ನವದೆಹಲಿ: ಕರ್ನಾಟಕದಲ್ಲಿ ಹಿಜಾಬ್ ವಿವಾದ ತಾರಕ್ಕೇರುತ್ತಿದ್ದು, ಈಗ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿವಿಧ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸರಸ್ವತಿ ಪೂಜೆಯ ಸಂದರ್ಭದಲ್ಲಿ ತಮ್ಮ ಟ್ವೀಟ್ ನಲ್ಲಿ ಹಿಜಾಬ್ ವಿಚಾರವನ್ನು ಉಲ್ಲೇಖಿಸಿದ ಅವರು, ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸದ ಕಾಲೇಜು ಅಧಿಕಾರಿಗಳ ನಿರ್ಧಾರವನ್ನು ಖಂಡಿಸಿದರು. “ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ” ಎಂದಿದ್ದಾರೆ.
‘ವಿದ್ಯಾರ್ಥಿಗಳ ಶಿಕ್ಷಣದ ನಡುವೆ ಹಿಜಾಬ್ ಪ್ರವೇಶಿಸಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ. ಸರಸ್ವತಿ ಮಾತೆ ಎಲ್ಲರಿಗೂ ಜ್ಞಾನವನ್ನು ನೀಡಲಿ. ಆಕೆ ಭೇದ ಮಾಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸರಣಿ ಟ್ವೀಟ್
‘ಸಂವಿಧಾನವು ಯಾವುದೇ ಧರ್ಮವನ್ನು ಆಚರಿಸುವ ಹಕ್ಕು ನೀಡಿದೆ. ಅದರ ಅರ್ಥ ತಮ್ಮ ಧರ್ಮಕ್ಕೆ ಅನುಗುಣವಾಗಿ ಜನರು ಯಾವುದೇ ಬಟ್ಟೆಯನ್ನು ಧರಿಸಬಹುದು. ಹಿಜಾಬ್ ತೊಟ್ಟ ವಿದ್ಯಾರ್ಥಿಗಳನ್ನು ಶಾಲೆ ಪ್ರವೇಶಿಸದಂತೆ ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
‘ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುವುದು ಸಂಘ ಪರಿವಾರದ ಮುಖ್ಯ ಅಜೆಂಡಾ ಆಗಿದೆ. ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಈ ಘಟನೆಯ ಬಗ್ಗೆ ಗೊತ್ತಾಗಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಮತ್ತು ಜನರನ್ನು ಪ್ರಚೋದಿಸುತ್ತಿರುವವರನ್ನು ಬಂಧಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.