ಕಾಮನ್‌ವೆಲ್ತ್ ಕ್ರೀಡಾ ಕೂಟ: ಭಾರತದ ಹಾಕಿ ತಂಡ ಪ್ರಕಟ-ಮನ್‌ಪ್ರೀತ್ ಸಿಂಗ್​ ನಾಯಕ

2022ರ ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕಾಗಿ ಭಾರತ 18 ಸದಸ್ಯರ ಬಲಿಷ್ಠ ಪುರುಷರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡ ನಾಯಕ ಸ್ಥಾನಕ್ಕೆ ಮನ್‌ಪ್ರೀತ್ ಸಿಂಗ್ ಮರಳಿದರೆ, ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಬರ್ಮಿಂಗ್ಯಾಹಾಮ್ ಕ್ರೀಡಾ ಕೂಟ ಮತ್ತು 2024 ರ ಪ್ಯಾರಿಸ್ ಒಲಂಪಿಕ್ ಕ್ವಾಲಿಫೈಯರ್ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ನಡುವಿನ ಕಡಿಮೆ ಸಮಯದಿಂದಾಗಿ ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕೆ ಎರಡನೇ ದರ್ಜೆಯ ತಂಡವನ್ನು ಕಳುಹಿಸಲು ಹಾಕಿ ಇಂಡಿಯಾ ಆರಂಭದಲ್ಲಿ ನಿರ್ಧರಿಸಿತ್ತು.

ಚೀನಾದಲ್ಲಿ ಕೋವಿಡ್ -19 ಗೆ ಸಂಬಂಧಿಸಿದ ಪರಿಸ್ಥಿತಿಯಿಂದಾಗಿ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಲಾಯಿತು. ನಂತರ ಜುಲೈ 28 ರಿಂದ ಪ್ರಾರಂಭವಾಗುವ ಈ ಪ್ರತಿಷ್ಠಿತ ಸ್ಪರ್ಧೆಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಹಾಕಿ ಇಂಡಿಯಾ ನಿರ್ಧರಿಸಿತು.

ಭಾರತ ತಂಡ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಪೂಲ್ ಬಿಯಲ್ಲಿ ಸ್ಥಾನ ಪಡೆದಿದೆ. ಎರಡು ಬಾರಿ ಬೆಳ್ಳಿ ಪದಕ ವಿಜೇತ ಭಾರತ ತಂಡ ಜುಲೈ 31 ರಂದು ಘಾನಾ ವಿರುದ್ಧ ಆಟ ಆರಂಭ ಮಾಡಲಿದೆ.

ಅತ್ಯಂತ ಬಲಿಷ್ಠ ತಂಡ ಆಯ್ಕೆ

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು ಭಾರತ ತಂಡ ಮುನ್ನಡೆಸಿದ್ದ ಮನ್‌ಪ್ರೀತ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ವಿರುದ್ಧದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅಮಿತ್ ರೋಹಿದಾಸ್ ಮುನ್ನಡೆಸಿದ್ದರು. ಉಪನಾಯಕರಾಗಿ ನೇಮಕಗೊಂಡ ಹರ್ಮನ್‌ಪ್ರೀತ್, ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದರು.

ಮುಖ್ಯ ಕೋಚ್ ಗ್ರಹಾಂ ರೀಡ್ ಮಾತನಾಡಿ, ‘ನಾವು ಕಾಮನ್‌ವೆಲ್ತ್ ಕೂಟದ ಪರೀಕ್ಷಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ಆಟಗಾರರು ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಅಗ್ರ ತಂಡದ ವಿರುದ್ಧ ಆಡಿದ ಅನುಭವ ಹೊಂದಿದೆ. ಇದು ನಾಲ್ಕು ವರ್ಷಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಸ್ಪರ್ಧೆಯ ಮುಂದೆ ಉತ್ತಮ ಅನುಭವವಾಗಿದೆ ಎಂದು ಹೇಳಿದರು.

ಅನುಭವಿ ಗೋಲ್‌ ಕೀಪರ್‌ ಪಿಆರ್‌ ಶ್ರೀಜೇಶ್‌ ಮತ್ತು ಗಾಯದಿಂದ ವಾಪಸಾಗಿರುವ ಕೃಷ್ಣ ಬಹದ್ದೂರ್‌ ಪಾಠಕ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಜವಾಬ್ದಾರಿ ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಮತ್ತು ಜರ್ಮನ್‌ಪ್ರೀತ್ ಸಿಂಗ್ ಅವರ ಮೇಲಿದೆ. ಮನ್‌ಪ್ರೀತ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಾಂತ್ ಶರ್ಮಾ ಮಿಡ್‌ಫೀಲ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್ ಅವರನ್ನು ಸ್ಟ್ರೈಕರ್‌ಗಳಾಗಿ ತಂಡದಲ್ಲಿ ಸೇರಿಸಲಾಗಿದೆ. ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಪಂದ್ಯವಾಡಿದ್ದ ಗೋಲ್‌ಕೀಪರ್ ಸೂರಜ್ ಕರ್ಕೇರಾ ಮತ್ತು ಫಾರ್ವರ್ಡ್ ಆಟಗಾರ ಶಿಲಾನಂದ್ ಲಾಕ್ರಾ ಮತ್ತು ಸುಖಜಿತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

Donate Janashakthi Media

Leave a Reply

Your email address will not be published. Required fields are marked *