ಧರ್ಮಸ್ಥಳ ಪ್ರಕರಣ: ಹೆಚ್ಚಿನ ಮಹಿತಿಗೆ ಸಹಾಯವಾಣಿ ಆರಂಭ

ಧರ್ಮಸ್ಥಳ: ಎಸ್ಐಟಿ (SIT) ಅಧಿಕಾರಿಗಳು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಲೇ ಇದ್ದು, ಐದು ಸಮಾಧಿಯನ್ನು ಆಗೆದರೂ ಕೂಡ ಏನು ಸಿಗಲಿಲ್ಲ ಎಂದು ತಿಳಿದು ಬಂದಿದೆ. ಇದೀಗ ಹೆಚ್ಚಿನ ಮಹಿತಿಯನ್ನು ಕಲೆ ಹಾಕುವ ಉದ್ದೇಶದಿಂದ ಸಹಾಯವಾಣಿಯೊಂದನ್ನು ಆರಂಭಿಸಿದೆ.

ಜುಲೈ 28 ರಂದು ಧರ್ಮಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿದೆ. ಜೊತೆಗೆ ಉತ್ಖನನವನ್ನು ಆರಂಭಿಸಿದೆ. ಆದರೆ ಅಗೆದ ಐದು ಸಮಾಧಿಯಲ್ಲಿ ಯಾವ ಕುರುಹು ಪತ್ತೆಯಾಗಿಲ್ಲ.

ಈ ಹಿನ್ನಲೆ ಈ ನಡುವೆ ಎಸ್​ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿಗಾಗಿ 0824-2005301ಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ. ಮಂಗಳೂರಿನ ಮಲ್ಲಿಕಟ್ಟೆ ಯಲ್ಲಿ ಎಸ್‌ಐಟಿ ಕಚೇರಿಯ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ಯಾವುದೇ ರೀತಿಯ ಮಾಹಿತಿ ಇದ್ದರೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಜುಲೈ 30ರಂದು ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

ಇನ್ನೂ ಇಂದು ಕೂಡ ತನಿಖೆ ನಡೆಯಲಿದ್ದು, ಅನಾಮಿಕ ತೋರಿಸಿದ್ದ ಸ್ಥಳಗಳಲ್ಲಿ ಉತ್ಖನನ ಮಾಡಲಾಗುತ್ತದೆ. ಸದ್ಯ ದಕ್ಷಿಣ ಕನ್ನಡ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಉತ್ಖನನದ ವೇಳೆ ಕೆಂಪು ರವಿಕೆ, ಎಟಿಎಂ ಕಾರ್ಡ್, ಐಡಿ ಕಾರ್ಡ್ ಸಿಕ್ಕಿದೆ ಎಂಬ ಹೇಳಿಕೆಗೆ ಬಗ್ಗೆ ಎಸ್ ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಮೊದಲ ದಿನದ ಕಾರ್ಯಾಚರಣೆಯಲ್ಲಿ 1ನೇ ಪಾಯಿಂಟ್‌ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಒಂದನೇ ಸ್ಪಾಟ್‌ನಲ್ಲಿ ಎರಡು ಐಡಿ ಕಾರ್ಡ್​ಗಳು ಸಿಕ್ಕಿವೆ ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಪವಿತ್ರಾ ಪ್ರಕಟಣೆ ಬಿಡುಗಡೆ ಮಾಡಿದ್ದರು. ಆದರೆ, ವಕೀಲ ಮಂಜುನಾಥ್ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.

ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಮೊದಲನೇ ಸ್ಪಾಟ್‌ನಲ್ಲಿ ಒಂದು ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು ಎಂದಿದ್ದರು.

ಎಸ್‌ಐಟಿ ಖಚಿತಪಡಿಸುವ ಮೊದಲೇ ಮಂಜುನಾಥ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಅಲ್ಲದೇ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿನ ಮಾಹಿತಿಯನ್ನು SIT ಅಲ್ಲಗಳೆದಿದೆ.

