ಇಂದಿನಿಂದ ಮಿನಿಮಮ್ ದರ ಪಡೆಯಲು ಹೈಕೋರ್ಟ್​ ಸೂಚನೆ;ಕೊನೆಗೂ ದರ ಕಡಿಮೆ ಮಾಡಿದ ಓಲಾ, ಊಬರ್​ ಕಂಪನಿ

ಬೆಂಗಳೂರು: ಓಲಾ ಊಬರ್ ಕಂಪನಿಗಳು ಇಂದಿನಿಂದ ಮಿನಿಮಮ್ ದರ ಪಡೆಯಲು ಮುಂದಾಗಿದ್ದು, 2 ಕಿ.ಮೀ. ದೂರಕ್ಕೆ ಕೇವಲ 30-35 ರೂ. ಮಾತ್ರ ಚಾರ್ಜ್ ಮಾಡಲು ನಿರ್ಧರಿಸಿದೆ.

ನಿನ್ನೆ ಹೈಕೋರ್ಟ್ ನ್ಯಾಯಾಧೀಶರು 2021ರ ದರವನ್ನು ಮಾತ್ರ ಪಡೆದುಕೊಳ್ಳುವುದರ ಜೊತೆಗೆ 10% ಹೆಚ್ಚಿನ ದರ ಮತ್ತು ಜಿಎಸ್ಟಿ ಸೇರಿಸಿ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಮುಂದಿನ 15 ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕು. ನಂತರ ಓಲಾ, ಊಬರ್ ಮತ್ತು ರ್ಯಾಪಿಡೋ ಕಂಪನಿ ಜೊತೆಗೆ ಆರ್​ಟಿಓ ಅಧಿಕಾರಿಗಳು, ಆಟೋ ಸಂಘಟನೆಗಳು ಹಾಗೂ ಪ್ರಯಾಣಿಕರ ಸಭೆ ಮಾಡಿ, ದರ ನಿಗದಿ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ವಾಣಿವಿಲಾಸ ರೋಡ್​ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ 33.29 ಪೈಸೆ ಮಾತ್ರ. ಆದರೆ 1.7 ಕಿಮೀ ದೂರವಿರುವ ಮಾರ್ಗಕ್ಕೆ ಊಬರ್ ಕಂಪನಿ ನಿನ್ನೆ ಮೊನ್ನೆ 80 ರಿಂದ 100 ರೂ. ಚಾರ್ಜ್ ಮಾಡಿದೆ ಎನ್ನಲಾಗುತ್ತಿದೆ.

ಇನ್ನು ಮುಂದಿನ ಹದಿನೈದು ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಚಾರ್ಜ್ ಮಾಡಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು, ಹೈ ಕೋರ್ಟ್ ಆದೇಶಕ್ಕೂ ಓಲಾ ಕಂಪನಿ ಡೊಂಟ್ ಕೇರ್ ಎನ್ನುತ್ತಿದೆ. ಇಂದು ಬೆಳಿಗ್ಗಿನಿಂದಲೇ ಊಬರ್ ಕಂಪನಿ ದರವನ್ನು ಇಳಿಸಿ ಕೋರ್ಟ್ ಸೂಚನೆ ಪಾಲನೆ ಮಾಡಿದರೆ, ಇತ್ತ ಓಲಾ ಕಂಪನಿ ಮಾತ್ರ ಹಿಂದಿನಂತೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಹಾಗಾದರೆ ಹೈ ಕೋರ್ಟ್ ಆದೇಶಕ್ಕೆ ಓಲಾ ಕಂಪನಿ ಗೌರವ ನೀಡುತ್ತಿಲ್ಲ ಎನ್ನಲಾಗುತ್ತಿದೆ. ವಾಣಿ ವಿಲಾಸ ರೋಡ್​ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಊಬರ್​​​ನಲ್ಲಿ 33 ರೂ. ಆದರೆ ಅದೇ ಮಾರ್ಗಕ್ಕೆ ಓಲಾ ಮಾತ್ರ ಬರೋಬ್ಬರಿ 59 ರೂ. ವಸೂಲಿ ಮಾಡುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *