ಬೆಂಗಳೂರು: ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಸಾಲುಮರದ
ಇದನ್ನೂ ಓದಿ:ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ: ರಾಜ್ಯ ಸಚಿವ ಸಂಪುಟ ಸ್ಥಾನಮಾನ
ಈ ಸಂಬಂಧ ಅವರ ದತ್ತು ಪುತ್ರ ಉಮೇಶ್ ವಿಡಿಯೋ ಹಂಚಿಕೊಂಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮೂರು ತಿಂಗಳ ಹಿಂದೆ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ಬೇಲೂರು ಸಮೀಪದ ಬಳ್ಳೂರಿನಲ್ಲಿರುವ ಉಮೇಶ್ ಅವರ ಮನೆಗೆ ತೆರಳಿದ್ದರು.
ಸೆ-26 ರಂದು ಅವರ ಉಸಿರಾಟದಲ್ಲಿ ಏರುಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ರಾತ್ರಿಯಿಂದ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಅ-3 ಮಂಗಳವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ತುಮಕೂರಿನ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ಪತಿಯೊಂದಿಗೆ ಸೇರಿ ಮರಗಳನ್ನು ಬೆಳೆಸಲು ನಿರ್ಧರಿಸಿದ್ದರು. ಆರಂಭಿಕವಾಗಿ ಮೊದಲ ವರ್ಷದಲ್ಲಿ ದಂಪತಿಗಳು 4 ಕಿಮೀ ಉದ್ದದ ಎರಡು ಬದಿಗಳಲ್ಲಿ 10 ಆಲದ ಸಸಿಗಳನ್ನು ನೆಟ್ಟು ಬೆಳೆಸಲು ಆರಂಬಿಸಿದ್ದರು. ಇಲ್ಲಿವರೆಗೂ ತಿಮ್ಮಕ್ಕ ಅವರು 10 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ತಿಮ್ಮಕ್ಕ ಅವರು ಬೆಳೆಸಿರುವ ಮರಗಳು ಲೆಕ್ಕವೇ ಇಲ್ಲದಷ್ಟು ಆಕ್ಸಿಜನ್ ಅನ್ನು ವಾತಾವರಣಕ್ಕೆ ನೀಡುತ್ತಿವೆ.
ವಿಡಿಯೋ ನೋಡಿ:ಕೀಟಗಳನ್ನು ತಿನ್ನುವ ಸಸ್ಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? Janashakthi Media