5ನೇ ಸ್ಪಾಟ್​ನಲ್ಲಿ ಹುಡುಕಾಟ ಆರಂಭಿಸಿದ ಎಸ್‌ಐಟಿ

ಮೊದಲ ನಾಲ್ಕು ಸ್ಪಾಟ್‌ಗಳಲ್ಲಿ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಎಸ್‌ಐಟಿ ಸಿಬ್ಬಂದಿ 5ನೇ ಸ್ಪಾಟ್‌ನಲ್ಲಿ ಕೂಡ ಹುಡುಕಿದರೂ ಯಾವುದೇ ಕಳೆಬರದ ಕುರುಹುಗಳು ಪತ್ತೆಯಾಗಿಲ್ಲ.

ಎಸ್‌ಐಟಿ ತಂಡ ಒಂದೊಂದು ಸ್ಪಾಟ್‌ನಲ್ಲೂ 6 ಅಡಿಗಳಷ್ಟು ಅಗೆದು ಕಳೇಬರದ ಕುರುಹವನ್ನು ಹುಡುಕಾಟ ನಡೆಸಿದ್ದಾರೆ. ಆರಂಭದಲ್ಲಿ ಮನುಷ್ಯರಿಂದ ಹುಡುಕಾಟ ನಡೆಸಿ ಬಳಿಕ ಹಿಟಾಚಿ ಮೂಲಕ ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟ ಮಾಡಲಾಯಿತು. ಆದ್ರೂ ಕೂಡ ಯಾವುದೇ ಕಳೆಬರದ ಕುರುಹುಗಳು ಪತ್ತೆಯಾಗಿಲ್ವಂತೆ.

ಬುರುಡೆ ತನಿಖೆ ಎಲ್ಲಿಗೆ ಬಂತು?

ಮೊದಲು ನೇತ್ರಾವತಿ ತೀರದಲ್ಲಿ ಸಮಾಧಿ ಅಗೆಲಾಯ್ತು. 15 ಅಡಿ ಅಗಲ 8 ಅಡಿ ಆಳದವರೆಗೂ ಅಗೆದ್ರೂ ಏನೂ ಪತ್ತೆಯಾಗಲಿಲ್ಲ. 2ನೇ ಸ್ಥಳವಾದ ದಟ್ಟಾರಣ್ಯದಲ್ಲಿ 6 ಅಡಿ ಅಗಲ 6 ಅಡಿ ಆಳದವರೆಗೂ ಅಗೆದ್ರೂ ಯಾವುದೇ ಶವ, ಎಲುಬು ಪತ್ತೆಯಾಗಲಿಲ್ಲ. ನೇತ್ರಾವತಿ ಸ್ನಾನಘಟ್ಟ ಬಳಿ ಗುರುತಿಸಿದ್ದ 3ನೇ ಸ್ಥಳದಲ್ಲಿ 6 ಅಡಿ ಅಗಲ, 6 ಅಡಿ ಆಳ ಅಗೆದ್ರೂ ಏನೂ ಪತ್ತೆಯಾಗಲಿಲ್ಲ.

4ನೇ ಸ್ಥಳವಾದ ನೇತ್ರಾವತಿ ಗುಡ್ಡಪ್ರದೇಶದಲ್ಲೂ 6 ಅಡಿ ಅಗೆದರೂ ಶವದ ಯಾವ ಕುರುಹು ಪತ್ತೆಯಾಗಲಿಲ್ಲ. ಅದೇ ಪ್ರದೇಶದಲ್ಲಿ 5ನೇ ಸ್ಥಳದಲ್ಲಿಯೂ ಕೂಡ 6 ಅಡಿ ಅಗಲ, 6 ಅಡಿ ಆಳದವರೆಗೂ ಅಗೆದರೂ ಅಸ್ಥಿಪಂಜರವಾಗಲಿ, ಒಂದು ಮೂಳೆಯಾದ್ರೂ ಪತ್ತೆಯಾಗಲಿಲ್ಲ.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media

Donate Janashakthi Media

Leave a Reply

Your email address will not be published. Required fields are marked *