ್ಥವಾಗುತ್ತದೆ