ಬಿಸಿಲಿನ ತಾಪಮಾನಕ್ಕೆ ಕರಗಿದ ಅಬ್ರಹಾಂ ಲಿಂಕನ್‌ ಮೇಣದ ಪ್ರತಿಕೃತಿ

ಅಮೆರಿಕ : ರಾಜಧಾನಿ ವಾಷಿಂಗ್ಟನ್ನಲ್ಲಿ ಬಿಸಿಲಿನ ತಾಪಮಾನ ಏರಿಕೆಗೆ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ಮೇಣದ ಪ್ರತಿಕೃತಿ ಕರಗುತ್ತಿರುವುದು ವರದಿಯಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೇಣದ ಬತ್ತಿಯ ಮೂಲಕ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಒಂದು ವರ್ಷದ ಒಳಗೆ ಅಬ್ರಹಾಂ ಲಿಂಕನ್ ಅವರ ಸ್ಮಾರಕದ ಕೆಲ ಭಾಗ ಕರಗಿ ಹೋಗಿದೆ.

ವರದಿಯ ಪ್ರಕಾರ, ವಾಷಿಂಗ್ಟನ್ ನಲ್ಲಿ ಕಳೆದ ಮೂರು ದಿನಗಳಿಂದ ಉಷ್ಣಾಂಶ ಹೆಚ್ಚಾಗಿದ್ದು, ಲಿಂಕನ್ ಸ್ಮಾರಕದ ತಲೆ ಭಾಗ ಸಂಪೂರ್ಣ ಕರಗಿ ತಂತಿಗಳು ಮಾತ್ರ ಉಳಿದುಕೊಂಡಿದೆ. ಜೊತೆಗೆ ಸ್ಮಾರಕದ ಕಾಲು ಹಾಗೂ ಕುರ್ಚಿಗಳು ಕರಗುವ ಸ್ಥಿತಿಯಲ್ಲಿದೆ.

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮೇಣದ ಬತ್ತಿಯ ಮೂಲಕ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಒಂದು ವರ್ಷದ ಒಳಗೆ ಅಬ್ರಹಾಂ ಲಿಂಕನ್ ಅವರ ಸ್ಮಾರಕದ ಕೆಲ ಭಾಗ ಕರಗಿ ಹೋಗಿದೆ.

ಯುಎಸ್ ಹಲವಾರು ಭಾಗಗಳು ತೀವ್ರತರವಾದ ತಾಪಮಾನವನ್ನು ಕಾಣುತ್ತಿವೆ, ಹವಾಮಾನ ಮುನ್ಸೂಚಕರು ಮಧ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಿಂಗಳು ಬಿಸಿ ಗೆರೆಗಳಿಗೆ ತಯಾರಾಗಲು ಎಚ್ಚರಿಸಿದ್ದಾರೆ. 1936 ರಿಂದ ಎರಡು ದಿನಗಳಿಗಿಂತ ಹೆಚ್ಚು ಕಾಲ ಅಸಹಜವಾದ ಬಿಸಿ ವಾತಾವರಣವನ್ನು ಒಳಗೊಂಡಿರುವ ಶಾಖದ ಅಲೆಗಳ ಅತ್ಯಧಿಕ ಸಂಖ್ಯೆಯ ಅನುಭವ ಯುಎಸ್ಜನರಿಗೆ ಆಗಿದೆ.   ಜನರಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಸೂಚಿಸಿದರು.

 

Donate Janashakthi Media

Leave a Reply

Your email address will not be published. Required fields are marked *