ಶೀತನಿದ್ರೆ: ಪ್ರಾಣಿಪ್ರಪಂಚದ ಮತ್ತೊಂದು ವಿಸ್ಮಯ!

ಶೀತನಿದ್ರೆ ಅಥವಾ ಶಿಶಿರಸುಪ್ತಿ ಅಥವಾ ಚಳಿನಿದ್ರೆ ಎಂದರೆ ಚಳಿಗಾಲದಲ್ಲಿ ಕೆಲವು ಪ್ರಾಣಿಗಳು ಯಾವುದೇ ಜೀವರಾಸಾಯನಿಕ ಪ್ರಕ್ರಿಯೆಗಳಿಲ್ಲದೇ ನಿಶ್ಚಲವಾಗಿರುವ ಪ್ರಾಣಿಯ ಸ್ಥಿತಿ. ಇದಕ್ಕೆ ಹೈರ‍್ನೇಶನ್ ಎನ್ನುತ್ತಾರೆ.ಈ ಸಮಯದಲ್ಲಿ ಪ್ರಾಣಿ ಗಾಢನಿದ್ರೆಯಲ್ಲಿದೆ ಎನ್ನಬಹುದು. ಹಾಗಿದ್ದರೆ ಪ್ರಣಿಗಳು ಏಕೆ ಹೀಗೆ ಶಿಶಿರಸುಪ್ತಿಗೆ ಜಾರುತ್ತವೆ ಎಂಬುದು ಕುತೂಹಲಕಾರಿ. ಪ್ರಪಂಚ

-ಡಾ: ಎನ್. ಬಿ. ಶ್ರೀಧರ

ಈ ಸಮಯದಲ್ಲಿ ಪ್ರಾಣಿಯ ಸಾಮಾನ್ಯ ಚಟುವಟಿಕೆಗಳಾದ ಉಸಿರಾಟ, ಹೃದಯಮಿಡಿತ ಇತ್ಯಾದಿಗಳು ಅತ್ಯಂತ ಕಡಿಮೆಯಾಗಿ ನಿಶ್ಚಲ ಪ್ರಾಣಿಯ ಶರೀರದಲ್ಲಿ ಸಂಗ್ರಹಗೊಂಡ ಮೇದಸ್ಸಿನ ಸಹಾಯದಿಂದ ಬದುಕಿರುತ್ತದೆ. ಪ್ರಪಂಚ

ಶೀತನಿದ್ರೆಗೆ ಜಾರುವ ಬಿಸಿರಕ್ತದ ಪ್ರಾಣಿಗಳಲ್ಲಿ ಶರೀರದ ತಾಪಮಾನವನ್ನು ಒಂದು ನಿರ್ಧಿಷ್ಟಮಟ್ಟದಲ್ಲಿ ಕಾಯ್ದಿಟ್ಟುಕೊಳ್ಳುವ ಪೋಲಾರ್ ಕರಡಿಗಳು, ಪೆಂಗ್ವಿನ್‌ಗಳು, ಬಾವಲಿಗಳು, ಕೆಲವೊಂದು ರೀತಿಯ ಹಕ್ಕಿಗಳು ಮತ್ತು ಸಸ್ಥನಿಗಳು ಸೇರುತ್ತವೆ. ಶೀತರಕ್ತದ ಪ್ರಾಣಿಗಳಲ್ಲಿ ಸರೀಸ್ರಪಗಳು, ಬಸವನಹುಳಗಳು ಮತ್ತು ಹಾವುಗಳು ಇತ್ಯಾದಿ ಸೇರುತ್ತವೆ. ಪ್ರಪಂಚ

ಇದನ್ನೂ ಓದಿ: ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣಿಸಲಾಗಿದೆ – ಸುನೀಲ್ ಕುಮಾರ್ ಬಜಾಲ್

ಏನಿದು ಶೀತನಿದ್ರೆ?

ಚಳಿಗಾಲದಲ್ಲಿ ಆಹಾರದ ತೀವ್ರ ಕೊರತೆಯಿರುತ್ತಿದ್ದು ಚಟುವಟಿಕೆಯಿಂದಿರಲು ಮತ್ತು ಬಹಳಷ್ಟು ನಂತರ ಬರುವ ಬೇಸಿಗೆ ಕಾಲದಲ್ಲಿ ಚಟುವಟಿಕೆಯಿಂದ ಇರಲು ಶಕ್ತಿಯ ಅಂಶದ ಅವಶ್ಯಕತೆ ಇದೆ. ಶೀತನಿದ್ರೆಯನ್ನು ಬೇಸಿಗೆಯಲ್ಲೂ ಸಹ ಕೆಲವು ಪ್ರಾಣಿಗಳು ಮಾಡುತ್ತವೆ. ಇದಕ್ಕೆ ಎಸ್ಟಿವೇಶನ್ ಎನ್ನುತ್ತಾರೆ. ಮಳೆಗಾಲದಲ್ಲಿ ವಟಗುಡುವ ಕಪ್ಪೆಗಳು ಬೇಸಿಗೆಯಲ್ಲಿ ಎಸ್ಟಿವೇಶನ್‌ನಲ್ಲಿರುತ್ತವೆ. ಪ್ರಪಂಚ

ಶೀತನಿದ್ರೆಗೆ ಇನ್ನೊಂದು ಕಾರಣವೆಂದರೆ ಆತ್ಮರಕ್ಷಣೆ. ಶೀತನಿದ್ರೆಯ ಸಮಯದಲ್ಲಿ ಪ್ರಾಣಿಗಳು ವಾಸನೆಯನ್ನು ಹುಟ್ಟಿಸಲಾರವು, ಶಬ್ಧಮಾಡಲಾರವು ಮತ್ತು ನಿಶ್ಚಲವಾಗಿರುವುದರಿಂದ ಇವುಗಳನ್ನು ಬೇಟೆಯಾಡುವ ಪ್ರಾಣಿಗಳಿಗೆ ಇವು ಸಿಗುವುದು ವಿರಳ. ಚಲನಶೀಲ ಸಸ್ಥನಿಗಳು ಸಾವನ್ನಪುö್ಪವ ಪ್ರಮಾಣ ಶೀತನಿದ್ರೆಯ ಪ್ರಾಣಿಗಳಿಗಿಂತ ೫ ಪಟ್ಟು ಜಾಸ್ತಿ. ಪ್ರಪಂಚ

ಶೀತನಿದ್ರೆಯ ಸಮಯದಲ್ಲಿ ಬಹುತೇಕ ಪ್ರಾಣಿಗಳ ಅದರಲ್ಲೂ ಗಿಡ್ಡ ಕಾಡುಪಾಪದ ಹೃದಯ ಮಿಡಿತ ಪ್ರತಿನಿಮಿಷಕ್ಕೆ ೩೦೦ ಇರುವುದು ೬ ಕ್ಕಿಂತ ಕಡಿಮೆಯಾಗುತ್ತದೆ ಮತ್ತು ೧೦ ನಿಮಿಷಕ್ಕೆ ಒಂದು ಉಸಿರಾಟದಷ್ಟು ಕಡಿಮೆಯಾಗುತ್ತದೆ ಮತ್ತು ಇದು ಸತ್ತ ಸ್ಥಿತಿಯಂತಿರುತ್ತದೆ. ನಿದ್ರೆಯಲ್ಲಿ ಹೃದಯ ಮಿಡಿತ, ಉಸಿರಾಟ ಮತ್ತು ಮೆದುಳಿನ ಚಟುವಟಿಕೆಗಳು ಜಾಗೃತವಾಗಿದ್ದು ಸ್ವಲ್ಪ ಕಡಿಮೆಯಾಗಿರುತ್ತವೆ. ಶಿಶಿರಸುಪ್ತಿಯಲ್ಲಿರುವ ಪ್ರಾಣಿಗಳು ಆಗಾಗ ನೈಜ ನಿದ್ರೆಯನ್ನು ಮಾಡಲೇಬೇಕು.

ಶೀತನಿದ್ರೆಯಲ್ಲಿ ದೇಹದ ಅಡ್ರಿನಲ್, ಥೈರಾಯ್ಡ್, ಪಿಟ್ಯುಟರಿ ಇತ್ಯಾದಿ ನಿರ್ನಾಳ ಗ್ರಂಥಿಗಳು ಅತ್ಯಂತ ಕಡಿಮೆ ಮಟ್ಟದಲ್ಲಿ ಕೆಲಸ ನಿರ್ವಹಿಸುವುದರಿಂದ ಶಕ್ತಿಯ ವ್ಯಯವು ಆಗುವುದಿಲ್ಲ. ಶೀತನಿದ್ರೆಯ ಸಮಯದಲ್ಲಿ ಪ್ರಾಣಿಗಳು ಮಲ ಮೂತ್ರ ವಿಸರ್ಜನೆ ಮಾಡುವುದಿಲ್ಲ. ಕರುಳಿನಲ್ಲಿರುವ ಅವಶ್ಯಕ ಸ್ನೇಹಮಯಿ ಬ್ಯಾಕ್ಟಿರಿಯಾಗಳ ಸಂಖ್ಯೆ ಗಣನೀಯವಾಗಿ ಹೆಚ್ಚು ಕಮ್ಮಿಯಾಗಿ ಪ್ರಾಣಿಯ ಆಹಾರದ ಅವಶ್ಯಕತೆಯನ್ನು ನಿಯಂತ್ರಿಸುತ್ತವೆ.

ಶೀತನಿದ್ರೆಯ ಪೂರ್ವಸಿದ್ಧತೆ ಏನು?

ಶೀತನಿದ್ರೆಗೆ ಹೋಗುವ ಮುನ್ನ ಪ್ರಾಣಿಗಳು ಕುತ್ತಿಗೆ, ಹಿಂಬಾಗ, ಬಾಲ, ಮೆದುಳಿನ ಸುತ್ತ ವಿಶೇಷವಾದ “ಹಳದಿ” ಮೇದಸ್ಸನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತವೆ. ಶೀತನಿದ್ರೆಗೆ ಮೊದಲು ಆರ್ಕ್ಟಿಕ್ ಅಳಿಲುಗಳು ಅವುಗಳ ದೇಹದ ತಾಪಮಾನವನ್ನು ಶೀತ ಸಮಯದಲ್ಲಿ ನೆಲದಲ್ಲಿ ಬಿಲ ತೋಡುವುದರ ಮೂಲಕ 5-10 ಡಿಗ್ರೀ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡಿಕೊಳ್ಳುತ್ತವೆ. ಇದಾದ ನಂತರ ಮೆದುಳಿನಲ್ಲಿರುವ ಅಡಿನೋಸಿನ್ ಟ್ರೆöÊಫಾಸ್ಪೇಟ್** ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಕ್ರಮೇಣ ಅವುಗಳ ಶರೀರದ ತಾಪಮಾನ ವಾತಾವರಣದ ತಾಪಮಾನದಷ್ಟು ಕಡಿಮೆಯಾಗಿಬಿಡುತ್ತದೆ. ಅನೇಕ ಹಾವುಗಳು ಹೊಟ್ಟೆ ತುಂಬಾ ತಿಂದ ನಂತರ ಇಲಿ, ಹೆಗ್ಗಣಗಳು ಕೊರೆದ ಬಿಲಗಳಲ್ಲಿ ಆಳವಾಗಿ ಸೇರಿಕೊಂಡು ಶೀತನಿದ್ರೆಯನ್ನು ಅನುಭವಿಸುತ್ತವೆ. ಶೀತನಿದ್ರೆಯ ಅವಧಿ ಸಾಮಾನ್ಯವಾಗಿ ೫-೬ ತಿಂಗಳು ಇರುತ್ತದೆ.

ಆದರೆ ಇತ್ತೀಚಿನ ಜಾಗತಿಕ ಬಿಸಿ ಮತ್ತು ವಾತಾವರಣದ ಮಾಲಿನ್ಯ ಈ ಸಮತೋಲನವನ್ನು ಕೆಡಿಸುತ್ತಿದೆ. ಇದ್ದಕ್ಕಿದ್ದ ಹಾಗೆ ಬರುವ ಮಳೆ, ಪ್ರವಾಹ, ಶೀತಗಾಳಿ, ಸಂಗ್ರಹಿಸಿದ ಶಕ್ತಿಯ ಅಂಶದ ಕೊರತೆ ಶೀತನಿದ್ರೆಗೆ ಜಾರಿದ ಪ್ರಾಣಿಯನ್ನು ಮರಣದೆಡೆ ದೂಡಬಹುದು.

ಯಾವ ಪ್ರಾಣಿಗಳು ಶೀತನಿದ್ರೆಗೆ ಜಾರುತ್ತವೆ?

ಕೆಲವೊಂದು ಉಭಯಚರಿಗಳು, ಸಸ್ಥನಿಗಳು, ಸರೀಸ್ರಪಗಳು, ಪಕ್ಷಿಗಳು, ಮೀನುಗಳು ಮತ್ತು ಕೀಟಗಳು ಶೀತನಿದ್ರೆಗೆ ಜಾರುವ ಸ್ವಭಾವ ಹೊಂದಿವೆ. ಕರಡಿಗಳು ಶೀತನಿದ್ರೆಗೆ ಜಾರಿದರೂ ಅದು ನೈಜ ಶೀತನಿದ್ರೆಯಲ್ಲ ಮತ್ತು ಅವುಗಳನ್ನು ನೈಜ ಶೀತನಿದ್ರಿಗಳಿಗಿಂತ ಬೇಗ ಎಬ್ಬಿಸಬಹುದು. ಕಡಿಮೆ ತೂಕದ ಪ್ರಾಣಿಗಳು ಶೀತ ನಿದ್ರೆ ಅನುಭವಿಸುವುದು ಜಾಸ್ತಿ. ಕೆಲವೊಂದು ಬಾವಲಿಗಳು ೩೪೪ ದಿನಗಳ ವರೆಗೆ ಶೀತನಿದ್ರೆಯನ್ನು ಅನುಭವಿಸಿದ್ದಿದೆ.

ಶೀತನಿದ್ರೆಯ ಕುರಿತು ಒಂದಿಷ್ಟು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

• ಆರ್ಕ್ಟಿಕ್ ನೆಲದ ಅಳಿಲು ತನ್ನ ದೇಹದ ಉಷ್ಣತೆಯನ್ನು ನೀರಿನ ಘನೀಕರಣಕ್ಕಿಂತ ಅಥವಾ ಶೂನ್ಯಕ್ಕಿಂತ ಕಡಿಮೆ ಮಾಡಿಕೊಳ್ಳುತ್ತದೆ. ಆಗ ನಿಮಿಷಕ್ಕೆ ಹೃದಯದ ಬಡಿತ 72 ರಿಂದ 1 ಕ್ಕೆ ಇಳಿದುಬಿಡುತ್ತದೆ.

• ಶೀತನಿದ್ರೆಯ ಸಮಯದಲ್ಲಿ ಕಾಮನ್ ಪೂರ್ವಿಲ್ ಎಂಬ ಹಕ್ಕಿ ಮತ್ತು ಕೆಲವು ಬಾವಲಿಗಳು ತಮ್ಮ ಹೃದಯ ಬಡಿತವನ್ನು ಪ್ರತಿ ನಿಮಿಷಕ್ಕೆ 400 ಬಡಿತಗಳಿಂದ ಕೇವಲ 10 ಕ್ಕೆ ಇಳಿಸಿಕೊಳ್ಳುತ್ತವೆ.

• ಶೀತನಿದ್ರೆಯ ಸಮಯದಲ್ಲಿ ಕರಡಿಗಳು ತಿಂಗಳುಗಟ್ಟಲೆ ತಿನ್ನುವುದಿಲ್ಲ, ಕುಡಿಯುವುದಿಲ್ಲ, ಮಲ ಅಥವಾ ಮೂತ್ರ ವಿಸರ್ಜಿಸುವುದಿಲ್ಲ. ಇವುಗಳನ್ನು ಅವು ಮರುಬಳಕೆ ಮಾಡಿಕೊಳ್ಳುತ್ತವೆ.

• ವುಡ್ ಪ್ರಾಗ್ ಕಪ್ಪೆಯು ತನ್ನ ಇಡೀ ಶರೀರವನ್ನು ಚಳಿಗಾಲದಲ್ಲಿ ಸಂಪೂರ್ಣ ಮಂಜುಗಡ್ಡೆಯ ತರ ಘನೀಕರಣಗೊಳಿಸಿಕೊಳ್ಳುತ್ತದೆ ಮತ್ತು ಅದರ ಹೃದಯದ ಬಡಿತ ಸಂಪೂರ್ಣ ನಿಂತು ಹೋಗುತ್ತದೆ. ಪುನ: ವಸಂತಕಾಲ ಬಂದಾಗ ಪುನ: ಸಾಮಾನ್ಯ ತಾಪಮಾನಕ್ಕೆ ತಂದುಕೊಂಡು ಏನೂ ಆಗದವರಂತೆ ಜಿಗಿಯುತ್ತದೆ.

• ಅಲಾಸ್ಕಾ ಅಥವಾ ಸೈಬೀರಿಯಾದಂತಹ ವಿಪರೀತ ಪರಿಸರದಲ್ಲಿ, ಕೆಲವು ದಂಶಕಗಳು ಅಥವಾ ಸರೀಸೃಪಗಳಲ್ಲಿ ಶೀತನಿದ್ರೆ 7-8 ತಿಂಗಳುಗಳವರೆಗೆ ಇರುತ್ತದೆ!

•ಕೆಲವು ಸಂಶೋಧನೆಗಳು ಶೀತನಿದ್ರೆ ಮೆದುಳನ್ನು ಹಾನಿ ಮತ್ತು ವಯಸ್ಸಾಗುವಿಕೆಯಿಂದ ರಕ್ಷಿಸಬಹುದು ಎಂದು ತೋರಿಸುತ್ತದೆ.

•ಗಗನಯಾನದಂತ ಧೀರ್ಘಯಾನದ ಸಮಯದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲ? ವಿಜ್ಞಾನಿಗಳು ಮನುಷ್ಯನ ಶರೀರದ ತಾಪಮಾನವನ್ನೂ ಬಹಳ ತಗ್ಗಿಸಬಹುದೇ ಎಂಬುದನ್ನು ಅದ್ಯಯನ ಮಾಡುತ್ತಾರೆ.

• ಶೀತನಿದ್ರೆಯ ಸಮಯದಲ್ಲಿ ಬಿಡುಗಡೆಯಾಗುವ ಜೀವರಾಸಾಯನಿಕಗಳು ವಯಸ್ಸಾಗದಂತೆ ತಡೆಯುವಿಕೆಯ ಸಾಮರ್ಥ್ಯವನ್ನು ಹೊಂದಿದ್ದರೆ ಇದನ್ನು ಮನುಷ್ಯನ ಆಯುಷ್ಯ ಹೆಚ್ಚಿಸುವ ಔಷಧಿಯಾಗಿ ಬಳಸಬಹುದೇ ಎಂದು ಅಧ್ಯಯನ ಮಾಡುತ್ತಿದ್ದಾರೆ.

• ಕಾಮನ್ ಪವರ್‌ವಿಲ್, ಪಕ್ಷಿ, ಶೀತನಿದ್ರೆ ಅಥವಾ ಶಿಶಿರಸುಪ್ತಾವಸ್ಥೆಯಂತಹ ಸ್ಥಿತಿಯನ್ನು ಪ್ರವೇಶಿಸಬಲ್ಲ ಪ್ರಪಂಚದ ಏಕೈಕ ಪಕ್ಷಿ ಪ್ರಭೇದವಾಗಿದೆ.

• ಗರ್ಭಧರಿಸಿದ ಕರಡಿಗಳು ಶೀತನಿದ್ರೆಯಲ್ಲಿಯೇ ನಿಧಾನಗತಿಯ ಸ್ಥಿತಿಯಲ್ಲಿದ್ದಾಗ ತಮ್ಮ ಗುಹೆಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತವೆ ಮತ್ತು ಸುಪ್ತಾವಸ್ಥೆಯಲ್ಲಿಯೇ ತಮ್ಮ ಕುರುಡು, ಕೂದಲುರಹಿತ ಮರಿಗಳನ್ನು ಪೋಷಿಸುತ್ತವೆ.

ಶೀತನಿದ್ರೆಯ ತೊಂದರೆಯೇನು?

ಪ್ರಾಣಿಗಳು ಶೀತನಿದ್ರೆಗೆ ಜಾರುವುದು ಶಕ್ತಿಯ ಉಳಿಕೆ ಮತ್ತು ಆತ್ಮರಕ್ಷಣೆಗೆ ಎಂದಿದ್ದರೂ ಕೆಲವೊಮ್ಮೆ ಇದೇ ಅವುಗಳ ಪ್ರಾಣಕ್ಕೆ ಆಪಾಯ ತಂದೊಡ್ಡುತ್ತದೆ. ಮನುಷ್ಯ ಪ್ರಾಣಿಗಳ ನಡುವಳಿಕೆಯನ್ನು ನಿಖರವಾಗಿ ಅಧ್ಯಯನ ಮಾಡುವುದರಿಂದ ಶೀತನಿದ್ರೆಗೆ ಜಾರುವ ಅನೇಕ ಪ್ರಾಣಿಗಳು ಆತನ ಆಹಾರವಾಗಿ ಬಳಕೆಯಾಗಿ ಅಳಿವಿನಂಚಿಗೆ ಬಂದು ನಿಂತಿವೆ. ಶೀತನಿದ್ರೆಗೆ ಜಾರಿದ ಪ್ರಾಣಿಗಳ ಹತ್ಯೆ , ತೊಂದರೆ ನಿಲ್ಲಬೇಕು.

ಇದನ್ನೂ ನೋಡಿ: ಸದನದಲ್ಲಿ ‘ಹನಿ ಟ್ರ್ಯಾಪ್’ ಸದ್ದು! – ಮೀನಾಕ್ಷಿ ಬಾಳಿ, ಕೆ.ಎಸ್. ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *