ಮಂಡ್ಯ: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಎನ್ಡಿಎ ಒಕ್ಕೂಟ ಸೇರಿರುವ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಬೆಂಬಲಿಗರು ಬಿಜೆಪಿ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದು, ಏಪ್ರಿಲ್ 6 ರಿಂದ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನಾನು ಹಾಸನದಲ್ಲಿ ಹುಟ್ಟಿದರು, ರಾಮನಗರ ಬೆಳೆದಿದ್ದರೂ ಸಹ, ರಾಜಕೀಯ ಶಕ್ತಿ ಕೊಟ್ಟಿದ್ದು ಮಂಡ್ಯದ ಜನ. ನಮ್ಮನ್ನು ಬಿಟ್ಟುಹೋಗಿರುವ ಕೆಲವರು ಈ ಭಾಗಕ್ಕೆ ನಾನು ಏನು ಮಾಡಿದ್ದೇನೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಈ ಹಿಂದೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹೋಗಿರುವ ಬಗ್ಗೆ ಪ್ರಸ್ತಾಪಿಸಿದರು. ಎಂಎಲ್‌ಎ ಆಗಿದ್ದಾಗ ಅನೇಕ ಯೋಜನೆಗಳನ್ನು ನೀಡಿದ್ದೇನೆ. ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕೈಲಾದ ಸಹಾಯ ಮಾಡಿದ್ದೇನೆ. 2018 ರಲ್ಲಿ ಸಂಪೂರ್ಣ ಬಹುಮತದ ಸರ್ಕಾರ ಇರಲಿಲ್ಲ.
ಇದನ್ನು ಓದಿ : ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಾತಿನಿಧ್ಯ ಇಲ್ಲ ; ಆ ಕಾರಣಕ್ಕಾಗಿ ತಾರತಮ್ಯ – ದಿನೇಶ್ ಗುಂಡೂರಾವ್
ಹೀಗಾಗಿ ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡಲು ಬಿಡಲಿಲ್ಲ. ನನ್ನ ಆರೋಗ್ಯ ಸರಿಯಿಲ್ಲಾ ಎಂದು ದೇವೇಗೌಡರು ಹೇಳಿದ್ದರೂ ಸಹ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಹೈಕಮಾಂಡ್ ಮೇಲೆ ಒತ್ತಡ ಹೇರಿ ಸಿಎಂ ಆಗುವಂತೆ ನನ್ನನ್ನು ಒತ್ತಾಯಿಸಿದ್ದರು. ಭಾಗ್ಯದ ಯೋಜನೆಗಳನ್ನು ನಿಲ್ಲಿಸಿಬಾರದೆಂದು ತಾಕೀತು ಮಾಡಿದ್ದರು. 25 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದ್ದೇನೆ.ರೈತರು ಸಂಕಷ್ಟದಲ್ಲಿ ಇದ್ದಾಗ ನಾನು ಸಿಎಂ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ. ರೈತರ ಸಾಲ ಮನ್ನಾ ಮಾಡಿದಾಗ ನಾನು ಕೇಂದ್ರದ ಮೋದಿ ಸರ್ಕಾರಕ್ಕೆ ತೆರಿಗೆ ಹಣ ಕೇಳಲಿಲ್ಲ. ಆದರೆ, ಈಗ ಸಿದ್ದರಾಮಯ್ಯ ಕೇಂದ್ರವನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು.ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರು. ಕಾವೇರಿ ಉಳಿಸಲು ಕಾಂಗ್ರೆಸ್ ಏನನ್ನು ಕೊಡುಗೆ ನೀಡಿದೆ? ಮೇಕೆದಾಟು ಯೋಜನೆಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಶ್ರೀರಂಗಪಟ್ಟಣದಲ್ಲಿ ಕಬ್ಬು ಒಣಗಿದೆ. ಕಬ್ಬು ಒಣಗಲು ಯಾರು ಕಾರಣ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದರು? ನೀರು ಕೊಡಲು ಯೋಗ್ಯತೆ ಇಲ್ಲ. ಆದರೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದು, ಭತ್ತ ನಾಡಿ ಮಾಡಬಾರದು ಎಂದು ಕೃಷಿ ಸಚಿವರು ಹೇಳುತ್ತಿರುವುದೇ ಈ ಸರ್ಕಾರ ಮಂಡ್ಯ ಜನಕ್ಕೆ ನೀಡಿದ ಕೊಡುಗೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಬರಗಾಲದಿಂದ ನಷ್ಟ ಆಗಿರುವವರಿಗೆ 600 ಕೋಟಿ ಕೊಟ್ಟಿದ್ದಾರೆ. ಎಕರೆಗೆ 2 ಸಾವಿರ ನಮ್ಮ ರೈತರು ಬಿಕ್ಷೆ ಕೇಳುತ್ತಾ ಇದ್ದೀರಾ? ಗ್ಯಾರಂಟಿ ಯೋಜನೆಗಳಿಗೆ ಸಾಲ ಮಾಡಿಕೊಂಡಿದ್ದೀರಾ. ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಆ ಸಾಲವನ್ನು ಜನರ ಮೇಲೆ ಹಾಕಿರುವುದು ಇವರ ಘನಕಾರ್ಯವಾಗಿದೆ ಎಂದು ಲೇವಡಿ ಮಾಡಿದರು. ನಮ್ಮ ಏಳು ಬಿಳುಗಳಲ್ಲಿ ಕಷ್ಟ ಸುಖದಲ್ಲಿ ಭಾಗಿಯಾಗಿರುವ ಲಕ್ಷಾಂತರ ಜನತೆಗೆ ತಂದೆ ತಾಯಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಹುಶಃ ನಿಮ್ಮ ನಿರೀಕ್ಷೆಗೆ ವಾಹನ ನೀಡಲು ಆಗಿಲ್ಲ. ನಮ್ಮ ಕಾರ್ಯಕರ್ತ ,ಮುಖಂಡರಿಗೆ ವಾಹನ ವ್ಯವಸ್ಥೆ ಮಾಡಲು ಆಗದೇ ಇರಲು ಕ್ಷಮೆ ಕೇಳಿದರು.
ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