ಹಿಮಾಚಲ ಪ್ರದೇಶದಲ್ಲಿ ಭೀಕರ ಮಳೆ:ಕೆಲವುಕಡೆ ಭೂಕುಸಿತ ರಾಷ್ಟ್ರೀಯ ಹೆದ್ದಾರಿ ಬಂದ್‌

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭೀಕರ ಮಳೆ ಸುರಿಯುತ್ತಿದ್ದು,ಹಲವೆಡೆ ಭೂಕುಸಿತ ಸಂಭವಿಸಿದೆ.ಕಿನ್ನೌರ್‌ ಜಿಲ್ಲೆಯ ವಾಂಗ್ವು ಬಳಿ ಭೂಕುಸಿತದಿಂದಾಗಿ ಐದು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹವಾಮಾನ ಇಲಾಖೆ  ಇಂದಿನಿಂದ  ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು  ಮುನ್ಸೂಚನೆ ನೀಡಿದ್ದು ಹಲವು ಜಿಲ್ಲೆಗಳಲ್ಲಿ  ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕಂಗ್ರಾ, ಬಿಲಾಸ್‌ಪುರ್, ಮಂಡಿ, ಚಂಬಾ, ಶಿಮ್ಲಾ, ಕುಲು, ಸೋಲನ್‌ ಮತ್ತು ಸಿರ್‌ಮೌರ್‌ ಜಿಲ್ಲೆಗಳಲ್ಲಿ  ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಉನಾ, ಹಮೀರ್‌ಪುರ್‌,ಲಾಹೌಲ್‌ ಮತ್ತು ಕಿನ್ನೌರ್‌ ಜಿಲ್ಲೆಗಳಲ್ಲಿಯೂ ಸಹ ಅತಿ ಹೆಚ್ಚು ಭಾರಿ ಮಳೆಯಾಗುವ ಸಾಧ್ಯತೆಯಿಂದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ: ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ ಆರ್ಭಟ ಮಹಾರಾಷ್ಟ್ರದ ಹಲವೆಡೆ ಮಳೆಯಾಗುತ್ತಿದೆ. ರಾಯಗಡ ಜಿಲ್ಲೆಯ ಖಾಲಾಪುರ ತಾಲ್ಲೂಕಿ ಇರ್ಶಾಲ್‌ವಾಡಿ ಗ್ರಾಮದಲ್ಲಿ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

ಗುಡ್‌ಚಿರೋಲಿ, ವಾರ್ಧಾ, ಯವತ್ಮಾಲ್‌,  ಕಂಗ್ರಾ, ನಾಗ್ಪುರ ಚಂದ್ರಾಪುರ  ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಿಂಚು ಸಂಭವಿಸುವ ಸಾಧ್ಯತೆ ಇದೆ ಎಂದು  ಹವಾಮಾನ ಇಲಾಖೆ ತಿಸಿದೆ. ಯವತ್ಮಾಲ್‌ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು,ಜನಜೀವನ ಆಸ್ತವ್ಯಸ್ತಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *