ಬೆಂಗಳೂರು: ಕರ್ನಾಟಕ, ಕೇರಳ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದ ಪ್ರಭಾವದಿಂದಾಗಿ ಗುಡುಗು ಮಿಂಚು ಸಹಿತ ಭಾರೀ ಮಳೆ ಅಬ್ಬರಿಸಲಿದೆ. ವಿಚಿತ್ರವೆಂದರೆ ಭಾರೀ ಮಳೆ ಜೊತೆಗೆ ಕೆಲವು ರಾಜ್ಯಗಳು ಉಷ್ಣ ಅಲೆಯ ಮುನ್ಸೂಚನೆ ಪಡೆದಿವೆ. ಬೆಂಗಳೂರು
ಕೆಲವು ಭಾಗಗಳಲ್ಲಿ ಮಳೆ ಸದ್ದೇ ಇಲ್ಲದಾಗಿದ್ದೂ, ಒಣ ಹವೆ ಮುಂದುವರಿದಿದೆ. ಯಾವ ಭಾಗದಲ್ಲಿ ಮಳೆ, ಬಿಸಿಲು ಬರಲಿದೆ ಎಂಬ ಹವಾಮಾನ ವರದಿ ಇಲ್ಲಿದೆ.
ಅಖಿಲ ಭಾರತ ಹವಾಮಾನ ಮುನ್ಸೂಚನೆ ಬಿಡುಗಡೆ ಆಗಿದೆ. ಆದರೆ ಪ್ರಕಾರ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಈ ಕಾರಣಕ್ಕೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಆಗುತ್ತಿದೆ. ಇಲ್ಲಿ ಬಿಸಿಲಿದ್ದರು ಉಷ್ಟ ಅಲೆಯ ಮಟ್ಟಕ್ಕೆ ಇಲ್ಲ. ಸಾಭಾವಿಕವಾಗಿದೆ. ಬೆಂಗಳೂರು
ಇದನ್ನೂ ಓದಿ: ನವದೆಹಲಿ| ಮತ್ತೆ ಯುಪಿಐ ಸರ್ವರ್ ಡೌನ್ ; ಜನರ ಆಕ್ರೋಶ
ಈಶಾನ್ಯ ರಾಜ್ಯಗಳ ಪ್ರದೇಶಗಳಲ್ಲಿ, ಉತ್ತರಾಖಂಡ ರಾಜ್ಯದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ. ಇಲ್ಲಿ ಹಗುರದಿಂದ ಮಧ್ಯಮ ಪ್ರಮಾಣದಲ್ಲಿ ಮಳೆ ಬೀಳಲಿದೆ. ಪಶ್ಚಿಮ ಬಂಗಾಳದ ಕೆಲವು ಭಾಗ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ವಿವಿಧ ಕಡೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಏಪ್ರಿಲ್ 13ರಂದು ಕರ್ನಾಟಕ, ಕೇರಳ, ತಮಿಳುನಾಡು, ಉತ್ತರಾಖಂಡ, ಪೂರ್ವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಜೋರು ಮಳೆ ಸುರಿಯುವ ಲಕ್ಷಣ ಇವೆ. ರಾಜಸ್ಥಾನದಲ್ಲೂ ಇದೀಗ ಮಳೆ ವಿಸ್ತರಿಸಿದೆ. ಮೊದಲು ಕರ್ನಾಟಕ, ತೆಲಂಗಾಣ ಈ ಭಾಗದಲ್ಲಿದ್ದ ಮಳೆ ಇದೀಗ ಪಶ್ಚಿಮ ಬಂಗಾಳ ಕೊಲ್ಲೆ ಕರಾವಳಿಯಿಂದ ಉತ್ತರ ಪ್ರದೇಶದ ವರೆಗೂ ಕ್ರಮೇಣ ವಿಸ್ತರಿಸಿದೆ. ಪೂರ್ವ ಮುಂಗಾರು ಮಳೆ ಮುಂದಿನ ಕೆಲವೇ ದಿನಗಳಲ್ಲಿ ದೇಶ ವ್ಯಾಪಿ ವಿಸ್ತರಣೆ ಆಗಲಿದೆ. ಆಗ ಖಾಖದ ಅಲೆ ಮುನ್ಸೂಚನೆ ಪಡೆದ ರಾಜ್ಯಗಳ ನೆಲ ತಂಪಾಗಲಿವೆ.
ಯಾವ ರಾಜ್ಯಗಳಿಗೆ ತಾಪಮಾನ ಮುನ್ಸೂಚನೆ
ಮುಂದಿನ 48 ಗಂಟೆಯಲ್ಲಿ ದೇಶದ ವಾಯುವ್ಯ ಭಾಗದ ರಾಜ್ಯಗಳಲ್ಲಿ ಒಟ್ಟು 2ಡಿ.ಸೆ.ತಾಪಮಾನ ಇಳಿಕೆ ಆಗಬಹುದು. ನಂತರದ 4-5 ದಿನಗಳಲ್ಲಿ ಮತ್ತೆ ಬಿಸಿಲು ಏರಿಕೆ ಆಗಲಿದೆ. ಮಧ್ಯ ಭಾರತದಲ್ಲಿ ಹೀಗೆ ಉಷ್ಣ ಅಲೆ ಮುಂದುವರಿಯಲಿದೆ. ಪಶ್ಚಿಮ ಭಾರತದಲ್ಲಿ, ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿ.ಸೆ ಇಳಿಕೆ ಆಗುವ ನಿರೀಕ್ಷೆ ಇದೆ. ನಂತರ ಏರಿಳಿಕೆ ಮುಂದುವರಿಯಲಿದೆ. ನಂತರ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಏಪ್ರಿಲ್ 14 ಮತ್ತು 15 ರಂದು ರಾಜಸ್ಥಾನದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಕಂಡು ಬರಬಹುದು. ಏಪ್ರಿಲ್ 15ರ ನಂತರ ಎರಡು ಮೂರು ದಿನ ಗುಜರಾತ್‌ನಲ್ಲಿಯೂ ಬಿಸಿಲಿನ ತಾಪ ಹೆಚ್ಚಾಗಲಿದೆ. ಕಳೆದ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ಅಸ್ಸಾಂ, ಉತ್ತರಾಖಂಡ, ಹಿಮಾಚಲ ಪ್ರದೇಶ, ದೆಹಲಿಯಲ್ಲಿ ಭಾರೀ ಮಳೆ ಆಗಿದೆ.
ಇದನ್ನೂ ನೋಡಿ: RRv/s GT| ಗೆಲುವಿನ ಲಯ ಉಳಿಸಿಕೊಳ್ಳುವವರುಯಾರು? Janashakthi Media