ಬಿಜೆಪಿಯ ‘400 ಸ್ಥಾನಗಳ’ ಹಂಬಲದ ಹಿಂದಿನ ಗುಪ್ತ ಕಾರ್ಯಸೂಚಿ

ಮೂಲ ಲೇಖನ : ರಾಮ್‌ ಪುನಿಯಾನಿ, ಕನ್ನಡಕ್ಕೆ ಟಿ. ಸುರೇಂದ್ರರಾವ್

‘ಅನಗತ್ಯ ವಿಚಾರಗಳಿಂದ ತುಂಬಿಕೊಂಡಿರುವ’ ಸಂವಿಧಾನವನ್ನು ಬದಲಾಯಿಸಲು ಬಿಜೆಪಿಗೆ 400 ಸ್ಥಾನಗಳ ಅವಶ್ಯಕತೆ ಇದೆ ಎಂದು ಕರ್ನಾಟಕ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಘೋಷಿಸುವ ಮೂಲಕ ಅವರು ಬಿಜೆಪಿಯ ಗುಪ್ತ ಕಾರ್ಯಸೂಚಿಯನ್ನು ಹೊರಗೆಡಹಿದ್ದಾರೆ. ‘ಅನಗತ್ಯ ವಿಚಾರಗಳು’ ಎಂದರೆ ಬಿಜೆಪಿಯ ಆಂತರ್ಯ ಮಾತುಗಳ ಪ್ರಕಾರ ‘ಜಾತ್ಯತೀತತೆ ಮತ್ತು ಸಾಮಾಜವಾದ’ ಎಂದಷ್ಟೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟ (ಬಿಜೆಪಿ + ಇತರ ಪಕ್ಷಗಳು) 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿಯ ಮುಖಂಡರುಗಳು ಹೇಳಿಕೊಳ್ಳುತ್ತಿದ್ದಾರೆ. ಈ ಸಂಖ್ಯೆಯನ್ನು ಯಾರೋ ಮತದಾನ ಶಾಸ್ತ್ರಜ್ಞರು ತಮ್ಮ ಸಮೀಕ್ಷೆಯ ಆಧಾರದಲ್ಲಿ ಅಂದಾಜು ಮಾಡಿದ್ದಲ್ಲ. ಅದನ್ನು ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ಸುಮ್ಮನೆ ಪ್ರಚಾರ ಮಾಡುತ್ತಿದ್ದಾರಷ್ಟೆ.

ಈ ‘400 ಸ್ಥಾನಗಳ’ ಘೋಷಣೆಯನ್ನು ಸಮರ್ಥಿಸಿಕೊಳ್ಳುತ್ತಾ, ಸಂಸದ ಅನಂತ ಕುಮಾರ ಹೆಗಡೆಯವರು ಅಂತಹ ಒಂದು ಸಂಖ್ಯೆಯ ಅವಶ್ಯಕತೆಯನ್ನು ಹೀಗೆ ವಿವರಿಸಿದ್ದಾರೆ. ಅವರ ಪ್ರಕಾರ, ಪಕ್ಷವು ಸಂವಿಧಾನವನ್ನು ಬದಲಾಯಿಸುವ ಗುರಿ ಹೊಂದಿದೆ, ಅದಕ್ಕಾಗಿ ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. “ಈ ಬಾರಿ ನಾವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕಾದ ಅವಶ್ಯಕತೆ ಇದೆ ಎಂದು ಮೋದೀಜಿ ಹೇಳಿದ್ದಾರೆ. 400 ಏಕೆ? ನಾವು ಈಗ ಲೋಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದ್ದೇವೆ, ಆದರೆ ರಾಜ್ಯಸಭೆಯಲ್ಲಿ ಇದರ ಕೊರತೆ ಇದೆ, ಅಲ್ಲಿ ನಮ್ಮ ಸ್ಥಾನಗಳು ಬಹುಮತಕ್ಕಿಂತ ಕಡಿಮೆ ಇವೆ. ಅದೂ ಅಲ್ಲದೇ, ರಾಜ್ಯ ಸರ್ಕಾರಗಳಲ್ಲಿ ಅಗತ್ಯವಾದ ಬಹುಮತದ ಕೊರತೆ ಇದೆ.” ಎಂದು ವಿವರ ನೀಡಿದ ಹೆಗಡೆಯವರು “ಹಿಂದೂಗಳನ್ನು ದಮನ ಮಾಡಲು ಸಂವಿಧಾನದ ಮೂಲಭೂತ ತತ್ವಗಳನ್ನು ತಿರುಚಲು ಕಾನೂನುಗಳನ್ನು ಹಾಗೂ ನಿಬಂಧನೆಗಳನ್ನು ಒಮ್ಮೆ ಕಾಂಗ್ರೆಸ್ಸಿನವರು ಮಂಡಿಸಿದAತೆ ನಾವು ಮಾಡಬೇಕಾದರೆ, ನಾವು ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಬಹುಮತ ಸಾಕಾಗುವುದಿಲ್ಲ.” ಎಂದು ಸ್ಪಷ್ಟಪಡಿಸಿದರು.

ಅದಕ್ಕೆ ನಿಜವಾಗಿಯೂ ಅವರ ಸಮ್ಮತಿ ಇಲ್ಲವೇನೋ ಎಂಬಂತೆ, ಈಗಿನ ಸಂಸದರೊಬ್ಬರ ಹೇಳಿಕೆಯಿಂದ ಬಿಜೆಪಿ ತನ್ನನ್ನು ದೂರವಿರಿಸಿಕೊಂಡಿದೆ. ಇದರ ಪರಿಣಾಮವಾಗಿ ಅವರಿಗೆ ಈ ಬಾರಿ ಲೋಕಸಭೆಯಲ್ಲಿ ಸೆಣೆಸಲು ಟಿಕೆಟ್ ನಿರಾಕರಿಸಲೂಬಹುದು ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ವರದಿಗಳು ಇವೆ. ಅವರಿಗೆ ಈ ಬಾರಿ ಇದರ ಆಧಾರದಲ್ಲಿ ಟಿಕೆಟ್ ನಿರಾಕರಿಸುತ್ತಾರೋ ಅಥವಾ ಇಲ್ಲವೋ ಎನ್ನುವುದು ಸ್ಪಷ್ಟವಿಲ್ಲ – ಇಂತಹ ಹೇಳಿಕೆಗಳಿಗೆ ಬಿಜೆಪಿಯ ವಿರೋಧವೇನೂ ಇಲ್ಲ. ಈ ಸಂಸದರು ಈ ಹಿಂದೆಯೂ 2017 ರಲ್ಲಿ ಇದನ್ನೇ ಹೇಳಿದ್ದರು, ಆಗ ಅವರು ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಯಥೋಚಿತವಾಗಿ ಬಿಜೆಪಿಯು ಟಿಕೆಟನ್ನು ನೀಡಿತ್ತು.

“ಸಂವಿಧಾನವನ್ನು ಬದಲಾಯಿಸಲು 400 ಸ್ಥಾನಗಳ ಅವಶ್ಯಕತೆ ಇದೆ ಎಂಬ ಬಿಜೆಪಿ ಸಂಸದರ ಹೇಳಿಕೆಯು ನರೇಂದ್ರ ಮೋದಿ ಹಾಗೂ ಅವರ ‘ಸಂಘ ಪರಿವಾರದ’ ಗುಪ್ತ ಕಾರ್ಯಸೂಚಿಯ ಬಹಿರಂಗ ಘೋಷಣೆಯಷ್ಟೆ. ನರೇಂದ್ರ ಮೋದಿ ಹಾಗೂ ಬಿಜೆಪಿಯ ಅಂತಿಮ ಗುರಿಯು ಬಾಬಾ ಸಾಹೇಬರ ಸಂವಿಧಾನವನ್ನು ನಾಶಮಾಡುವುದೇ ಆಗಿದೆ. ಅವರು ಸಾಮಾಜಿಕ ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ” ಎಂದು ರಾಹುಲ್ ಗಾಂಧಿಯವರು ಹಿಂದಿಯಲ್ಲಿ ಎಕ್ಸ್‌ (ಹಿಂದಿನ ಟ್ವಿಟರ್) ನಲ್ಲಿ ಬರೆದಿದ್ದಾರೆ.

“ಸಮಾಜವನ್ನು ಛಿದ್ರಗೊಳಿಸುವ, ಅಭಿವ್ಯಕ್ತಿ ಸ್ವಾತಂತ್ರö್ಯವನ್ನು ನಿರ್ಬಂಧಿಸುವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ಹಾಗೂ ವಿರೋಧ ಪಕ್ಷದವರನ್ನು ನಿರ್ಮೂಲನೆ ಮಾಡುವ ಸಂಚು ರೂಪಿಸುವ ಮೂಲಕ ಅವರು ಭಾರತದ ಮಹೋನ್ನತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಕುಚಿತ ಸರ್ವಾಧಿಕಾರತ್ವ ವ್ಯವಸ್ಥೆಯನ್ನಾಗಿ ಬದಲಾಯಿಸುತ್ತಿದ್ದಾರೆ” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದ್ದಾರೆ.

ನಮ್ಮ ಸಂವಿಧಾನದ ಪ್ರಜಾಸತ್ತಾತ್ಕಕ ಮೌಲ್ಯಗಳನ್ನು ದುರ್ಬಲಗೊಳಿಸುವ ಎರಡು ಬಗೆಯ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ. ಆದರ ಮೂಲ ಸಂಘಟನೆ ರಾಷ್ಟಿçÃಯ ಸ್ವಯಂಸೇವಕ ಸಂಘವು (ಆರ್.ಎಸ್.ಎಸ್.) ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದೆ. ಭಾರತೀಯ ಸಂವಿಧಾನವು ಅಸ್ತಿತ್ವಕ್ಕೆ ಬಂದ ನಂತರ, ಆರ್.ಎಸ್.ಎಸ್.ನ ಅನಧಿಕೃತ ಮುಖವಾಣಿಯಾಗಿರುವ ಆರ್ಗನೈಸರ್  ಹೀಗೆ ಬರೆದಿತ್ತು: “. . .ಪ್ರಾಚೀನ ಭಾರತದ ಅಪೂರ್ವ ಸಾಂವಿಧಾನಿಕ ಬೆಳವಣಿಗೆಯ ಕುರಿತು ನಮ್ಮ ಸಂವಿಧಾನದಲ್ಲಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಇವತ್ತಿಗೂ ಕೂಡ ಮನುಸ್ಮೃತಿ ಯಲ್ಲಿ ಸಾರಿ ಹೇಳಿದ ಅವನ ಕಾನೂನುಗಳು ಜಗತ್ತಿನ ಗೌರವಕ್ಕೆ ಪಾತ್ರವಾಗಿವೆ ಮತ್ತು ಸ್ವಾಭಾವಿಕವಾಗಿಯೇ ವಿಧೇಯತೆ ಹಾಗೂ ಸಂಪ್ರದಾಯಶರಣತೆಯನ್ನು ಹೊರಹೊಮ್ಮಿಸುತ್ತವೆ. ಆದರೆ ನಮ್ಮ ಸಂವಿಧಾನದ ಪಂಡಿತರುಗಳಿಗೆ ಅದು ಏನೂ ಅಲ್ಲ.”

1998 ರಲ್ಲಿ ನ್ಯಾಷನಲ್ ಡೆಮಾಕ್ರಾಟಿಕ್ ಅಲೆಯನ್ಸ್ ನ ಭಾಗವಾಗಿ ಬಿಜೆಪಿಯು ಅಧಿಕಾರಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ ಸಂವಿಧಾನವನ್ನು ಪರಿಶೀಲಿಸಲು ಒಂದು ಆಯೋಗವನ್ನು ನೇಮಕ ಮಾಡಿದ್ದು. ಆದರೆ, ಸಂವಿಧಾನವನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ನ್ಯಾಯಮೂರ್ತಿ ವೆಂಕಟಾಚಲಯ್ಯ ಆಯೋಗದ ವರದಿಯನ್ನು ಜಾರಿಮಾಡಲಾಗಲಿಲ್ಲ.

ತದನಂತರದಲ್ಲಿ, 2000 ದಲ್ಲಿ ಕೆ.ಸುದರ್ಶನ್ ಅವರು ಆರ್.ಎಸ್.ಎಸ್.ನ ಮುಖ್ಯಸ್ಥರಾದಾಗ ಭಾರತೀಯ ಸಂವಿಧಾನವು ಪಾಶ್ಚಾತ್ಯ ಮೌಲ್ಯಗಳ ಆಧಾರದಲ್ಲಿದೆ, ಅದನ್ನು ಭಾರತೀಯ ಪವಿತ್ರ ಗ್ರಂಥಗಳ ಆಧಾರದಲ್ಲಿ ಬದಲಾಯಿಸಬೇಕಿದೆ ಎಂದು ಧೈರ್ಯವಾಗಿ ಹೇಳಿದರು. “ಸಂವಿಧಾನವು ಭಾರತ ಸರ್ಕಾರ ಕಾಯಿದೆ 1935 ರ ಆಧಾರದಲ್ಲಿರುವುದರಿಂದ ಅದು ದೇಶದ ಜನರಿಗೆ ಪ್ರಯೋಜನವಿಲ್ಲ . . .ಸಂವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲು ನಾವು ಹಿಂಜರಿಯಬೇಕಾದ ಅಗತ್ಯವಿಲ್ಲ . . .” ಎಂದು ಸುದರ್ಶನ್ ಹೇಳಿದ್ದರು.

2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಹಿಂತಿರುಗಿ ಬಂದ ನಂತರ, ಸಂವಿಧಾನದ ಪ್ರಸ್ತಾವನೆ ಹಾಗೂ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ಎಂಬ ಪದಗಳ ಬಳಕೆಯು ವಿವಾದದ ಅಂಶವಾಗಿ ಉಳಿದಿದೆ.

ಬಹಳ ಹಿಂದೇನಲ್ಲ, ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮುಖ್ಯಸ್ಥ, ವಿವೇಕ್ ದೇಬ್ರಾಯ್ ಅವರು ಕೂಡ ಹೊಸ ಸಂವಿಧಾನಕ್ಕಾಗಿ ಕರೆ ನೀಡಿದ್ದರು. ಆಗ ಕೂಡ, ಪ್ರಧಾನಿಯವರು ಅಧಿಕೃತವಾಗಿ ಯಾವುದೇ ವ್ಯಾಖ್ಯಾನ ಮಾಡದೆ ದೂರ ಉಳಿದಿದ್ದರು.

ಬಿಜೆಪಿಯಲ್ಲಿರುವ ಪ್ರಮುಖರು ಹಾಗೂ ರಾಜ್ಯ ಮಟ್ಟದ ಬಿಜೆಪಿ ಮುಖ್ಯಸ್ಥರ ವಿವಾದಾತ್ಮಕ ಹೇಳಿಕೆಗಳು ಆಗಾಗ ಕೇಳಿಬಂದರೂ, ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳು ಅಂತಹ ಹೇಳಿಕೆಗಳಿಂದ ತಮ್ಮನ್ನು ದೂರವಿರಿಸಿಕೊಳ್ಳುವಂತೆ ತೋರುತ್ತಿದ್ದಾರೆ.

ಇದನ್ನೂ ಓದಿಚುನಾವಣಾ ಬಾಂಡ್‌ ಬಹಿರಂಗ : ಮೋದಿ ಸರ್ಕಾರದ ದೊಡ್ಡಹಗರಣ ಬಯಲಿಗೆ

ಈ ಮಧ್ಯೆ, ಬಿಜೆಪಿಯು ಹತ್ತು ವರ್ಷಗಳ ಅಧಿಕಾರವನ್ನು ಪೂರೈಸುತ್ತಿರುವಾಗ, ಅದು ಭಾರತೀಯ ಸಂವಿಧಾನದ ಮೂಲ ಮೌಲ್ಯಗಳಾದ – ಪ್ರಜಾಪ್ರಭುತ್ವ ಮತ್ತು ಸಮಾನತೆ – ಬಗ್ಗೆ ಏನು ಮಾಡಿದೆ?

ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ, ಪ್ರಜಾಸತ್ತಾತ್ಮಕ ಪ್ರಭುತ್ವದ ಎಲ್ಲಾ ಆಧಾರ ಸ್ತಂಭಗಳಾದ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಆದಾಯ ತೆರಿಗೆ (ಐಟಿ), ಚುನಾವಣಾ ಆಯೋಗ (ಇಸಿ)ದಂತಹ ಸಾಂವಿಧಾನಿಕ ಸಂಸ್ಥೆಗಳು ಕಾಯಾಂಗದ ನಿಯಂತ್ರಣದಲ್ಲಿವೆ  ಮತ್ತು ಆ ಕಾರ್ಯಾಂಗವೇ ಒಬ್ಬ ವ್ಯಕ್ತಿಯ ನಿರ್ಬಂಧಕ್ಕೊಳಗಾಗಿದೆ.

ಹಲವಾರು ವಿಧಾನಗಳ ಮೂಲಕ ಹಲವಾರು ಮಟ್ಟದಲ್ಲಿ ನ್ಯಾಯಾಂಗವು ದುರ್ಬಲಗೊಳ್ಳಲ್ಪಟ್ಟಿದೆ. ಇದರ ಅಸಂಖ್ಯಾತ ಉದಾಹರಣೆಗಳು ಇವೆ: ಸಾಮಾಜಿಕ ಕಾರ್ಯಕರ್ತ ಉಮರ್ ಖಲೀದ್ ಅವರ ಬಂಧನವು ಅಂತಹದ್ದೊಂದು ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರö್ಯವು ಮನ ಕುಗ್ಗಿಸುತ್ತಿದೆ. ಮಾಧ್ಯಮದ ಮುಖ್ಯ ವಾಹಿನಿಗಳು ಸರ್ಕಾರಿ ಪರ ಕಾರ್ಪೊರೇಟುಗಳ ವಶದಲ್ಲಿವೆ, ಪ್ರಮುಖ ಟಿವಿ ವಾಹಿನಿಗಳು ಹಾಗೂ ವೃತ್ತಪತ್ರಿಕೆಗಳಲ್ಲಿ ಸರ್ಕಾರದ ತುತ್ತೂರಿಯನ್ನು ಪ್ರಸಾರ ಮಾಡಲಾಗುತ್ತಿದೆ. ಸ್ವತಂತ್ರ ದನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಹಳ ಸೀಮಿತವಾದ ಜಾಗಗಳು ಮಾತ್ರ ಲಭ್ಯವಿವೆ.

ಪ್ರಜಾಸತ್ತಾತ್ಮಕ ಸಮಾಜದ ಆಧಾರ ಸ್ತಂಭವಾದ ಅಭಿವ್ಯಕ್ತಿ ಸ್ವಾತಂತ್ರö್ಯವು ಅತ್ತಿಂದಿತ್ತ ಇತ್ತಿಂದತ್ತ ಎಳೆದಾಟಕ್ಕೆ ಒಳಗಾಗಿದೆ.

ಅನೇಕ ಅಂತರ್‌ ರಾಷ್ಟ್ರೀಯ ಸೂಚ್ಯಾಂಕಗಳಲ್ಲಿ ಧಾರ್ಮಿಕ ಸ್ವಾತಂತ್ರö್ಯವು ಕುಸಿತವಾಗಿದೆ. “ಭಾರತವು ಒಂದು ನಿರ್ದಿಷ್ಟ ಹಿತಾಸಕ್ತಿಯ ದೇಶವಾಗಿದೆ’ ಎಂಬ ಹಣೆಪಟ್ಟಿಯನ್ನು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ವಾಚ್‌ಡಾಗ್ (ಯುಎಸ್ ಫ್ರೀಡಂ ಆಫ್ ರಿಲಿಜಿಯನ್ ವಾಚ್‌ಡಾಗ್) ಭಾರತಕ್ಕೆ ದಯಪಾಲಿಸಿದೆ. ವಿ-ಡೆಮ್ ಪ್ರಕಾರ ಪ್ರಜಾಪ್ರಭುತ್ವ ಸೂಚ್ಯಾಂಕದಲ್ಲಿ ಭಾರತವು 104 ನೇ ಸ್ಥಾನದಲ್ಲಿದೆ, ನೈಜರ್ ಹಾಗೂ ಐವರಿ ಕೋಸ್ಟ್ ನಡುವೆ ಇದೆ!

ಆದರೆ, ಇದು ಬಿಜೆಪಿ-ಆರ್.ಎಸ್.ಎಸ್. ಜೋಡಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ‘ಧಾರ್ಮಿಕ ರಾಷ್ಟ್ರೀಯವಾದಿ’ ಸಂಸ್ಥೆಯು ಪ್ರಜಾಸತ್ತಾತ್ಮಕ ಸ್ವಾತಂತ್ರö್ಯಕ್ಕೆ ವಿಮುಖವಾಗಿದೆ ಮತ್ತು ಅವರು ತಮ್ಮ ಸಂವಿಧಾನವನ್ನು ಆ ದಿಕ್ಕಿನಲ್ಲೇ ರೂಪಿಸುತ್ತಾರೆ. ಭಾರತ ಕೂಡ ಈಗ ಪಾಕಿಸ್ತಾನ ಹಾಗೂ ಶ್ರೀಲಂಕಾ ದಂತಹ ‘ಪ್ರಜಾ ಪ್ರಭುತ್ವದ ದಮನಕಾಇಗಳ’ ಕೂಟಕ್ಕೆ ಸೇರಿಕೊಳ್ಳುತ್ತಿದೆ.

ಬಹಳ ಹಿಂದೇನಲ್ಲ, ಲಾಲ ಕೃಷ್ಣ ಅಧ್ವಾನಿಯವರು ‘ಭಾರತವು ಅಘೋಷಿತ ತುರ್ತುಪರಿಸ್ಥಿತಿಯಡಿಯಲ್ಲಿ ಜೀವಿಸುತ್ತಿದೆ’ ಎಂದಿದ್ದರು. ಹಿಂದೂ ರಾಷ್ಟಿçÃಯವಾದಿ ಕಾಲಾಳುಗಳು ಮತ್ತು ಪ್ರಭುತ್ವದ ಅಧಿಕಾರಿಗಳು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ನಿಗ್ರಹಿಸುತ್ತಿದ್ದಾರೆ ಆದರೆ ಸರ್ಕಾರವು ಖುಷಿಯಾಗಿ ಬೇರೆ ಕಡೆ ಮುಖ ಮಾಡಿದೆ. ಅಲ್ಪಸಂಖ್ಯಾತರ ಹಾಗೂ ಸಮಾಜದ ದುರ್ಬಲ ವಿಭಾಗಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪೂರ್ಣ ನಿರ್ಭೀತಿಯಿಂದ ಉಲ್ಲಂಘಿಸಲು ಈ ಸರ್ಕಾರವು ಈ ಪಡೆಗಳಿಗೆ ಅನುವುಮಾಡಿಕೊಡುತ್ತದೆ ಎಂಬುದರ ಸ್ಪಷ್ಟ ಸಂಕೇತವಿದಾಗಿದೆ.

ವಿಡಿಯೋ ನೋಡಿಸಂಸದೀಯ ಪ್ರಜಾಸತ್ತೆಯ ಮೇಲೆ ಕೇಂದ್ರ ಸರ್ಕಾರದ ಕ್ರೂರ ಸವಾರಿ

 

 

Donate Janashakthi Media

Leave a Reply

Your email address will not be published. Required fields are marked *