ಶಾಸಕ ಮುನಿರತ್ನ ವಿರುದ್ಧ “ಎಚ್‌ಐವಿ ಹನಿಟ್ರಾಪ್” ಆರೋಪ

ಬೆಂಗಳೂರು:  ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿದ್ದು, ಮಹಿಳೆಯೊಬ್ಬರು ತಮನ್ನು ಹೆದರಿಸಿ, ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಜೊತೆಗೆ ಎಚ್ಐವಿ ಪೀಡಿತ ಮಹಿಳೆಯೊಬ್ಬರನ್ನು ಬಳಸಿ ರಾಜಕೀಯ ಪ್ರತಿಸ್ಪರ್ಧಿಗೆ ಹನಿಟ್ರ್ಯಾಪ್ ಮಾಡಿರುವ ಗಂಭೀರ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಹನಿಟ್ರಾಪ್ 

ಕಳೆದ ವಿಧಾನಸಭಾ ಚುಣಾವಣೆಯ ಸಂದರ್ಭದಲ್ಲಿ ರಾಜಕೀಯ ಎದುರಾಳಿಯಾಗಿದ್ದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಹೊಸ ಷಡ್ಯಂತ್ರವನ್ನ ರೂಪಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನು ಓದಿ : ಹಗಲು ರಾತ್ರಿ ಕೆಲಸದ ಒತ್ತಡ – ಯುವತಿ ಸಾವು

ರಾಜಕೀಯ ಎದುರಾಳಿಯಾಗಿದ್ದ ಮಾಜಿ ಸಂಸದ ಡಿಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಅವರಿಂದ ತಂತ್ರಗಾರಿಕೆ ನಡೆದಿತ್ತು ಎನ್ನುವ ಕುರಿತು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ. ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮೂವರ ತಂಡವನ್ನ ಮುನಿರತ್ನ ನಿಯೋಜಿಸಿದ್ದರು ಎಂದು ಹೇಳಲಾಗಿದೆ.

ಈ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡುವ ದಿನವೇ ಕಾಂಗ್ರೆಸ್ ಕಾರ್ಯಕರ್ತರ ತಂಡವನ್ನ ನೋಡಿ ಭಯದಿಂದ ನಿಯೋಜಿಸಿದ್ದ ಮೂವರು ಹಿಂಜರಿದಿದ್ದಾರೆ ಎನ್ನಲಾಗಿದೆ.

ಏಡ್ಸ್ ರೋಗಿಯ ರಕ್ತ ನಿಮಗೆ ಇಂಜೆಕ್ಟ್ ಮಾಡುವ ಕುರಿತು ಮುನಿರತ್ನ ತಂತ್ರಗಾರಿಕೆ ನಡೆಸಿದ್ದರು ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ, ಇದೊಂದು ಅಸಹ್ಯಕರ, ಯಾವ ರೀತಿ ಪದ ಬಳಕೆ ಮಾಡಬೇಕೆಂತಲೂ ಗೊತ್ತಿಲ್ಲ. ನಾನು ಯಾವತ್ತಿಗೂ ಒಳ್ಳೆಯದನ್ನು ಬಯಸೋದು ಕೆಟ್ಟದ್ದನ್ನು ಅಂತೂ ಬಯಸೋದಿಲ್ಲ. ಆದರೆ ನಾವಂತೂ ಯಾರಿಗೂ ಹೆದರುವುದಿಲ್ಲ. ಇದರ ಒಳ ಮರ್ಮಗಳ ಬಗ್ಗೆ ಆಳವಾಗಿ ಅರ್ಥ ಮಾಡಬೇಕಿದೆ. ನಾನು ಏನಾದರೂ ಆ ವ್ಯಕ್ತಿ ಬಗ್ಗೆ ಕೆಟ್ಟದ್ದ ಬಯಸಿಲ್ಲ. ಒಳ್ಳೆಯದನ್ನು ಬಯಸಿದ್ದೇನೆ, ಕೆಲಸಕ್ಕೆ ಪ್ರೋತ್ಸಾಹಿಸಿದ್ದೇನೆ ಎಂದು ಹೇಳಿದರು. ಹನಿಟ್ರಾಪ್ 

ಇದನ್ನು ನೋಡಿ : ನಾಗಮಂಗಲ | ಜೆಡಿಎಸ್‌ ಹೆಗಲ ಮೇಲೆ ಸಂಘಪರಿವಾರದ ಕೋಮುಗಲಭೆಯ ಬಂದೂಕು – ಎಸ್‌.ವೈ ಗುರುಶಾಂತ Janashakthi Media

Donate Janashakthi Media

Leave a Reply

Your email address will not be published. Required fields are marked *