ಬೆಂಗಳೂರು: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ವಿದ್ಯಾರ್ಥಿಗಳು 4 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನ ಎಸ್.ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ.
ಎರಡನೇ ದಿನದ ಆರಂಭದಲ್ಲಿಯೇ ಅರ್ಜಿದಾರರ ಪರ ಮತ್ತು ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ನೀಡಬಹುದೇ ಎಂದು ಪ್ರಶ್ನಿಸಿದರು. ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಸ್ತೃತ ಪೀಠಕ್ಕೆ ಎಲ್ಲಾ ಕಡತಗಳನ್ನು ವರ್ಗಾಹಿಸಲು ರಿಜಿಸ್ಟ್ರಾರ್ ಅವರಿಗೆ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ನಿರ್ದೇಶನ ನೀಡಿದರು.
ಈ ವೇಳೆ ಉತ್ತರಿಸಿದ ವಕೀಲರು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್ ವಿವೇಚನೆಗೆ ಬಿಟ್ಟಿದ್ದು. ಕಾನೂನು ವಿಷಯವನ್ನು ನ್ಯಾಯಾಲಯವೇ ವಿಚಾರಿಸಬೇಕು ಎಂದಿದ್ದರು.
ಅಲ್ಲದೇ, ಎಲ್ಲರೂ ಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಯಾವ ತೀರ್ಪನ್ನಾದರೂ ಕೊಡಿ, ಬೇಗ ತೀರ್ಪು ನೀಡಿ ಎಂದು ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ಕೇಳಿಕೊಂಡಿದ್ದಾರೆ.
ಈ ವೇಳೆ ಸಮವಸ್ತ್ರ ಸಂಹಿತೆ ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆಯೇ ಕೋರ್ಟ್ ಪ್ರಶ್ನಿಸಿದಾಗ, 2 ತಿಂಗಳು ಹಿಜಬ್ಗೆ ಅವಕಾಶ ಮಾಡಿಕೊಟ್ಟರೆ ಆಕಾಶ ಬೀಳಲ್ಲ.
ಹಿಜಬ್ ಮೂಲಭೂತ ಹಕ್ಕು ಎನ್ನುವುದು ಪ್ರಶ್ನೆಯೇ ಅಲ್ಲ, ಸರ್ಕಾರಕ್ಕೆ ಸಮವಸ್ತ್ರ ಸಂಹಿತೆ ರೂಪಿಸುವ ಹಕ್ಕಿದೆಯೇ ಎಂಬುದೇ ಈಗಿನ ಪ್ರಶ್ನೆ ಎಂದು ಅರ್ಜಿದಾರರ ಪರ ವಕೀಲರರು ಪ್ರಶ್ನಿಸಿದರು. ಇದಕ್ಕೆ, ಹಿಜಬ್ ಧರಿಸುವುದು ಅನಿವಾರ್ಯವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲ ಮೊಹ್ಮದ್ ತಾಹೀರ್ ಮುಂದಿನ 2 ತಿಂಗಳ ಕಾಲ ಎರಡೂ ಕಡೆಯವರಿಗೆ ಸಮ್ಮತವಾಗುವ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ. ಎರಡೂ ಕಡೆಯವರಿಗೆ ನಿನ್ನೆ ಸಲಹೆ ನೀಡಿದ್ದೇವೆ ಎಂದು ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ. ತಪ್ಪಾಗಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ.
ವಕೀಲ ಸಂಜಯ್ ಹೆಗಡೆರಿಂದ ವಾದ ಮಂಡನೆ ಮಾಡಿದರು. ಈ ಪ್ರಕರಣದ ಸಮಸ್ಯೆ ಬಗೆಹರಿಯಬೇಕು. ಇದು ನನ್ನ ಸ್ವಂತ ಊರು ಮತ್ತು ನನ್ನ ಕಾಲೇಜಿನ ಪ್ರಕರಣ. ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿದೆಯೇ ಎಂದು ವಕೀಲ ಸಂಜಯ್ ಹೆಗಡೆ ಪ್ರಶ್ನೆ ಮಾಡಿದ್ದಾರೆ.
