ಕೋಲಾರ: ನಾವು ‘ರೈತರು ದೇಶದ ಬೆನ್ನೆಲುಬು’ ಎಂದು ಘೋಷಣೆ ಕೂಗ್ತೀವಿ. ಆದರೆ ಆ ಬೆನ್ನೆಲುಬುನ್ನ ಮುರಿದು ಹಾಕಿದ್ದೇವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.
ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು.. ನಾವು ರೈತನ ಬೆನ್ನು ಮುರಿದ ಪರಿಣಾಮ ನಮಗೆ ಒಳ್ಳೆಯ ಆಹಾರ ಸಿಗುತ್ತಿಲ್ಲ. ನಾನು ಕೋರ್ಟ್ನಲ್ಲಿ ನೋಡುತ್ತ ಇರುತ್ತೇನೆ. ನಮ್ಮ ವಕೀಲರು 12 ಗಂಟೆಗೆ ಸುಸ್ತಾಗಿರುತ್ತಾರೆ. ಈಗೆಲ್ಲ ನಾವು ತಿನ್ನುವ ಆಹಾರದಲ್ಲಿ ಸತ್ವ ಇಲ್ಲ. ಅದಕ್ಕೆ ಹೀಗೆ.. ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ವಕೀಲರು ಪ್ರಮುಖ ಪಾತ್ರವಹಿಸಿದ್ದರು ಎಂದರು.
ಅಂದು ದೇಶದ ಉಳಿವಿಗಾಗಿ ಹೋರಾಟ ಮಾಡಿದ್ದೇವೆ, ಇಂದು ನಮ್ಮ ನಂಬಿದವರಿಗೆ ನ್ಯಾಯಕ್ಕಾಗಿ ಹೋರಾಡಬೇಕಿದೆ. ನ್ಯಾಯಾಲಯದಲ್ಲಿ ಇರುವ ಹಳೆಯ ಕೇಸ್ಗಳನ್ನ ಬೇಗ ಬಗೆಹರಿಸಬೇಕಿದೆ. ನಾವು ಸರಿಯಾಗಿ ಕೆಲಸ ಮಾಡುತಿಲ್ಲ ಎಂದು ಬೇಸರವಾಗುತ್ತದೆ ಎಂದರು.