ಬೆಂಗಳೂರು: ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹಿಳಾ ಪೇದೆಗೆ ಬೂಟುಗಾಲಿನಿಂದ ಒದ್ದ ಆರೋಪ ಹೊರಿಸಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಪೇದೆಗೆ ಅಲ್ಲೇ ಹೆಡ್ ಕಾನ್‌ಸ್ಟೇಬಲ್ ಆಗಿರುವ ಬಿಜಿ ಗೋವಿಂದರಾಜು ಎಂಬುವವರು ಬೂಟುಗಾಲಿನಲ್ಲಿ ಒದ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜೂನ್ 10 ರಂದು ಈ ಘಟನೆ ನಡೆದಿದೆ. ರಾತ್ರಿ ಕಂಪ್ಯೂಟರ್ ವಿಭಾಗದಲ್ಲಿ ಮಹಿಳಾ ಪೇದೆ ರೇಣುಕಾ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಜೂನ್ 17 – ಗಾಜಾದಲ್ಲಿ ಇಸ್ರೇಲಿ ನರಮೇಧವನ್ನು ಖಂಡಿಸಿ ರಾಷ್ಟ್ರೀಯ ಪ್ಯಾಲೆಸ್ಟೈನ್ ಸೌಹಾರ್ದ ದಿನ
ಈ ವೇಳೆ ರೇಣುಕಾ ಮನೆ ಬಿಟ್ಟು ಓಡಿ ಹೋಗಿ ಠಾಣೆ ಸೇರಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಆಗ ಹೆಡ್ ಕಾನ್‌ಸ್ಟೇಬಲ್ ಗೋವಿಂದರಾಜು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ರೇಣುಕಾಗೆ ಗೋವಿಂದರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೇ ಮೂರ್ನಾಲ್ಕು ಬಾರಿ ಬೂಟುಗಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್‌ಸ್ಟೇಬಲ್ ಬಿಜಿ ಗೋವಿಂದರಾಜು ವಿರುದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media