ಹಜರತ್ ಟಿಪ್ಪು ಸುಲ್ತಾನರು ಕನ್ನಂಬಾಡಿ ಅಥವಾ ಕೃಷ್ಣರಾಜಸಾಗರ ಅಣೆಕಟ್ಟಿಗೆ ಶಂಕುಸ್ಥಾಪನೆ

ಕರುನಾಳುವಾದ ಭಗವಂತನ ಹೆಸರಿನಲ್ಲಿ ಸ್ಥಾಪಿತವಾದದ್ದು
ಪೈಗಂಬರ ಮೊಹಮ್ಮದರ ಜನುಮದಿಂದಿಂದ ಪ್ರಾರಂಭವಾದ ಸಾರಮಾನ ಶಖೆಯ ಸಾವಿರದ ಇನ್ನೂರ ಇಪ್ಪತ್ತೊಂದನೆಯ ಸಂವತ್ಸರದ ಷಾದಾಬ್ ಶುಭವರ್ಷದ ತಕಿ ಮಾಸದ ಇಪ್ಪತ್ತೊಂಬತ್ತನೆಯ ತೇದಿಯಾದ ಸೋಮವಾರ ಶುಭ ದಿವಸ ಸೂರ್ಯೋದಯ ಪೂರ್ವ ಅರುಣೋದಯ ಕಾಲದಲ್ಲಿ ಶುಕ್ರ ಗ್ರಹ ಬಲಯುಕ್ತವಾದ ವೃಷಭ ಲಗ್ನದಲ್ಲಿ ಭಗವಂತನ ಛಾಯಾ ಸ್ವರೂಪದ ಹಜರತ್ ಟಿಪ್ಪು ಸುಲ್ತಾನರಾದ ನಾವು ಇಷ್ಟಾರ್ಥ ಪ್ರದಾಯಕನಾದ ಭಗವಂತನ ಕೃಪೆಯಿಂದಲೂ ಪವಿತ್ರವಾದ ಖಲೀಫ್ ಪದವಿಯಲ್ಲಿದ್ದು, ಜಗತ್ತಿಗೆ ಸಾರ್ವಭೌಮ ಪ್ರಾಯರಾಗಿದ್ದ ಪೈಗಂಬರ ಮೊಹಮ್ಮದರ ಪ್ರೇರಣಾ ರೂಪವಾದ ದಿವೈಸಹಾಯದಿಂದಲೂ ರಾಜಧಾನಿಗೆ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಸ್ಥಿರಸ್ಥಾಯಿಯಾದ ಅಣೆಯನ್ನು ಕಟ್ಟಿಸಲು ಶಂಕು ಸ್ಥಾಪನೆ ಮಾಡಿದ್ದೇವೆ. ಕನ್ನಂಬಾಡಿ

ಅರುಣ್ ಜೋಳದ ಕೂಡ್ಲಿಗಿ

ಈ ಕಾರ್ಯವು ಪ್ರಾರಂಭವಾದದ್ದು ನಮ್ಮಿಂದ ಇದು ಪೂರೈಸುವಂತೆ ಅನುಗ್ರಹಿಸುವುದು ಭಗವಂತನ ಅಧೀನದಲ್ಲಿದೆ. ಈ ಕಾರ್ಯವು ಪ್ರಾರಂಭವಾದ ದಿವಸ ಸೂರ್ಯ ಚಂದ್ರರು ಶುಕ್ರನೂ ಗುರುವೂ ಶುಭಯೋಗ ಉಂಟಾಗುವಂತೆ ಸೇರಿ ಫಲದಾಯಕ ರಾಗಿದ್ದಾರೆ. ಕನ್ನಂಬಾಡಿ

ಇಲ್ಲಿ ನಿರ್ಮಿಸಲ್ಪಡುವ ಆಣೆಕಟ್ಟೆಯು ಸರ್ವೇಶ್ವರನಾದ ಭಗವಂತನ ಅನುಗ್ರಹದಿಂದ ಧ್ರುವ ನಕ್ಷತ್ರ ಮಂಡಲೋಪಾದಿಯಲ್ಲಿ ಶಾಶ್ವತವಾಗಿ ನಿಲ್ಲಲಿ. ಜಗನ್ನಿಯಮಕನಾದ ಭಗವಂತನ ಅನುಗ್ರಹದಿಂದ ದೊರಕಿರುವ ನಮ್ಮ ಸರಕಾರವು ವೆಚ್ಚ ಮಾಡಿರತಕ್ಕ ಲಕ್ಷೋಪಲಕ್ಷ ಧನವು ಸಹ ಭಗವತ್ಪಾದಾಶೀರ್ವಾದವಾಗಿಯೇ ಹೆಚ್ಚು ಮಾಡಲ್ಪಟ್ಟಿದೆ. ಕನ್ನಂಬಾಡಿ

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳ ಹಲವು ಭಾಗಗಳು ಪತ್ತೆ

ಹಿಂದೆ ಕೃಷಿಯಿಯಾಗಗದ ಈ ಭೂಮಿಯನ್ನು ಯಾವ ಮನುಷ್ಯನು ವ್ಯವಸಾಯ ಮಾಡಿ ಧಾನ್ಯವನ್ನಾಗಲಿ ಇತರ ಬೆಳೆಯನ್ನಾಗಲಿ ಬೆಳೆಯುತ್ತಾನೊ ಅಂತ ಮನುಷ್ಯನು ಈ ಮೊದಲೇ ಕೃಷಿಯಾಗುತ್ತಿರುವ ಜಮೀನುಗಳ ರೈತರು ನಮ್ಮ ಸರಕಾರಕ್ಕೆ ಕೊಡುವ ತೆರಿಗೆಯ ಮುಕ್ಕಾಲು ಭಾಗದಷ್ಟನ್ನು ಮಾತ್ರ ಕೊಟ್ಟರೆ ಸಾಕು ಉಳಿದ ಕಾಲು ಭಾಗವನ್ನು ಭಗವತೀರ್ತ್ಯವಾಗಿ ಧರ್ಮಕ್ಕೆ ಬಿಟ್ಟಿದೆ.

ಹೊಸದಾಗಿ ಭೂಮಿಯನ್ನು ಸಾಗುವಳಿ ಮಾಡುವವರೆಲ್ಲರೂ ಪುತ್ರ ಪಾತ್ರಿ ಪಾರಂಪರ್ಯವಾಗಿ ಆ ಚಂದ್ರಾರ್ಕವಾಗಿ ಅವರವರ ಭೂ ಸ್ಥಿತಿಯನ್ನು ಅನುಭವಿಸಿಕೊಂಡು ಬರಬಹುದಾಗಿದೆ.

ಶಾಶ್ವತವಾಗಿ ಕೊಟ್ಟಿರುವ ಈ ಕೊಡುಗೆಗೆ ಯಾವ ಮನುಷ್ಯನಾದರೂ ವಿಘ್ನಚರಣೆಮಾಡಿದರೆ ಅಥವಾ ಅದನ್ನು ತಪ್ಪಿಸಿದರೆ ಅಂತ ಕ್ರೂರಾತ್ಮನು ಪಾಪಿಷ್ಟನಾದ ಸೈತಾನನೋಪಾದಿಯಲ್ಲಿ ಮನುಷ್ಯ ವರ್ಗಕ್ಕೆ ಶತ್ರುವೆಂದು ಭಾವಿಸಲ್ಪಡುವನು ಅವನು ಇಲ್ಲಿಯ ರೈತರಿಗೆ ಮಾತ್ರವೆ ಅಲ್ಲದೆ ಅಖಿಲ ಜಗತ್ತಿಗೂ ದ್ರೋಹ ಮಾಡಿದವನೆಂದು ಭಾವಿಸಲ್ಪಡುವನು.

ಇದನ್ನೂ ನೋಡಿ: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳು ಮತ್ತು ಪರಿಹಾರ Janashakthi Media | DYFI

Donate Janashakthi Media

Leave a Reply

Your email address will not be published. Required fields are marked *