ಸಾಮ್ರಾಜ್ಯಶಾಹಿ ತೊಲಗಿ, ಸಮಾಜವಾದ ಜಾರಿಯಾದರೆ ಶ್ರಮಿಕರಿಗೆ ತಮ್ಮ ಶ್ರಮದ ಪ್ರತಿಫಲ – ಬಸವರಾಜ ಪೂಜಾರ

ಹಾವೇರಿ: ದೇಶದ ಚುಕ್ಕಾಣಿ ಹಿಡಿದಿರುವ ಬಂಡವಾಳಶಾಹಿ ವರ್ಗ ತೊಲಗಲಿ ಸಮಾಜವಾದ ಜಾರಿಯಾಗಬೇಕು ಆಗ ಮಾತ್ರ ಶ್ರಮಿಕರಿಗೆ ತಮ್ಮ ಶ್ರಮದ ಪ್ರತಿಫಲ ಸಿಗಲು ಸಾಧ್ಯವಾಗುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.  ಸಮಾಜ

ನಗರದ ಪರಿವೀಕ್ಷಣಾ ಮಂದಿರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಜಿಲ್ಲಾ ಸಮಿತಿಗಳು ಫೆಬ್ರವರಿ 21ರಂದು ಆಯೋಜಿಸಿದ ಅಂತಾರಾಷ್ಟ್ರೀಯ ಕೆಂಪು ಪುಸ್ತಕ ದಿನದ ಅಂಗವಾಗಿ “ಯು.ಎಸ್.ಸಾಮ್ರಾಜ್ಯಶಾಹಿ ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸಮಾಜ

ಸಮಾನತೆಯ ಪ್ರತಿಪಾದಕರು, ಕಾರ್ಮಿಕರ ಪಿತಾಮಹ ಕಾರ್ಲ್ ಮಾರ್ಕ್ಸ್ ಮತ್ತು ಫೆಡ್ರಿಕ್ ಎಂಗೆಲ್ಸ್ ಕಮ್ಯೂನಿಸ್ಟ್‌ ಪ್ರಣಾಳಿಕೆಯನ್ನು 1948 ಫೆಬ್ರವರಿ 21 ರಂದು ಪ್ರಕಟಿಸಿ ಬಿಡುಗಡೆ ಮಾಡಿದರು. ಅದರ ಭಾಗವಾಗಿ ಅಂದಿನಿಂದ ಇಂದಿನವರೆಗೂ ಚಳುವಳಿಯ ನಾನಾ ಹಾದಿಯಲ್ಲಿ ಕಮ್ಯೂನಿಸ್ಟ್‌ ಸಾಹಿತ್ಯ ಪುಸ್ತಕಗಳು ಬರೆದು ಒಂದುಗೂಡಿಸುವ ಹೋರಾಟದ ಭಾಗವೇ ಕೆಂಪುಪುಸ್ತಕ ದಿನ.

ಇದನ್ನೂ ಓದಿ: ದೇವಸ್ಥಾನದ ಜಾತ್ರೆಯಲ್ಲಿ ಸವರ್ಣೀಯ ಜಾತಿಯ ವ್ಯಕ್ತಿಯಿಂದ ಒದ್ದ ದಲಿತ ಶಿಶು ಸಾವು

ಕೆಂಪುಪುಸ್ತಕ ದಿನದ ಹಿನ್ನೆಲೆಯಲ್ಲಿ ಹಿರಿಯ ಸಂಗಾತಿ ವಸಂತರಾಜ ಎನ್ ಕೆ ಅವರು ಕನ್ನಡದಲ್ಲಿ ಬರೆದ ಯು.ಎಸ್.ಸಾಮ್ರಾಜ್ಯಶಾಹಿ ಪುಸ್ತಕವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿ ಅಮೇರಿಕಾದ ಸಾಮ್ರಾಜ್ಯಶಾಹಿ ನೀತಿಯನ್ನು ಜನರಿಗೆ ಅರ್ಥೈಸಲು ಸಾದ್ಯವಾಗಿದೆ ಎಂದರು.

ಇಡಾರಿ ಸಂಸ್ಥೆ ಮುಖ್ಯಸ್ಥರು ಹಾಗೂ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಸದಸ್ಯರಾದ ಪರಿಮಳ ಜೈನ್ ಮಾತನಾಡಿ, ಕಾರ್ಮಿಕರು ಶ್ರಮಿಸಿ ಸಿದ್ಧಪಡಿಸಿದ ಅನೇಕ ವಸ್ತುಗಳ ಮೇಲೆ ಅಧಿಕಾರ ಇಲ್ಲವಾಗಿಸುವುದೆ ಸಾಮ್ರಾಜ್ಯಶಾಹಿ. ವಸಾಹತುಶಾಹಿಗಳ ಸರ್ವಾಧಿಕಾರ ತಿರಸ್ಕರಿಸಬೇಕಾಗಿದೆ. ಯುವಜನತೆ ಸಾಮ್ರಾಜ್ಯಶಾಹಿ ಪುಸ್ತಕ ಓದಬೇಕು ದೇಶದ ಮೇಲಿನ ಜಾಗತಿಕ ದಬ್ಬಾಳಿಕೆ ತಿಳಿಯಬೇಕಿದೆ ಎಂದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಅಮೆರಿಕಾ ಜೊತೆಗೆ ನಡೆದ ಒಪ್ಪಂದ ರೈತರಿಗೆ ಭಾರಿ ದೊಡ್ಡ ಅನ್ಯಾಯವಾಗಿದೆ. ಅಮೇರಿಕಾದ ಅಧ್ಯಕ್ಷ ಟ್ರಂಪ್ ತನ್ನ ಸರ್ವಾಧಿಕಾರಿ ನೀತಿಗಳಿಂದ ವಿವಿಧ ಸಣ್ಣಪುಟ್ಟ ದೇಶಗಳ ಮೇಲೆ ಪರಿಣಾಮಗಳು ಬಿರುತ್ತವೆ ಅದರ ಎಚ್ಚರಿಕೆಯಿಂದ ನಮ್ಮ ದೇಶದ ಪ್ರಧಾನಿ ಸ್ನೇಹ ಸಂಬಂಧಗಳನ್ನು ಮಾಡಬೇಕು. ಇದರ ಹಿನ್ನಡೆ ಮುನ್ನಡೆಯನ್ನು ಸಾಮ್ರಾಜ್ಯಶಾಹಿ ಪುಸ್ತಕವು ತಿಳಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಿಮ್ಹಾನ್ಸ್ ಸಂಶೋದಕರಾದ ಡಾ. ಶಿವಾನಂದ ಯರೆಸೀಮಿ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ಅರುಣ ನಾಗಾವತ್, ಬಸವರಾಜ ಬಾರ್ಕಿ, ಖಲಂದರ ಅಲ್ಲಿಗೌಡ್ರ, ಬಸನಗೌಡ ಭರಮಗೌಡ್ರ, ಮಧುಕರ್ ಸನದಿ, ಹಿರಿಯರಾದ ರವೀಂದ್ರನಾಥ್ ಭಟ್, ಬಾಲ ಸಂಘಂ ನ ಧನುಷ್ ದೊಡ್ಮನಿ, ಅನ್ವಿಕಾ ಆರ್.ಬಿ ಹಾಗೂ ತೇಜಸ್ ದೊಡ್ಮನಿ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಡಾ. ರಾಮ ಮನೋಹರ ಲೋಹಿಯಾ ವಿಚಾರಧಾರೆ |ಪ್ರೊ. ಗಂಗಾಧರ ಬಿ.ಎಂ Janashakthi Media

Donate Janashakthi Media

Leave a Reply

Your email address will not be published. Required fields are marked *