ಸರಿಯಾಗಿ ಸಮವಸ್ತ್ರವನ್ನು ನಿಗದಿಪಡಿಸಲಾಗಿದೆಯೇ? ಒಂದು ವೇಳೆ ಅಧಿಕಾರವಿದ್ದರೆ ವಿವರಿಸಲು ನಾನು ಸಿದ್ಧ. ಈಗ ಮುಖ್ಯವಾಗಿರುವುದು ಶಾಂತಿ ಮರುಸ್ಥಾಪಿಸುವುದು. ನೀವು ಹೇಗೆ ವಿಷಯವನ್ನು ನೋಡುತ್ತೀರೆನ್ನುವುದು ಮುಖ್ಯ. ಧಾರ್ಮಿಕ ಅಗತ್ಯತೆ ಪ್ರಶ್ನೆ ಬಗ್ಗೆ ಗಮನಹರಿಸುವ ಬದಲು ಆಡಳಿತಾತ್ಮಕ ಅಧಿಕಾರ ಏನಿದೆ ಎಂದು ಚರ್ಚಿಸಬೇಕಾಗಿದೆ. ಒಂದು ವೇಳೆ ಪರಿಹಾರ ಕಂಡುಕೊಂಡ್ರೆ ಸ್ವರ್ಗ ಕೆಳಗೆ ಬೀಳಲ್ಲ. ವಿದ್ಯಾರ್ಥಿಗಳು ಮತ್ತೆ ಕಾಲೇಜಿಗೆ ವಾಪಸ್ ಹೋಗಲಿ. ಪರಿಸ್ಥಿತಿ ಶಾಂತವಾಗಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಈ ವಿಚಾರವನ್ನು ವಿಸ್ತೃತ ಪೀಠಕ್ಕೆ ವಹಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಅಂತಿಮವಾಗಿ ಇದು ಕೋರ್ಟ್ಗೆ ಬಿಟ್ಟ ವಿಚಾರ ಎಂದು ಎಜಿ ತಿಳಿಸಿದ್ದಾರೆ. ನಮಗೆ ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆ ಇದೆ. ವಿಸ್ತೃತ ಪೀಠಕ್ಕೆ ವಹಿಸುವ ಬಗ್ಗೆ ನಮ್ಮ ವಿರೋಧ ಇಲ್ಲ. ನ್ಯಾಯಾಂಗದ ಸೂಕ್ಷ್ಮತೆಯನ್ನು ನಾವು ಪರಿಗಣಿಸುತ್ತೇವೆ ಎಂದು ಎಜಿ ಪ್ರಭುಲಿಂಗ ನಾವದಗಿ ಹೇಳಿದ್ದಾರೆ.
ಮಧ್ಯಂತರ ಆದೇಶದ ನೀಡುವಂತೆ ಅರ್ಜಿದಾರರ ಮನವಿ
- ಮಧ್ಯಂತರ ಆದೇಶ ನೀಡುವಂತೆ ಸಂಜಯ್ ಹೆಗ್ಡೆ ಮನವಿ
- ಸರ್ಕಾರದ ಆದೇಶವನ್ನು ವಜಾ ಮಾಡಿ-ಅರ್ಜಿದಾರರು
- ಹಿಜಬ್ ಧರಿಸಿ ಶಾಲಾ ಕಾಲೇಜಿಗೆ ಹೋಗಲು ಅವಕಾಶ ನೀಡಿ
- ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್ ಹೆಗ್ಡೆ
ಮಧ್ಯಂತರ ಆದೇಶದ ಅಗತ್ಯವಿಲ್ಲ
- ಸರ್ಕಾರ ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡಿದೆ
- ಸಮವಸ್ತ್ರ ವಿಚಾರದಲ್ಲಿ ಸಮಿತಿ ನಿರ್ಧಾರ ತೆಗೆದುಕೊಳ್ಳಬಹುದು
- ಮಧ್ಯಂತರ ಆದೇಶ ನೀಡಬೇಡಿ ಎಂದು ಕಾಲೇಜು ಸಮಿತಿ ಮನವಿ
ಯೂನಿಫಾರಂ ಹಾಕದಿದ್ದರೆ ಕಾಲೇಜಿನಿಂದ ಹೊರಹಾಕುವಂತಿಲ್ಲ
- ಹಿಜಬ್ ಧರಿಸಿ ಕಾಲೇಜಿಗೆ ಬಂದರೆ ದಂಡ ವಿಧಿಸುವಂತಿಲ್ಲ-ಅರ್ಜಿದಾರರು
- ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ
- ಇದು ಸಮವಸ್ತ್ರ ಪ್ರಶ್ನೆಯೇ ಅಲ್ಲ-ಅರ್ಜಿದಾರರು