ತುಮಕೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮುಸ್ಲಿಂ ವ್ಯಾಪಾರಿಗೆ ನಿರ್ಬಂಧ ನಡುವೆಯೂ, ಇಂದು ರಾಮನವಮಿ ಅಂಗವಾಗಿ ಹಿಂದೂ-ಮುಸ್ಲಿಮ್ ಮುಖಂಡರು ಪಾನಕ-ಪಲಾರ, ಮಜ್ಜಿಗೆ ಹಂಚಿ ಭಾವೈಕತೆ ಸಾರಿದ್ದಾರೆ.
ತುಮಕೂರಿನ ಭದ್ರಮ್ಮ ಸರ್ಕಲಿನಲ್ಲಿ ರಾಮನವಮಿಯ ಸಂದರ್ಭದಲ್ಲಿ, ಧರ್ಮಗಳನ್ನು ಮರೆತು ಹಿಂದೂ ಮುಸ್ಲಿಮರು ಪಾನಕ, ಮಜ್ಜಿಗೆ ನೀಡಿ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕೇಸರಿ ಶಾಲು ತೊಟ್ಟು, ಜೈ ಶ್ರೀರಾಮ್ ಘೋಷಣೆ ಕೂಗಿ, ಸಾರ್ವಜನಿಕರಿಗೆ ಪಾನಕ-ಪಲಾರ, ಮಜ್ಜಿಗೆ ಹಂಚಿಕೆ ಮಾಡಿದರು.
ಕಾಂಗ್ರೆಸ್ ಯುವ ಕಾರ್ಯಕರ್ತರು ಕೇಸರಿ ಶಾಲು ಧರಿಸಿದ್ದರೆ, ಮುಸ್ಲಿಮರು ಟೋಪಿ ಧರಿಸಿ, ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾನಕ ಹಂಚಿ, ರಾಮನವಮಿ ಆಚರಿಸಿದರು. ಹಿಂದೂ ಮುಸ್ಲಿಂ ಎಲ್ಲರೂ ಒಂದೇ, ನಮ್ಮಲ್ಲಿ ಭೇದ-ಭಾವವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.