ಮಕ್ಕಾ ಮತ್ತು ಮದೀನಾದಲ್ಲಿ ಭಾರೀ ಮಳೆ – ರಸ್ತೆಗಳು ಮತ್ತು ಚೌಕಗಳು ಜಲಾವೃತ

ಜೆಡ್ಡಾ: ಸೋಮವಾರದಂದು ಮಕ್ಕಾ ಮತ್ತು ಮದೀನಾ ಪ್ರದೇಶದ ಹೆಚ್ಚಿನ ಭಾಗಗಳು, ವಿಶೇಷವಾಗಿ ಜೆಡ್ಡಾ ನಗರ ಮತ್ತು ಗವರ್ನರೇಟ್‌ನ ಇತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಅನೇಕ ರಸ್ತೆಗಳು ಮತ್ತು ಚೌಕಗಳು ಮಳೆ ನೀರಿನಿಂದ ಜಲಾವೃತಗೊಂಡಿದೆ.

ಪ್ರವಾಹದ ಪರಿಸ್ಥಿತಿ ಮಕ್ಕಾ, ಜೆಡ್ಡಾ ಮತ್ತು ಮದೀನಾ ನಗರಗಳಲ್ಲಿನ ಹೆದ್ದಾರಿಗಳು ಮತ್ತು ಬೀದಿಗಳಲ್ಲಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ – ಇಡೀ ಗ್ರಾಮದ ತುಂಬಾ ದಟ್ಟ ಹೊಗೆ!

ಮದೀನಾ ಪ್ರದೇಶದ ಬದ್ರ್ ಗವರ್ನರೇಟ್‌ನಲ್ಲಿರುವ ಅಲ್-ಶಫಿಯಾ 49.2 ಮಿಮೀ ಮಳೆಯ ಪ್ರಮಾಣವನ್ನು ದಾಖಲಿಸಿದರೆ, ಜೆಡ್ಡಾ ನಗರದ ಅಲ್-ಬಸತೀನ್ ಜಿಲ್ಲೆಯಲ್ಲಿ 38 ಮಿಮೀ ಮಳೆಯೊಂದಿಗೆ ಎರಡನೇ ಅತಿ ಹೆಚ್ಚು ಮಳೆ ದಾಖಲಾಗಿದೆ.

ಮದೀನಾದ ಪ್ರವಾದಿ ಮಸೀದಿಯಲ್ಲಿರುವ ಸೆಂಟ್ರಲ್ ಹರಮ್ ಪ್ರದೇಶದಲ್ಲಿ 36.1 ಮಿಮೀ, ಬದ್ರ್‌ನ ಅಲ್-ಮಸ್ಜಿದ್ 33.6 ಮಿಮೀ, ಕುಬಾ ಮಸೀದಿ 28.4 ಮಿಮೀ, ಸುಲ್ತಾನಾ ನೆರೆಹೊರೆಯಲ್ಲಿ 26.8 ಮಿಮೀ, ಮತ್ತು ಅಲ್-ಸುವೈದ್ರಿಯಾ ಮತ್ತು ಬದ್ರ್‌ನಲ್ಲಿ 23.0 ಮಿಮೀ ದಾಖಲಾಗಿದೆ. ಸಚಿವಾಲಯದ ವರದಿಯ ಪ್ರಕಾರ, ಮಕ್ಕಾ, ಮದೀನಾ, ಖಾಸಿಮ್, ತಬೂಕ್, ಉತ್ತರ ಗಡಿಗಳು ಮತ್ತು ಅಲ್-ಜೌಫ್ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.

ಇದನ್ನೂ ನೋಡಿ: ಬಸ್‌ ‍ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *