ಸಿಎಂ ಬದಲಾವಣೆ: ಹೈಕಮಾಂಡ್ ತೀರ್ಮಾನವೇ ಅಂತಿಮ – ಸಿದ್ದರಾಮಯ್ಯ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಿತ್ತಾಟ ಚರ್ಚೆ ಹುಟ್ಟುಹಾಕಿತ್ತು ಇದೀಗ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಮತ್ತೆ ಗರಿಗೆದರಿದೆ. ಇದೀಗ ಸಿಎಂ ಬದಲಾವಣೆ ಬಗ್ಗೆ ನಗರದಲ್ಲಿ ಡಿಸೆಂಬರ್‌ 11ರಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಗ್ಯಾರಂಟಿ ಪರಿಷ್ಕರಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಅಲ್ಲಿ ಏನೇನು ಚರ್ಚೆಯಾಯಿತು ಎಂದು ಇಲ್ಲಿ ಹೇಳಲು ಆಗುತ್ತಾ? ಎಂದರು. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಎಸ್‌ಐಟಿ ವರದಿ ಸಲ್ಲಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ದೋಷಾರೋಪಪಟ್ಟಿ ನೋಡಿಲ್ಲ ಎಂದ ಅವರು, ತೊಗರಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಆದರೆ ಈ ಬಗ್ಗೆ ಸಿಎಂ ಪುತ್ರ ಯತೀಂದ್ರ “ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ. ಎಲ್ಲವೂ ಸ್ಪಷ್ಟವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಮಹಿಳೆಯರೆಲ್ಲಾ ಬೀದಿಗಿಳಿದರೆ ಕ್ರಾಂತಿಯಾಗಲಿದೆ – ಡಾ. ನಾಗಲಕ್ಷ್ಮೀ ಚೌಧರಿ

ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ, ನನ್ನ ತಂದೆಯೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದಿದ್ದಾರೆ. ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸೂಚಿಸಿದ್ದರೂ ಪುತ್ರ ಮತ್ತೆ ಈ ವಿಚಾರವನ್ನು ಕೆದಕಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಅಧಿಕಾರ ಹಂಚಿಕೆ ಕುರಿತು ಚರ್ಚೆ ಇಲ್ಲ ಎಂಬ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ‘ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡಲಿ’ ಎಂದು ಹೇಳಿದ್ದರು.

ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ (DK Shivakumar) ಮಧ್ಯೆ ಎರಡು ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದಿತ್ತು. ಡಿಕೆಶಿ ಮನೆಗೆ ಆಗಮಿಸಿ ಪ್ರತಿಕ್ರಿಯಿಸಿದ್ದ ಸಿಎಂ ಹೈಕಮಾಂಡ್‌ ಹೇಳುವವರೆಗೆ ನಾನೇ ಸಿಎಂ ಆಗಿರುತ್ತೇನೆ ಎಂದು ತಿಳಿಸಿದ ನಂತರ ಈ ವಿಚಾರ ಸ್ವಲ್ಪ ತಣ್ಣಗಾಗಿತ್ತು. ಆದರೆ ಪುತ್ರ ಮತ್ತೆ ತಂದೆಯ ಪರ ಬ್ಯಾಟ್‌ ಬೀಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಒಳಗೊಳಗೆ ಮೀಟಿಂಗ್​ಗಳು ನಡೀತಿದ್ದು, ನಾಯಕತ್ವದ ಬದಲಾವಣೆ ವಿಚಾರ ಭಾರೀ ಚರ್ಚೆ ಆಗುತ್ತಿದೆ. ರಾಜಧಾನಿಯಿಂದ ಬೆಳಗಾವಿಗೆ ಡಿನ್ನರ್ ಪಾಲಿಟಿಕ್ಸ್​ ಶಿಫ್ಟ್ ಆಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಕೂಡ ಬೆಳಗಾವಿಗೆ ಬಂದಿದ್ದು, ಭಾರೀ ರಣತಂತ್ರವನ್ನೇ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಿಎಂ ನೇತೃತ್ವದಲ್ಲಿ ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಚರ್ಚೆ ಸದ್ದು ಮಾಡುತ್ತಿದೆ.

ಇದನ್ನೂ ನೋಡಿ: ದಲಿತರ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಬೇಡಿ – ರಾಜಗೋಪಾಲ್. ಡಿ.ಎಸ್ Janashakthi Media

Donate Janashakthi Media

Leave a Reply

Your email address will not be published. Required fields are marked *