ಟೆಸ್ಟ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರೋಹಿತ್ ಶರ್ಮಾ!

ಟೆಸ್ಟ್‌ ಇತಿಹಾಸದಲ್ಲಿ ಈ ಸಾಧನೆ ಶ್ರೀಲಂಕಾದ ಜಯವರ್ಧನೆ ಹೆಸರಿನಲ್ಲಿತ್ತು

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4 ನೇ ದಿನದಲ್ಲಿ ಭಾರತ ಕ್ರಿಕೆಟ್ ತಂಡದ ರೋಹಿತ್ ಶರ್ಮಾ ಐತಿಹಾಸಿಕ ಸಾಧನೆ ಮಾಡಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ 30 ಎರಡಂಕಿಯ ಸ್ಕೋರ್‌ಗಳನ್ನು ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಅವರು ಬರೆದಿದ್ದಾರೆ.

29 ಎರಡಂಕಿಯ ಸ್ಕೋರ್‌ಗಳ ದಾಖಲೆಗಳನ್ನು ಹೊಂದಿದ್ದ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರ ಹೆಸರಿಗಿದ್ದ ಈ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದಿದ್ದಾರೆ. ತಮ್ಮ ಕೊನೆಯ 30 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಅವರು 12, 161, 26, 66, 25*, 49, 34, 30, 36, 12*, 83, 21, 19, 59, 11, 127, 29, 15, 46, 120, 32, 31, 12, 12, 35, 15, 43, 103, 80, 57 ಸ್ಕೋರ್‌ಗಳನ್ನು ಗಳಿಸಿ ಸ್ಥಿರತೆಯ ಆಟವನ್ನು ಪ್ರದರ್ಶಸಿದ್ದಾರೆ.

ಇದನ್ನೂ ಓದಿ: ವೇತನ ತಾರತಮ್ಯ ಕಳಚಿದ ಬಿಸಿಸಿಐ: ಪುರುಷರಷ್ಟೇ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಸಮಾನ ಪಂದ್ಯ ಶುಲ್ಕ

ಮಳೆ-ಬಾಧಿತ ಪಂದ್ಯದಲ್ಲಿ, ಭಾರತವು 4ನೇ ದಿನದ ಅಂತಿಮ ಅವಧಿಯಲ್ಲಿ 2 ವಿಕೆಟ್‌ಗೆ 181 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿ, ಭಾನುವಾರದ ಟೆಸ್ಟ್ ಪಂದ್ಯವನ್ನು ಗೆಲ್ಲಲು ವೆಸ್ಟ್ ಇಂಡೀಸ್‌ಗೆ 365 ರನ್‌ಗಳ ಸವಾಲಿನ ಗುರಿಯನ್ನು ನಿಗದಿಪಡಿಸಿತು.

ಮಳೆ ಅಡ್ಡಿಪಡಿಸಿದ ಕಾರಣ, ಮಧ್ಯಾಹ್ನದ ಅವಧಿಯಲ್ಲಿ ಕೇವಲ ಮೂರು ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು. ನಂತರ ಚಹಾ ವಿರಾಮದ ವೇಳೆಗೆ ಭಾರತ ತನ್ನ ಮುನ್ನಡೆಯನ್ನು 301 ರನ್‌ಗಳಿಗೆ ವಿಸ್ತರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ವೆಸ್ಟ್ ಇಂಡೀಸ್ ದಿನದಾಟವನ್ನು 76/2 ಕ್ಕೆ ಕೊನೆಗೊಳಿಸಿತು. ಪಂದ್ಯವನ್ನು ಗೆಲ್ಲಲು ಅಥವಾ ಡ್ರಾ ಮಾಡಲು 5 ನೇ ದಿನವನ್ನು ಬ್ಯಾಟಿಂಗ್ ಮಾಡಬೇಕಾಗುತ್ತದೆ.

ವಿಡಿಯೊ ನೋಡಿ: ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *