ಬೆಂಗಳೂರು:ಲೈಂಗಿಕ ಹತ್ಯಾಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನಿಗೆ ಕೈಮುಗಿದು ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ತಮ್ಮ ಹಾಗೂ ಹೆಚ್ಡಿ ದೇವೇಗೌಡರ ಮೇಲೆ ಗೌರವ ಇದ್ದರೆ 24 ಇಲ್ಲವೇ 48 ಗಂಟೆಯೊಳಗೆ ಶರಣಾಗು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹೀಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಈ ಕೇಸ್ನಲ್ಲಿ ನನ್ನ ಹಾಗೂ ದೇವೇಗೌಡರನ್ನ ತಾಳೆ ಹಾಕಿದ್ದಾರೆ ಪ್ರಜ್ವಲ್ ಯಾರದೋ ಸಲಹೆ ಮೇರೆಗೆ ಕಳೆದ ತಿಂಗಳು 22 ರಂದೇ ಹೇಳದೇ ಕೇಳದೆ ವಿದೇಶಕ್ಕೆ ಹೋಗಿದ್ದಾರೆ. ಒಂದು ವಾರದಲ್ಲಿ ಬಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದರೂ ತನಿಖಾ ಸಂಸ್ಥೆ ಕೇಳಿಲ್ಲ. ಇದರ ನಡುವೆ ರೇಪ್ ಕೇಸ್ ಎಂದೆಲ್ಲಾ ಹೇಳಿದ್ದರಿಂದ ಪ್ರಜ್ವಲ್ ವಾಪಸ್ ಬರೋಕೆ ಹಿಂದೇಟು ಹಾಕಿರಬಹುದು. ಪ್ರಜ್ವಲ್ ಇಲ್ಲಿ ಬಂದು ತನಿಖೆಗೆ ಸಹಕಾರ ಕೊಡಲಿ ಎಂದೇ ಹೇಳುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಮೇ 30 ರಂದು ಬೃಹತ್ ಪ್ರತಿಭಟನೆ
ನಮ್ಮ ಕುಟುಂಬದ ಮೇಲಿನ ಆರೋಪಗಳಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಬಹಳ ನೊಂದಿದ್ದಾರೆ. ಅವರು ಇಷ್ಟೊತ್ತಿಗೆ ರಾಜ್ಯಸಭೆಗೆ ರಾಜೀನಾಮೆ ಕೊಡುತ್ತಿದ್ದರು. ಆದರೆ ಇದರಿಂದ ರಾಜ್ಯಕ್ಕೆ ನಷ್ಟ ಎಂದು ನಾನು ಅವರ ಮನವೊಲಿಸಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ ರಾಜ್ಯದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಪರಿಹಾರ ಸಿಗುವವರೆಗೂ ನೀವು ಇರಬೇಕು ಎಂದಿದ್ದೇನೆ ಎಂದುಈ ನೆಲದ ಕಾನೂನು ಇದೆ, ಯಾಕೆ ಹೆದರಬೇಕು? ಎಷ್ಟು ದಿನ ಕಳ್ಳ ಪೊಲೀಸ್ ಆಟ? ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡು. ಪದ್ಮನಾಭ ನಗರಕ್ಕೆ ನಾನು ಪ್ರಜ್ವಲ್ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ-ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೊಗುತ್ತೇನೆ. ನಾನು ತಂದೆಗೆ ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲೆ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡಲು ಹೇಳಿದ್ದೇನೆ ಎಂದರು.