ನಾಯಕ ಹರ್ಮನ್ ಪ್ರೀತ್ ಸಿಡಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.
ಕಂಚಿನ ಪದಕಕ್ಕಾಗಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿತು.
ಈ ಮೂಲಕ ಭಾರತ ಒಲಿಂಪಿಕ್ಸ್ ನಲ್ಲಿ 4 ಕಂಚಿನ ಪದಕ ಗೆದ್ದಿದ್ದು, ಮೂರು ಶೂಟಿಂಗ್ ವಿಭಾಗದಲ್ಲಿ ಬಂದಿವೆ.ಭಾರತ ಹಾಕಿ ಪಡೆ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.
ಪಂದ್ಯದ ಕೊನೆಯ ನಿಮಿಷದಲ್ಲಿ ಸ್ಪೇನ್ ಪೆನಾಲ್ಟಿ ಕಾರ್ನರ್ ಪಡೆದರೂ ಗೋಲ್ ಕೀಪರ್ ಯಶಸ್ವಿಯಾಗಿ ತಡೆದರು. ಆದರೆ ಸ್ಪೇನ್ ಆಟಗಾರರು ವೀಡಿಯೋ ದೃಶ್ಯಗಳಿಗೆ ಮೇಲ್ಮನವಿ ಸಲ್ಲಿಸಿದರು. ಇದರಿಂದ ಪಂದ್ಯ ಕೊನೆಯ ಕ್ಷಣದಲ್ಲಿ ಕುತೂಹಲ ಹೆಚ್ಚಿಸಿತು.
ನಾಯಕ ಹರ್ಮನ್ ಪ್ರೀತ್ ಕೌರ್ ನಿಯಮ ಉಲ್ಲಂಘಿಸಿದ್ದು ದೃಢಪಟ್ಟಿದ್ದರಿಂದ ರೆಫರಿ ಸ್ಪೇನ್ ಪಂದ್ಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್ ಮುನ್ನ ಎರಡನೇ ಪೆನಾಲ್ಟಿ ನೀಡಿದ್ದರಿಂದ ಕೋಟ್ಯಂತರ ಭಾರತೀಯರ ಹೃದಯ ಬಡಿತ ಹೆಚ್ಚಿಸಿದರು.
ಭಾರತ ತಂಡ 1972ರ ನಂತರ ಒಲಿಂಪಿಕ್ಸ್ ನಲ್ಲಿ ಸತತ 2 ಪದಕ ಗೆದ್ದ ದಾಖಲೆ ಮಾಡಿದೆ. ನಾಯಕ ಹರ್ಮನ್ ಪ್ರೀತ್ ಸಿಂಗ್ 2 ಗೋಲು ಬಾರಿಸಿ ಗೆಲುವಿನ ರೂವಾರಿ ಆದರೆ, ಕೊನೆಯ ಬಾರಿ ಆಡಿದ ಗೋಲ್ ಕೀಪರ್ ಶ್ರೀಜೇಶ್ ಕೊನೆಯ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿಯಲ್ಲಿ ಗೋಲು ರಕ್ಷಿಸಿ ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಿದರು.