ಪುಣೆ: ಕಳೆದ ಹತ್ತು ದಿನಗಳಲ್ಲಿ ಕೆಲಸದ ಒತ್ತಡ ಸಹಿಸದೇ ಮೂರನೆಯ ಸಾವು ಸಂಭವಿಸಿದೆ. ಇವೈ ಕಂಪೆನಿಯ ಯುವತಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿ ಕೆಲಸದ ಒತ್ತಡ ತಾಳದೇ ಮೃತಪಟ್ಟಿದ್ದರೆ, ಈಗ ಉತ್ತರ ಪ್ರದೇಶದ ಝಾನ್ಸಿಯ ತರುಣ್ ಸಕ್ಸೇನಾ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್
42 ವರ್ಷದ ತರುಣ್ಬಜಾಜ್ ಫೈನಾನ್ಸ್‌ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅತ್ಯುತ್ತಮ ಪ್ರಯತ್ನ ಮಾಡಿದರೂ ಟಾರ್ಗೆಟ್ ರೀಚ್ ಆಗಲು ಸಾಧ್ಯವಾಗದ ಕಾರಣ ಅಪಾರ ಒತ್ತಡಕ್ಕೆ ಒಳಗಾಗಿರುವುದಾಗಿ ಹೇಳಿ ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬೇರೆ ಕೊಠಡಿಯಲ್ಲಿ ಇರಿಸಿ ತಾವು ಇನ್ನೊಂದು ಕೊಠಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ ಬಸ್‌ನ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ಪ್ರಯಾಣಿಕ
ಐದು ಪುಟಗಳ ಡೆತ್ನೋಟ್ನಲ್ಲಿ ತಮ್ಮ ಸಾವಿನ ಕಾರಣವನ್ನು ತರುಣ್ ಬರೆದಿಟ್ಟಿದ್ದು, ಇದರಲ್ಲಿ ಅಧಿಕಾರಿಗಳ ಬಗ್ಗೆಯೂ ವಿವರಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಟಾರ್ಗೆಟ್ ಪೂರೈಸುವಂತೆ ಮೇಲಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ರೆ ಸಂಬಳ ಕಟ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಏನು ಮಾಡಿದರೂ ನನಗೆ ಟಾರ್ಗೆಟ್ ರೀಚ್ ಆಗಲು ಸಾಧ್ಯವಾಗುತ್ತಿಲ್ಲ.
ನನ್ನ ಸಾವಿಗೆ ಕಂಪೆನಿಯ ಇಬ್ಬರು ಅಧಿಕಾರಿಗಳನ್ನು ಹೊಣೆಗಾರರು ಎಂದು ಅದರಲ್ಲಿ ಅವರು ಉಲ್ಲೇಖಿಸುರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಬಜಾಜ್ ಫೈನಾನ್ಸ್ ಸಾಲಗಳ ಇಎಂಐ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು.
ಆದರೆ ಹಲವಾರು ಸಮಸ್ಯೆಗಳಿಂದಾಗಿ ಟಾರ್ಗೆಟ್ ರೀಚ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ವರುಣ್ ತನ್ನ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದರಂತೆ. ಈ ಹಿನ್ನಲೆ ಹಿರಿಯ ಅಧಿಕಾರಿಗಳು ಪದೇ ಪದೇ ಅವಮಾನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ನೋಡಿ: ಸೌಹಾರ್ದ ಕೆಡಿಸುತ್ತಿರುವುದೇ ಸರ್ಕಾರಗಳು: ಕವಿ ಮೂಡ್ನಾಕೂಡು ಚಿನ್ನಸ್ವಾಮಿJanashakthi Media