ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಾಡಿರುವ ಫೋನ್ ಟ್ಯಾಪಿಂಗ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಮಾಡಿದ್ದಕ್ಕೆ ಸಾಕ್ಷಿ-ಪುರಾವೆ ನೀಡಲೀ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಪೋನ್ ಟ್ಯಾಪ್ ಮಾಡಿಲ್ಲ. ಹಾಗೇನಾದರೂ ಇದ್ದಲ್ಲಿ ಕುಮಾರಸ್ವಾಮಿ ದೂರು ಸಲ್ಲಿಸಲಿ. ವ್ಯರ್ಥ ಆರೋಪ ಮಾಡಬಾರದು. ದೂರು ಸಲ್ಲಿಸಿದರೆ ತನಿಖೆ ಮಾಡಲು ಸಿದ್ದ.ಖಾಸಗಿಯಾಗಿಯಾದರೂ ಫೋನ್ ಟ್ಯಾಪಿಂಗ್ ಆಗಿದ್ದಲ್ಲಿ ದೂರು ಕೊಡಲಿ. ಯಾರೇ ಮಾಡಿದ್ದರೂ ಗೃಹ ಇಲಾಖೆ ತನಿಖೆ ನಡೆಸಲು ಸಿದ್ಧ.
ಇದನ್ನೂ ಓದಿ: ಪ್ರಜ್ವಲ್, ಎಲ್ಲಿದ್ದರೂ 48 ಗಂಟೆಯೊಳಗೆ ಬಾ! ಎಚ್‌ಡಿ ಕುಮಾರಸ್ವಾಮಿ ಮನವಿ
ಅವರ ಬಳಿ ಫೋನ್ ಟ್ಯಾಪಿಂಗ್ ಮಾಡಲಾಗಿದೆ ಎನ್ನುವುದಕ್ಕೆ ದಾಖಲೆ ಗಳಿದ್ದರೆ, ಕುಮಾರಸ್ವಾಮಿ ಕೊಡಲೀ. ದೂರು ಕೊಟ್ಟಲ್ಲಿ ತನಿಖೆ ನಡೆಸಲಾಗುವುದು. ದೂರು ಕೊಡಲಿ ತನಿಖೆ ನಡೆಸುವುದಾಗಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆಕ್ರೋಶ